ಶಿವಮೊಗ್ಗ: ಶಿಕಾರಿಪುರ ತಾಲೂಕಿನ ರಾಗಿಕೊಪ್ಪ ಗ್ರಾಮದಲ್ಲಿ ನಾಟಿ ಮಾಡಲು ಸಿದ್ಧಪಡಿಸಿಟ್ಟಿದ್ದ 70 ಕ್ವಿಂಟಾಲ್ ಶುಂಠಿ ಕಳವು ಮಾಡಲಾಗಿದೆ. ರಾಗಿಕೊಪ್ಪದ ಲೋಕೇಶ್ ನಾಯ್ಕ, ಗಂಗಾಧರ್ ಮತ್ತು ಲೋಕೇಶ್ ಎಂಬುವರಿಗೆ ಸೇರಿದ ಶುಂಠಿಯನ್ನು ಊರಿನ ಹೊರ ವಲಯದ ಗೊಡಾನ್‌ನಲ್ಲಿ ಇಟ್ಟಿದ್ದರು. ಆದರೆ ಮಂಗಳವಾರ ರಾತ್ರಿ ಕಳ್ಳರು ಕೈ ಚಳಕ ತೋರಿ ಅಂದಾಜು 3 ಲಕ್ಷ ರೂ. ಮೌಲ್ಯದ ಬೀಜದ ಶುಂಠಿ ಕಳವು ಮಾಡಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.