ವಿಜಯವಾಣಿ ಸುದ್ದಿಜಾಲ ಕೋಲಾರ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ತೆಗೆದುಕೊಂಡಿರುವ ತೀರ್ಮಾಣ ಕಾನೂನು ಬಾಹಿರವಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಸಂವಿಧಾನಕ್ಕೆ ಅಪಮಾನವಾಗಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಆರೋಪಿಸಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಗ್ರಾಮದಲ್ಲಿ ಮಾವು ಮಂಡಳಿಯ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ರವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶದಿಂದ ೧೩೬ ಸ್ಥಾನಗಳನ್ನು ಪಡೆದು ಸರ್ಕಾರ ಸುಭದ್ರವಾಗಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲವನ್ನೂ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಕ್ಷÄಲ್ಲಕ ಕಾರಣವನ್ನು ಮುಂದಿಟ್ಟುಕೊAಡು ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಬಿಜೆಪಿಯವರು ಕುತಂತ್ರ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಇದು ಅವರಿಗೆ ಫಲಿಸುವುದಿಲ್ಲ. ಮುಖ್ಯಮಂತ್ರಿಗಳ ಪರವಾಗಿ ಮಂತ್ರಿಮAಡಲ ಗಟ್ಟಿಯಾಗಿ ನಿಲ್ಲುತ್ತದೆ. ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಸಹಿಸದೆ ಸರ್ಕಾರವನ್ನು ಉರುಳಿಸಲು ಬಿಜೆಪಿ ಯವರು ಕುತಂತ್ರ ರಾಜಕಾರಣಕ್ಕೆ ಮುಂದಾಗಿದ್ದಾರೆ. ಮಂತ್ರಿಮAಡಲ ಮುಖ್ಯಮಂತ್ರಿಗಳ ಪರವಾಗಿದೆ. ಅವರು ರಾನಜೀನಾಮೆ ನೀಡಲು ಬಿಡುವುದಿಲ್ಲ. ಕಾನೂನು ಪ್ರಕಾರ ನಾವು ಹೋರಾಟ ಮಾಡಲು ಸಿದ್ಧ. ಕೇಂದ್ರ ಸರ್ಕಾರ ದೆಹಲಿಯಲ್ಲಿ ಕೆಜ್ರಿವಾಲ್ ಸರ್ಕಾರವನ್ನು ಉರುಳುಸಿತು. ಕರ್ನಾಟಕದಲ್ಲಿ ಹಂತ ಹಂತವಾಗಿ ಜನಾದೇಶವನ್ನು ಪಡೆದಿರುವ ಸರ್ಕಾರವನ್ನು ಈ ರೀತಿ ಬದಲಾವಣೆ ಮಾಡಲು ಮುಂದಾಗಿರುವುದನ್ನು ಖಂಡಿಸುತ್ತೇವೆ ಎಂದರು.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಧಾರ ಮತ್ತು ಬಿಜೆಪಿ ಕುತಂತ್ರ ರಾಜಕಾರಣ ವಿರುದ್ಧ ಪ್ರತಿಭಟನೆಯನ್ನು ನಾಳೆ ಹಮ್ಮಿಕೊಳ್ಳುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ, ರಾಷ್ಟçಪತಿಗಳಿಗೆ ಮನವಿಯನ್ನು ಕಳುಹಿಸಿಕೊಂಡುವ ಕೆಲಸ ಮಾಡಲಾಗುವುದು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ದುರಂತವಾಗಿದೆ. ಸರ್ಕಾರಗಳನ್ನು ಬದಲಾವಣೆ ಮಾಡುವುದು ಮತ್ತು ಉರುಳಿಸುವಂತಹ ಕೆಲಸ ೪೦ ವರ್ಷಗಳ ಇತಿಹಾಸದಲ್ಲಿ ನಡೆದಿಲ್ಲ. ಇಂತಹ ಕೆಲಸಕ್ಕೆ ಬಿಜೆಪಿಯವರು ಕೈ ಹಾಕಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕಾನೂನು ಪ್ರಕಾರ ಇದನ್ನು ಎದುರಿಸುತ್ತೇವೆ. ರಾಷ್ಟçಪತಿಗಳ ಬಳಿ ಕಷ್ಟಸುಖಗಳನ್ನು ಹೇಳಿಕೊಳ್ಳುತ್ತೇವೆ ಎಂದರು.
