ನ್ಯೂಸ್

ರಾಷ್ಟಿçÃಯ ಹೆದ್ದಾರಿಗಳಲ್ಲಿ ನಿರ್ಮಾಣಗೊಂಡಿರುವ ಅಂಡರ್‌ಪಾಸ್‌ಗಳು ಅವೈಜ್ಞಾನಿಕ / ಮಳೆ ನೀರು ಹೊರ ಹೋಗುತ್ತಿಲ್ಲ / ರಾತ್ರಿ ವೇಳೆ ವಿದ್ಯುತ್ ದೀಪಗಳಿಲ್ಲ / ಕುಡುಕರ ತಾಣಗಳಾಗಿರುವ ಅಂಡರ್‌ಪಾಸ್‌ಗಳು

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಬೆಂಗಳೂರು-ಚೆನೈ ರಾಷ್ಟಿçÃಯ ಹೆದ್ದಾರಿ ಎನ್.ಎಸ್.೭೫ ರಲ್ಲಿ ಸಾರ್ವಜನಿಕರ ಓಡಾಟಕ್ಕಾಗಿ ನಿರ್ಮಿಸಿರುವ ಅಂಡರ್‌ಪಾಸ್‌ಗಳು ಅವೈಜ್ಞಾನಿಕವಾಗಿದ್ದು, ಮಳೆ ನೀರು ಹೊರ ಹೋಗದೆ ಅಂಡರ್‌ಪಾಸ್‌ಗಳಲ್ಲಿಯೇ ನಿಲ್ಲುವಂತಾಗಿದೆ. ಇದರ ಜೊತೆಗೆ ವಿದ್ಯುತ್ ದೀಪಗಳು ಅಳವಡಿಸದೇ ಇರುವುದರಿಂದ ರಾತ್ರಿ ವೇಳೆ ದ್ವಿಚಕ್ರ ವಾಹನ ಹಾಗೂ ಸಾರ್ವಜನಿಕರು ಓಡಾಡಲು ಕಿರಿಕಿರಿ ಉಂಟಾಗಿದೆ. ಹಾಗೂ ಕುಡುಕರ ತಾಣಗಳು ಆಗಿ ಮಾರ್ಪಟ್ಟಿವೆ.

ಬೆಂಗಳೂರು-ಚೆನೈ ರಾಷ್ಟಿçÃಯ ಹೆದ್ದಾರಿಯ ಮುಳಬಾಗಿಲಿನ ನಂಗಲಿ ಗ್ರಾಮದಿಂದ ಕೋಲಾರ, ಹೊಸಕೋಟೆ ಮಾರ್ಗವಾಗಿ ಹೋಗುವ ರಾಷ್ಟಿçÃಯ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಗ್ರಾಮಗಳ ಬಳಿ ಜನತೆ ರಸ್ತೆ ದಾಟಲು ಅನುಕೂಲಕ್ಕಾಗಿ ಅಂಡರ್‌ಪಾಸ್‌ಗಳ ನಿರ್ಮಾಣ ಮಾಡಲಾಗಿದೆ.

ಅಂಡರ್‌ಪಾಸ್‌ಗಳು ನಿರ್ಮಾಣ ಮಾಡುವಲ್ಲಿ ವೈಜ್ಞಾನಿಕ ಪದ್ಧತಿ ಅನುಸರಿಸದ ಕಾರಣ ಮಳೆ ಬಂದರೆ ನೀರು ಅಂಡರ್‌ಪಾಸ್‌ಗಳಲ್ಲಿ ನಿಲ್ಲುವಂತಾಗಿದೆ. ನೀರು ಹೊರ ಹೋಗಲು ಕಾಲುವೆ ವ್ಯವಸ್ಥೆ ಮಾಡದೇ ಇರುವುದರಿಂದ ಒಂದು ಬಾರಿ ಮಳೆ ಬಂದರೆ ಒಂದು ತಿಂಗಳಾದರೂ ನೀರು ಕೆರೆಯಂತೆ ನಿಂತು ಸಾರ್ವಜನಿಕರು ಓಡಾಡಲು ತೊಂದರೆ ಅನುಭವಿಸುವಂತಾಗಿದೆ.

