ನ್ಯೂಸ್

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಜತೆಗೆ ಭ್ರಷ್ಟಾಚಾರವೂ ಹೆಚ್ಚಾಗಿದೆ ಎಂದು ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಕೆ.ಎನ್.ಸುಬ್ಬಣ್ಣ ಆರೋಪಿಸಿದರು.

ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಮನೆಗಳ ಮೇಲೆ ರೇಡ್ ಆಗುತ್ತಿದೆ. ಎಷ್ಟೋ ಅಧಿಕಾರಿಗಳ ಮನೆಯಿಂದ ಕೋಟಿ ಕೋಟಿ ಹಣವನ್ನು ರೇಡ್ ಮಾಡುತ್ತಿದ್ದಾರೆ. ಅಧಿಕಾರಿಗಳಿಗೂ ಅಕ್ರಮವಾಗಿ ಹಣ ಸಂಪಾದಿಸಲು ಬಿಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ರಾಜ್ಯ ಸರ್ಕಾರವು ಜನರನ್ನು ನೆಮ್ಮದಿಯಾಗಿರ ಇರಲು ಬಿಡುತ್ತಿಲ್ಲ. ಯಾವುದಾದರೂ ತೊಡಕನ್ನು ಮಾಡುವ ಮೂಲಕ ಜನರಿಗೆ ತೊಂದರೆ ನೀಡಲು ತೀರ್ಮಾನಿಸಿದ್ದಾರೆ. ಸರ್ಕಾರ ರಚನೆಯಾದಾಗಿನಿಂದ ಹಿಡಿದು 5 ವರ್ಷ ಪೂರ್ತಿ ಮಾಡುವವರೆಗೂ ತೊಂದರೆ ಕೊಡುವುದನ್ನು ತೀರ್ಮಾನಿಸಿದ್ದಾರೆ. ದೂರದೂರುಗಳಿಂದ ಜನರು ದಸರಾ ನೋಡಲು ಮೈಸೂರಿಗೆ ಬಂದಿದ್ದರು. ಆದರೆ ಅವರಿಗೆ ಪಾಸ್‌ನಲ್ಲಿ ಅವ್ಯವಸ್ಥೆ ಮಾಡಿದರು ಎಂದು ತಿಳಿಸಿದರು.

ಸಚಿವ ಪ್ರಿಯಾಂಕ ಖರ್ಗೆ ಅವರು ದೇಶಭಕ್ತಿಯಿಂದ ಕೂಡಿರುವ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡುತ್ತೀವಿ, ಸರ್ಕಾರಿ ಸ್ಥಳಗಳಲ್ಲಿ ಪಥ ಸಂಚಲನ ಮಾಡಬೇಡಿ ಎಂದು ಹೇಳುತ್ತಾರೆ. ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಲು ನಿಮ್ಮಿಂದ ಸಾಧ್ಯವೇ ಎಂದು ಪ್ರಶ್ನಿಸಿದರು. ಇಂದಿರಾಗಾಂಧಿ, ಜವಹಾರ್‌ಲಾಲ್ ನೆಹರು, ಮಲ್ಲಿಕಾರ್ಜುನ ಖರ್ಗೆ ಅವರೇ ಸ್ವತಃ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ್ದರು ಎಂದು ತಿಳಿಸಿದರು.

ಜಿಲ್ಲಾ ಆತ್ಮನಿರ್ಬರ ಭಾರತ ಕಾರ್ಯಕ್ರಮದ ಸಂಚಾಲಕ ದಾಸಯ್ಯ ಮಾತನಾಡಿ, ಆತ್ಮನಿರ್ಬರ ಭಾರತ ಕಾರ್ಯಕ್ರಮದ ಮೂಲಕ ದೇಶ ಸ್ವಾವಲಂಬನೆಯತ್ತ ಸಾಗುತ್ತಿದೆ. ವಿದೇಶಿ ವಸ್ತುಗಳನ್ನು ಖರೀದುಸುವುದನ್ನು ಬೀಡಬೇಕು. ನಮ್ಮ ದೇಶದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಖರೀದಿಸಿ ಉಪಯೋಗಿಸಿದಾಗ ಮಾತ್ರ ನಮ್ಮಲ್ಲಿರುವ ಕಾರ್ಖನೆಗಳು, ನೌಕರರು ಹಾಗೂ ನಮ್ಮ ದೇಶ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಆತ್ಮನಿರ್ಬರ ಭಾರತದ ಬಗ್ಗೆ ಪ್ರತಿ ಮನೆಮನೆಗೂ ತಿಳಿಸಲಾಗುತ್ತದೆ. ಸ್ಥಳೀಯ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸ್ವಾವಲಂಬನೆಯ ಬಗ್ಗೆ ಅರಿವು ಮೂಡಿಸಲಾಗವುದು. ನಾವು ನಮ್ಮ ದೇಶದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಬಳಸುವುದರ ಜತೆಯಲ್ಲೇ ವಿದೇಶಗಳಿಗೂ ಅವುಗಳನ್ನು ರ- ಮಾಡಬೇಕೆಂಬುದೇ ನಮ್ಮ ಉದ್ದೇಶ ಎಂದು ಹೇಳಿದರು.

ಆತ್ಮನಿರ್ಬರ ಭಾರತ ಕಾರ್ಯಕ್ರಮದ ಸಂಚಾಲಕರಾದ ಶ್ರೀನಿವಾಸ್ ರೆಡ್ಡಿ, ಗುರುಸ್ವಾಮಿ, ಶರತ್ ಪುಟ್ಟಬುದ್ದಿ, ಜಿಲ್ಲಾ ವಕ್ತಾರ ದಯಾನಂದ ಪಟೇಲ್, ಜಿಲ್ಲಾ ಸಂಚಾಲಕ ಮಹದೇವಸ್ವಾಮಿ ಇದ್ದರು.