ಮುಡಾ ವಿಷಯದಲ್ಲಿ ಮುಖ್ಯಮಂತ್ರಿಗಳ ಪಾತ್ರ ಇಲ್ಲ. ಅವರ ಶ್ರೀಮತಿಯವರು ನಿವೇಶನ ಪಡೆದಿರಬಹುದು. ಮುಖ್ಯಮಂತ್ರಿಗಳು ಈ ವಿಷಯದಿಂದ ದೂರವಿದ್ದಾರೆ. ಅವರ ಜಮೀನನ್ನು ಪಡೆದು ೫೦ ಅನುಪಾತದಂತೆ ಶೇಕಡಾವಾರು ನಿವೇಶವನ್ನು ನೀಡಿದ್ದಾರೆ. ನಿವೇಶನ ಮಂಜೂರು ಮಾಡಿದಾಗ ಕಾಂಗ್ರೇಸ್ ಅಧಿಕಾರದಲಿಲ್ಲ. ಜನತಾದಳ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿನ ಮುಡಾ ಕಮಿಟಿ ತೀರ್ಮಾನ ತೆಗೆದುಕೊಂಡಿರುವುದು. ನಿವೇಶನಗಳನ್ನು ಅವರ ಜಮೀನು ಪಡೆದ ನಂತರ ಕಾನೂನು ಬದ್ಧವಾಗಿ ಕೊಟ್ಟಿದ್ದಾರೆ. ಇದಕ್ಕು ಸಿದ್ಧರಾಮಯ್ಯನವರಿಗೂ ಯಾವುದೇ ಸಂಬAಧವಿಲ್ಲದಿದ್ದರೂ ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಮುಖ್ಯಮಂತ್ರಿಗಳ ಮೇಲೆ ಆರೋಪವನ್ನು ಮಾಡಿದ್ದಾರೆ. ಇದರ ಬಗ್ಗೆ ಕಾನೂನು ಹೋರಾಟಕ್ಕೆ ಸಿದ್ಧ. ಕಾನೂನು ಹೋರಾಟದಲ್ಲಿ ಜಯ ಸಿಗುತ್ತದೆಂಬ ನಂಬಿಕೆ ಇದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಆಗಿರುವ ಕಗ್ಗೊಲೆಯನ್ನು ಖಂಡಿಸಿ ಕಾನೂನು ಹೋರಾಟ ಮಾಡುತ್ತೇವೆ. ಬಿಜೆಪಿಯವರು ರಾಜೀನಾಮೆ ನೀಡಿ ಎಂದ ತಕ್ಷಣ ವಿನಾಕಾರಣ ಸಂಬAಧವಿಲ್ಲದ ಅರೋಪಗಳಿಗೆಲ್ಲಾ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜ್ಯಪಾಲರ ಅಂಗಳದಲ್ಲಿ ಜೊಲ್ಲೆ, ನಿರಾಣಿ, ಕುಮಾರಸ್ವಾಮಿಯವರ ಪ್ರಕರಣಗಳ ಬಗ್ಗೆಯೂ ಅರ್ಜಿಗಳು ಇವೆ. ಇವುಗಳ ಬಗ್ಗೆ ಕ್ರಮ ಕೈಗೊಳ್ಳದೆ ಮುಖ್ಯಮಂತ್ರಿಗಳ ಮೇಲೆ ಕೊಟ್ಟ ಅರ್ಜಿಯನ್ನು ಪರಿಶೀಲನೆ ಮಾಡದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಅದೇ ರೀತಿ ಎಲ್ಲಾ ಅರ್ಜಿಗಳಿಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಹುದಾಗಿತ್ತಲ್ಲ ಎಂದು ಪ್ರಶ್ನಿಸಿದರಲ್ಲದೆ ಏಕಪಕ್ಷವಾಗಿ ಕೇಂದ್ರದ ಬಿಜೆಪಿ ಸರ್ಕಾರದ ಗೊಂಬೆಯಾಗಿ ಸಂವಿಧಾನಕ್ಕೆ ಮುಖ್ಯಸ್ಥರು ಆಗಿರುವ ಗೌರವಾನ್ವಿತ ರಾಷ್ಟçಪತಿಗಳು ಇಂತಹ ಕ್ಷÄಲ್ಲಕ ವಿಷಯಕ್ಕೆ ಕೈ ಹಾಕಿರುವುದು ಖಂಡನೀಯವಾಗಿದೆ ಎಂದರು.
ಕಾಂಗ್ರೇಸ್‌ನಲ್ಲಿ ಒಗ್ಗಟ್ಟು ಇದೆ. ಒಗ್ಗಟ್ಟಾಗಿ ಎಲ್ಲರೂ ಹೋರಾಟ ಮಾಡುತ್ತೇವೆ. ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿ ಕೊಡುವುದಿಲ್ಲ. ಸರ್ಕಾರ ಸುಭದ್ರವಾಗಿರುತ್ತದೆ. ಮುಖ್ಯಮಂತ್ರಿಗಳಾಗಿ ಸಿದ್ಧರಾಮಯ್ಯ ರವರೇ ಮುಂದುವರೆಯುತ್ತಾರೆ ಎಂದರು.
ಮಾವು ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ಜಿಲ್ಲಾ ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ಎಸ್.ಸಿ. ಅಧ್ಯಕ್ಷ ಜಯದೇವ್, ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ಸದಸ್ಯ ಬಿಸೇಗೌಡ ಮುಂತಾದವರಿದ್ದರು.
ಚಿತ್ರ ೧೮ ಕೆ.ಎಲ್.ಆರ್. ೦೩ : ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವುದು. ಜಿಲ್ಲಾ ಕಾಂಗ್ರೇಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಮಾವು ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಮುಂತಾದವರಿದ್ದರು.