ನ್ಯೂಸ್

ರಾಜ್ಯದ ರಾಜಕಾರಣವು ದುಃಸ್ಥಿತಿಯಲ್ಲಿದೆ / ಅಭಿವೃದ್ಧಿ ಮರೀಚಿಕೆಯಾಗಿದೆ / ಸಾರ್ವಜನಿಕರ ಹಿತ ನಶಿಸಿದೆ / ಮುಖ್ಯಮಂತ್ರಿ ಚಂದ್ರು

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯದ ರಾಜಕಾರಣಕ್ಕೆ ತೀವ್ರವಾದ ದುಃಸ್ಥಿತಿ ಬಂದಿದೆ. ಅಭಿವೃದ್ದಿ ಎಂಬುವುದು ಮರೀಚೆಕೆಯಾಗಿದೆ. ಸಾರ್ವಜನಿಕರ ಹಿತ ನಶಿಸಿ ಹೋಗಿದೆ. ಕೆಲವರ ಸ್ವಾರ್ಥದ ರಾಜಕಾರಣ ಮುನ್ನಡೆದಿದೆ ಎಂದು ಆಮ್ಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿಷಾಧಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಿರೋಧ ಪಕ್ಷಗಳು ನಿಷ್ಕಿçಯೆಗೊಂಡಿವೆ. ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿರುವುದರಿಂದ ರಾಜ್ಯ ಸರ್ಕಾರಕ್ಕೆ ಉಸಿರುಗಟ್ಟಿದ ವಾತವರಣ ನಿರ್ಮಾಣವಾಗಿದೆ. ನೀರಾವರಿ ಯೋಜನೆಗಳು, ಏರೋಡ್ರಾಮ್ ಸೇರಿದಂತೆ ಅನೇಕ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ರಾಜ್ಯಕ್ಕೆ ಕೇಳಲು ಧ್ವನಿ ಇಲ್ಲದಂತಾಗಿದೆ. ಸದನದಲ್ಲಿ ಪ್ರಶ್ನಿಸಲು ಹಾಗೂ ಪ್ರಧಾನಿ ಬಳಿ ತಮ್ಮ ಹಕ್ಕೋತ್ತಾಯ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರವು ತಮ್ಮ ಪಕ್ಷದ ಶಾಸಕರಿಗೆ ೫೦ ಕೋಟಿ ರೂ ವಿಪಕ್ಷದವರಿಗೆ ೨೫ ಕೋಟಿ ರೂ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಿದೆ. ಇದೇ ರೀತಿ ಕೇಂದ್ರ ಸರ್ಕಾರವು ಮಾಡಿದ್ದು, ಹಿರಿಯಕ್ಕನ ಚಾಳಿಯ ಬುದ್ದಿಯಂತೆ ತೋರಿದೆ. ಇಂತಹ ದ್ವೇಷದ ಕೆಟ್ಟ ಸ್ಥಿತಿಗಳು ಸೃಷ್ಠಿಸುತ್ತಿರುವುದು ರಾಜಕಾರಣದ ವ್ಯವಸ್ಥೆಯು ಅದೋಗತಿಗೆ ಇಳಿದಿರುವುದು ಕಳವಳಕಾರಿಯಾಗಿದ್ದು, ರಾಜ್ಯಪಾಲರ ಆಡಳಿತವನ್ನು ಜಾರಿ ಮಾಡುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದಿನ ನ್ಯಾಯಾಲಯಗಳು ಸಹ ಕೆಲವು ನ್ಯಾಯಾಧೀಶರಿಂದಾಗಿ ಕೆಟ್ಟ ಹೆಸರು ಬರುವಂತಾಗಿದೆ ಎಂಬುದಕ್ಕೆ ನ್ಯಾಯಾಧೀಶರ ಮನೆ ಮೇಲಿನ ದಾಳಿಯ ಪ್ರಕರಣ ನೆನಪಿಸಿಕೊಳ್ಳಬಹುದು. ಕೆಲವು ಬಿಲ್‌ಗಳನ್ನು ಪಾಸ್ ಮಾಡಲಿಲ್ಲ, ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ಎಂದು ಉಪರಾಷ್ಟçಪತಿಗಳ ರಾಜೀನಾಮೆ ನೀಡುವಂತೆ ಮಾಡಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿ.ಎಸ್.ಟಿ. ತೆರಿಗೆ ಅವೈಜ್ಞಾನಿಕವಾಗಿ ಬೀದಿಬದಿ ವ್ಯಾಪಾರಿಗಳ ಮೇಲೆ ಹೇರಿರುವುದು ದುರಂತದ ಸಂಗತಿ. ಸಣ್ಣಪುಟ್ಟ ವ್ಯಾಪಾರಿಗಳ ಹೊಟ್ಟೆಪಾಡಿನ ಬದುಕಿನ ಮೇಲೆ ಕೋಟಿಗಟ್ಟಲೇ ತೆರಿಗೆ ಹೇರುವ ಮೂಲಕ ಗುಬ್ಬಿ ಮೇಲೆ ಬ್ರಹ್ಮಸ್ತ ಪ್ರಯೋಗ ಮಾಡುತ್ತಿರುವುದು ಅತಂಕಕಾರಿಯಾಗಿದೆ. ತಮ್ಮ ಪಕ್ಷದ ಉಷಾ ಮೋಹನ್ ನಡೆಸುತ್ತಿರುವ ಸಣ್ಣ ಹೋಟೆಲ್‌ಗೆ ೩.೫ ಕೋಟಿ ರೂ ಜಿ.ಎಸ್.ಟಿ. ತೆರಿಗೆ ವಿಧಿಸಿರುವುದು ನಗೆಪಾಟಲಿಗೆ ಗುರಿಯಾಗಿದೆ ಎಂದು ವ್ಯಂಗವಾಡಿದರು.

ರಾಜ್ಯ ಸರ್ಕಾರವೇನೂ ಇದಕ್ಕೆ ೩ ವರ್ಷ ವಿನಾಯಿತಿ ಘೋಷಿಸಿದೆ. ಆದರೆ ಸಣ್ಣ ಪುಟ್ಟ ವ್ಯಾಪಾರಿಗಳು ನಡೆಸದೆ ಇರುವ ವ್ಯವಹಾರಗಳಿಗಿಂತ ೧೦೦ ಪಟ್ಟು ತೆರಿಗೆ ಹೇರುವುದು ಅವೈಜ್ಞಾನಿಕತೆಯ ಪರಮಾವಧಿಯಾಗಿದೆ ಎಂದು ಖಂಡಿಸಿದರು.

ಚಿತ್ರ ೨೫ ಕೆ.ಎಲ್.ಆರ್. ೧೦ : ಮುಖ್ಯಮಂತ್ರಿ ಚಂದ್ರು ಭಾವಚಿತ್ರ