ನ್ಯೂಸ್

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ/ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಲೆ ಮತ್ತು ಕೊಲೆಯತ್ನಗಳಿಗೆ ಕಡಿವಾಣ ಹಾಕಬೇಕು/ಸಂಸದ ಮುನಿಸ್ವಾಮಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಿನಿAದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕೊಲೆ ಯತ್ನ ಮತ್ತು ಕೊಲೆಗಳು ಸೇರಿ ಸುಮಾರು ೨೯ ಕೊಲೆ ಅಪರಾಧಗಳು ನಡೆದಿವೆ. ಕಾಂಗ್ರೇಸ್ ಸರ್ಕಾರ ಜನರು ಕೊಟ್ಟ ಭರವಸೆಗಳಲ್ಲಿ ತಲ್ಲೀನವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದರು.

ಶ್ರೀನಿವಾಸಪುರದಲ್ಲಿ ಮಂಗಳವಾರ ಕಾಂಗ್ರೇಸ್ ಮುಖಂಡ ಎಂ.ಶ್ರೀನಿವಾಸನ್ ರವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಈ ರೀತಿಯಾಗಿ ನಡೆಯುತ್ತಿರಲಿಲ್ಲ. ಇಂದು ರಾಜ್ಯಾಂದ್ಯAತ ಬೆಟ್ಟಿಂಗ್ ದಂಧೆ, ಗಾಂಜಾ, ಡ್ರಗ್ಸ್, ಮಟ್ಕ ಈ ರೀತಿಯ ದಂಧೆಗಳು ಕೋಲಾರ ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ನಡೆಯುತ್ತಿವೆ ಎಂದು ತಿಳಿಸಿದರು.

ಈ ರೀತಿಯಾಗಿ ಕೋಲಾರ ಚಿಕ್ಕಬಳ್ಳಾಪುರ ದಂಧೆಗಳು ನಡೆಯುತ್ತಿರುವುದರಿಂದ ಯುವಕರು ಯಾರ ಮಾತನ್ನೂ ಕೇಳದ ಪರಿಸ್ಥಿತಿಯಲ್ಲಿ ಇಲ್ಲವಾಗಿದ್ದಾರೆ. ದೇಶದ ಉತ್ತಮ ಪ್ರಜೆಗಳಾಗಿರಬೇಕಾಗಿದ್ದ ಯುವಕರು ದುಶ್ಚಟಗಳಿಗೆ ಬಲಿಯಾಗಿ ಪ್ರಾಣಗಳನ್ನು ಕಳೆದುಕೊಂಡು ತಪ್ಪುದಾರಿಗಳನ್ನು ಹಿಡಿಯುತ್ತಿದ್ದಾರೆ. ಇದಕ್ಕೆ ಸರ್ಕಾರ ಮತ್ತು ಇಲಾಖೆಗಳು ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದರು.

ಶ್ರೀನಿವಾಸಪುರದಲ್ಲಿ ಎಂ.ಶ್ರೀನಿವಾಸನ್ ಕೊಲೆ, ಮಾಲೂರಿನಲ್ಲಿ ನಡೆದ ಗ್ರಾ.ಪಂ. ಸದಸ್ಯ ಅನಿಲ್ ಕೊಲೆ ಸೇರಿದಂತೆ ಕೋಲಾರ ಲೋಕಸಭಾ ಕ್ಷೇತ್ರದ ಭಾಗದಲ್ಲಿ ಇತ್ತೀಚೆಗೆ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳು ಇದರ ಜೊತೆಗೆ ಸಣ್ಣ ಸಣ್ಣ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ದಾರಿ ತಪ್ಪುವ ಜನಕ್ಕೆ ಭಯ ಎಂಬುವುದು ದೂರವಾಗಿದೆ. ಪೋಲಿಸ್ ಇಲಾಖೆ ಮೇಲೆ ನಂಬಿಕೆ, ವಿಶ್ವಾಸವಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾಗಿದೆ. ಈಗಾಗಲೇ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ. ಕೆಲವರು ಮಾಡುವ ಕೆಲಸಗಳಿಂದ ಪೋಲಿಸ್ ಇಲಾಖೆಯ ಮೇಲೆ ಕೆಟ್ಟ ಹೆಸರು ಬರುವಂತಾಗಿದೆ. ಸರ್ಕಾರದ ಮೇಲೆಂತೂ ನಂಬಿಕೆ ಇಲ್ಲದಂತಾಗಿದೆ. ಇಲಾಖೆಯವರಾದರೂ ಸರಿದಾರಿಗೆ ತಂದು ಒಳ್ಳೆಯ ಹೆಸರನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಯುವಕರನ್ನು ಸರಿದಾರಿಗೆ ತರಬೇಕಾದರೆ ಇಂತಹ ದುಶ್ಚಟಗಳಲ್ಲಿ ಭಾಗಿಯಾಗಿರುವವರಿಗೆ ಇಲಾಖೆ ಎಡೆಮುಡಿ ಕಟ್ಟಬೇಕು. ಅದಕ್ಕಾಗಿ ಪೋಲಿಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದರು.

ಚಿತ್ರ ೨೫ ಕೆ.ಎಲ್.ಆರ್. ೦೪ : ಸಂಸದ ಮುನಿಸ್ವಾಮಿಯವರ ಭಾವಚಿತ್ರ