ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಎಸ್‌ಜೆಸಿಇ ಕಾಲೇಜು ವತಿಯಿಂದ ಡಿ.13ರಂದು ರಂದು ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಆಯೋಜಿಸಲಾಗಿದೆ ಎಂದು ಕುಲಸಚಿವ ಡಾ.ಎಸ್.ಎ.ಧನರಾಜ್ ತಿಳಿಸಿದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಸುವರ್ಣ ಮಹೋತ್ಸವ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಡಿ.13ರಂದು ಬೆಳಗ್ಗೆ 10ಕ್ಕೆ ವಿವಿಯ ಗೋಲ್ಡನ್ ಜ್ಯುಬಿಲಿ ಭವನ ಸಿಎಸ್, ಐಎಸ್ ಸೆಮಿನಾರ್ ಹಾಲ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಗ್ಯ ಸೇವೆಯಲ್ಲಿ ಸಾಮಾಜಿಕ ನಾವೀನ್ಯತೆ, ಸ್ಮಾರ್ಟ್ ಮೂಲಸೌಕರ್ಯದೊಂದಿಗೆ ವ್ಯಾಪಾರ ಉತ್ಪನ್ನಗಳು ವಿಷಯದ ಮೇಲೆ ಇದು ನಡೆಯಲಿದೆ. ಇದಕ್ಕೆ ಹ್ಯಾಕ್‌ಎಲೈಟ್ ಎಂದು ಹೆಸರಿಸಲಾಗಿದೆ. 284 ತಂಡಗಳು ನೋಂದಾಯಿಸಿಕೊಂಡಿದ್ದವು. 30 ತಂಡಗಳು ಆಯ್ಕೆಯಾಗಿ, ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ವಿಜೇತ ತಂಡಗಳಿಗೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.