ನ್ಯೂಸ್

ರಾಜ್ಯದಲ್ಲಿ ಮನೆಹಾಳು ಸರ್ಕಾರವಿದೆ

ಚಿತ್ರದುರ್ಗ: ರಾಜ್ಯದಲ್ಲಿ ಮನೆಹಾಳು ಸರ್ಕಾರವಿದೆ. ಅಭಿವೃದ್ಧಿಗೆ ಅನುದಾನ ನೀಡಲು ಕಾಸಿಲ್ಲ. ವರ್ಗಾವಣೆ ದಂಧೆ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಿನ ಬೆಳಗಾದರೆ, ಸಿಎಂ ಕುರ್ಚಿ ಮೇಲೆ ಕಾಂಗ್ರೆಸ್ಸಿಗರೇ ಟವಲ್ ಹಾಕುತ್ತಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ನಾನೇ ಇರ್ತೀನಿ ಅಂತ ಸಾವಿರ ಬಾರಿ ಹೇಳಿದ್ದಾರೆ. ಯಾವ ಸಿಎಂ ಕೂಡ ಈ ರೀತಿ ಹೇಳಿಲ್ಲ. ಗಟ್ಟಿ ಇದ್ದರೆ, ಯಾರೂ ಹೇಳಲ್ಲ. ಜೊಳ್ಳು ಇರುವ ಕಾರಣ ಆತಂಕದಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.