ಅAಡರ್‌ಪಾಸ್‌ಗಳ ಮುಂಭಾಗ ಮತ್ತು ಒಳಭಾಗದಲ್ಲಿ ವಿದ್ಯುತ್ ದೀಪಗಳು ಅಳವಡಿಸದೇ ಇರುವುದರಿಂದ ರಾತ್ರಿ ವೇಳೆ ದ್ವಿಚಕ್ರವಾಹನ ಗಾರರು ಹಾಗೂ ಒಬ್ಬಂಟಿಯಾಗಿ ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ. ರಾತ್ರಿ ವೇಳೆ ಕುಡುಕರು ಇದನ್ನು ಗುಂಡು ಪಾರ್ಟಿ ಮಾಡಲು ಉಪಯೋಗಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ರಾತ್ರಿ ವೇಳೆ ಅಂಡರ್‌ಪಾಸ್‌ಗಳಲ್ಲಿ ಓಡಾಡುವುದನ್ನು ಬಿಟ್ಟಿದ್ದಾರೆ.

ಹೈವೇ ರಸ್ತೆಯಲ್ಲಿ ಪೋಲಿಸ್ ಗಸ್ತು ವಾಹನಗಳು ಓಡಾಡುತ್ತಿರುವುದರಿಂದ ಗುಂಡು ಪ್ರಿಯರು ಅಂಡರ್‌ಪಾಸ್‌ಗಳಲ್ಲಿ ಪಾರ್ಟಿಗಳನ್ನು ನಡೆಸಿ ಮದ್ಯದ ಅಮಲಿನಲ್ಲಿ ರಾತ್ರಿ ವೇಳೆ ಬರುವ ದ್ವಿಚಕ್ರ ವಾಹನಗಳನ್ನು ತಡೆದು ಅವರ ಬಳಿ ಇರುವ ಹಣ ಮತ್ತು ಬಂಗಾರವನ್ನು ಕಸಿದುಕೊಳ್ಳುವಂತಹ ಕೆಲಸಗಳು ನಡೆಸುತ್ತಿದ್ದಾರೆ.

ಅಂಡರ್‌ಪಾಸ್‌ಗಳ ಸುತ್ತಲು ಗಿಡಗಂಟೆಗಳು ಬೆಳೆದಿರುವುದರಿಂದ ರಾತ್ರಿ ವೇಳೆ ಹೊಸದಾಗಿ ರಾಷ್ಟಿçÃಯ ಹೆದ್ದಾರಿಯಿಂದ ಗ್ರಾಮಗಳೊಳಗೆ ಪ್ರವೇಶ ಮಾಡುವವರಿಗೆ ಅಂಡರ್‌ಪಾಸ್ ಯಾವುದು ಎಂಬುವುದು ಗೊತ್ತಾಗದಂತಹ ಪರಿಸ್ಥಿತಿಯು ನಿರ್ಮಾಣವಾಗಿದೆ.

ಬಾಕ್ಸ್

ಕೋಲಾರ ತಾಲ್ಲೂಕು ಅರಾಭಿಕೊತ್ತನೂರು, ಚುಂಚದೇನಹಳ್ಳಿ, ಅಂಡರ್‌ಪಾಸ್‌ಗಳು ಸೇರಿದಂತೆ ಕೋಲಾರದಿಂದ ಮುಳಬಾಗಿಲು ತಾಲ್ಲೂಕು ನಂಗಲಿ ತನಕ ನಿರ್ಮಾಣವಾಗಿರುವ ಅಂಡರ್‌ಪಾಸ್‌ಗಳು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ರಾತ್ರಿ ವೇಳೆ ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ.

