ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವೆಂಕಟೇಶ್ ಗೆಲುವು ಸಾಧಿಸುತ್ತಿದ್ದಂತೆ ರಾವಂದೂರಿನಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.  
ನ್ಯೂಸ್

ರಾವಂದೂರಿನಲ್ಲೂ ಕೈ ಕಾರ್ಯಕರ್ತರ ಸಂಭ್ರಮ

ರಾವಂದೂರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವೆಂಕಟೇಶ್ ಗೆಲುವು ಸಾಧಿಸುತ್ತಿದ್ದಂತೆ ಶನಿವಾರ ರಾವಂದೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.


ಕೆ.ವೆಂಕಟೇಶ್ ಅವರ ಗೆಲುವು ಪ್ರಕಟವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಜಯಕಾರ ಕೂಗುತ್ತ ಸಿಹಿ ಹಂಚಿ ಸಂಭ್ರಮಿಸಿದರು.
ಕಾಂಗ್ರೆಸ್ ಯುವ ಮುಖಂಡ ಡಿ.ಎಸ್.ನಂದೀಶ್ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಬಾರಿ ಕಾಂಗ್ರೆಸ್‌ಗೆ ಜನರು ಬೆಂಬಲ ವ್ಯಕ್ತಪಡಿಸುವುದರ ಮೂಲಕ ಕೆ.ವೆಂಕಟೇಶ್ ಅವರನ್ನು ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.


ಮುಖಂಡರಾದ ಜಗದೀಶ್, ರಾಮೇಗೌಡ, ಕೀರ್ತಿ, ಮಂಜುನಾಥ್, ಶ್ರೀನಿವಾಸ್, ತಮ್ಮೇಗೌಡ, ಮೆಡಿಕಲ್ ಪ್ರಭು, ಡಿ.ಎಚ್.ಮಹದೇವ್, ಎಲ್‌ಐಸಿ ಪ್ರಕಾಶ್, ಮಿಥುನ್ ಇತರರು ಇದ್ದರು.