ಕೋಟ್

ಅರಾಭಿಕೊತ್ತನೂರು ಬಳಿ ಇರುವ ಅಂಡರ್‌ಪಾಸ್‌ನಲ್ಲಿ ಹಗಲು ವೇಳೆಯೇ ಓಡಾಡಲು ಕಷ್ಟ ಆಗಿದೆ. ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊAಡು ರಸ್ತೆಯ ಸುತ್ತಮುತ್ತಲು ಗಿಡಗಂಟೆಗಳು ಬೆಳೆದಿರುವುದರಿಂದ ರಸ್ತೆ ಕಾಣದಂತೆ ಆಗಿದೆ. ಹಾಗೂ ಭಯದ ವಾತಾವರಣ ನಿರ್ಮಾಣಗೊಂಡಿದೆ. ನರಸಾಪುರ ಕೈಗಾರಿಕಾ ಪ್ರಾಂಗಣಕ್ಕೆ ಕೆಲಸಕ್ಕೆ ಹೋಗಿ ಕಂಪನಿ ಬಸ್ಸುಗಳಿಂದ ಕೆಲಸ ಮುಗಿಸಿ ಗ್ರಾಮಕ್ಕೆ ಬರುವವರು ರಾತ್ರಿ ವೇಳೆ ಅಂಡರ್‌ಪಾಸ್‌ನಿAದ ಗ್ರಾಮಕ್ಕೆ ಬರಲು ಹರಸಾಹಸ ಪಡುವಂತಾಗಿದೆ. ಇತ್ತೀಚೆಗೆ ಮಹಿಳೆಯರು ಕಂಪನಿಗಳಿಗೆ ಹೋಗುತ್ತಿರುವುದರಿಂದ ಅಂಡರ್‌ಪಾಸ್ ಮೂಲಕ ನಡೆದು ಗ್ರಾಮಕ್ಕೆ ಬರಲು ಕಷ್ಟ ಆಗಿದ್ದು, ರಾಷ್ಟಿçÃಯ ಹೆದ್ದಾರಿಯನ್ನೇ ದಾಟಿ ಬರುವಂತಹ ಪರಿಸ್ಥಿತಿಯು ನಿರ್ಮಾಣವಾಗಿದೆ.

-ರಾಜಶೇಖರ್, ವಿದ್ಯಾರ್ಥಿ, ಅರಾಭಿಕೊತ್ತನೂರು.

ಕೋಟ್

೨೦ ವರ್ಷಗಳ ಹಿಂದೆ ರಾಷ್ಟಿçÃಯ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಳೆಯ ಪ್ರಾಜೆಕ್ಟ್ ಪ್ರಕಾರ ಅಂಡರ್‌ಪಾಸ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ವೈಜ್ಞಾನಿಕವಾಗಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಹಿಂದೆ ಇದ್ದ ಸಂಸದ ಎನ್.ಮುನಿಸ್ವಾಮಿ ಅಂಡರ್‌ಪಾಸ್‌ಗಳನ್ನು ಸರಿಪಡಿಸುವಂತೆ ಸೂಚಿಸಿದ್ದಾರೆ. ಎಲ್ಲಾ ಅಂಡರ್ ಪಾಸ್‌ಗಳಿಗೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಹಾಗೂ ಸ್ವಚ್ಛತೆಯನ್ನು ಮಾಡಲು ಹೈವೇ ಅಥಾರಿಟಿ ಪ್ರಾಜೆಕ್ಟ್ನವರಿಗೆ ಸೂಚಿಸಲಾಗುವುದು.

-ಜಯಕುಮಾರ್, ರಾಷ್ಟಿçÃಯ ಹೆದ್ದಾರಿ ಪ್ರಾಜೆಕ್ಟ್ ಅಧಿಕಾರಿ.

ಚಿತ್ರ ೦೫ ಕೆ.ಎಲ್.ಆರ್. ೦೧ : ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಬಳಿ ರಾಷ್ಟಿçÃಯ ಹೆದ್ದಾರಿಯ ಬಳಿ ನಿರ್ಮಿಸಿರುವ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿರುವುದು. ಹಾಗೂ ವಿದ್ಯುತ್ ದೀಪ ಅಳವಡಿಸದೇ ಇರುವುದು. ಮತ್ತು ಸ್ವಚ್ಛತೆ ಕಾಣದೇ ಇರುವುದು.

ಚಿತ್ರ ೦೫ ಕೆ.ಎಲ್.ಆರ್. ೦೧ಎ : ರಾಜಶೇಖರ್, ವಿದ್ಯಾರ್ಥಿ, ಅರಾಭಿಕೊತ್ತನೂರು ರವರ ಭಾವಚಿತ್ರ