ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯದಲ್ಲಿ ನಡೆಯುವ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಚನ್ನಪಟ್ಟಣದಲ್ಲಿ ಕಡಿಮೆ ಅಂತರದಲ್ಲಿ ಗೆಲ್ಲುತ್ತೇವೆ, ಹಾಗು ಅಚ್ಚರಿ ಅಭ್ಯರ್ಥಿಯನ್ನು ನೀಡುತ್ತೇವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಶಾಸಕರ ಕಛೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆಲ್ಲುತ್ತದೆ. ಸಂಡೂರುನಲ್ಲಿ ಜೆಡಿಎಸ್ ಎರಡು ಬಾರಿ ಗೆದಿದ್ದೆ ಅಷ್ಟೇ. ಉಳಿದಂತೆ ಎಲ್ಲಾ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿನ ಯಾರಾಗಲಿದ್ದಾರೆ ಎಂಬುವುದು ನಮಗೆ ಗೊತ್ತು. ಈಗ ಬಹಿರಂಗಪಡಿಸುವುದಿಲ್ಲ. ನಾಳೆ ನಾಳಿದ್ದು ಎಲ್ಲರಿಗೂ ಗೊತ್ತಾಗಲಿದೆ ಎಂದರು.
ಯೋಗೇಶ್ವರ ಕಾಂಗ್ರೆಸ್ ಬರುವ ಕುರಿತು:
ನಿಯತ್ತಾಗಿ ಇರುವವರು ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಫೊರ್‌ಟ್ವೆಂಟಿಗಳು ಮಾತ್ರ ಕಾಂಗ್ರೆಸ್‌ಗೆ ಬರುವುದು ಬೇಡ. ಯೋಗೇಶ್ವರ್ ಬಂದರೆ ಸ್ವಾಗತ, ಅವರು ಒಳ್ಳೆ ಮನುಷ್ಯ, ಸ್ವಲ್ಪ ಕೋಪಿಷ್ಟ ಅಷ್ಟೇ. ಯೋಗೇಶ್ವರ್ ಅವರಿಗೆ ಅವರದೇ ಆದ ಮತ ಬ್ಯಾಂಕ್ ಕ್ಷೇತ್ರದಲ್ಲಿ ಇದೆ. ಮುಸ್ಲಿಂ ಬಂಧುಗಳ ಸಹ ಅವರಿಗೆ ಮತ ಹಾಕುತ್ತಾರೆ. ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸಿದ್ದಾರೆ. ಅವರಿಗೆ ಒಳ್ಳೆಯ ಹೆಸರು ಇದೆ ಎಂದರು.
ಜೆಡಿಎಸ್ ತೀರ್ಮಾನ ನೋಡಕೊಂಡು ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಈಗಾಗಲೇ ಅಭ್ಯರ್ಥಿ ನಮ್ಮ ಬಳಿ ಇದ್ದಾರೆ. ಅವರನ್ನೇ ಅಚ್ಚರಿ ರೀತಿಯಲ್ಲಿ ಅಭ್ಯರ್ಥಿ ಮಾಡಲಾಗುವುದು ಎಂದರು.
ಡಿ.ಕೆ.ಶಿವಕುಮಾರ್ ಸಿಬಿಐ ನೋಟೀಸ್ ಕುರಿತು :
ಅದು ದೊಡ್ಡವರ ವಿಷಯ. ಪ್ರತಿ ಚುನಾವಣೆ ಬಂದಾಗ ಡಿಕೆಶಿಗೆ ನೋಟೀಸ್ ಬರುತ್ತೆ. ಡಿಕೆಶಿ ಅವರು ಮಾವಿನ ಮರ ಇದ್ದಂತೆ. ರಸ್ತೆಯಲ್ಲಿ ಹೋಗುವರೆಲ್ಲಾರೂ ಒಂದು ಕಲ್ಲು ಹಾಕುತ್ತಾರೆ. ದೇಶದಲ್ಲಿ ತಪ್ಪು ಮಾಡದ ವ್ಯಕ್ತಿ ಯಾರು ಇಲ್ಲ. ಗೊತ್ತು ಗೊತ್ತಿಲ್ಲದೋ ತಪ್ಪು ಮಾಡುತ್ತೇವೆ. ಅದಕ್ಕೆ ಪದೇ ಪದೇ ಗಾಯದ ಮೇಲೆ ಬರೆ ಎಳೆಯಬಾರದು. ಇದನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆಂದು ಆರೋಪಿಸಿದರು.
ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ :
ನಾನು ಮದುವೆ, ಊರಹಬ್ಬ ಮುಂತಾದ ಸಮಾರಂಭಗಳಿಗೆ ಮಾತ್ರ ಹೋಗಿ ಬರುವ ಶಾಸಕನಾಗಿಲ್ಲ. ನಮಗೆ ಅಭಿವೃದ್ಧಿ ಮಾಡಲು ಆಗದಿದ್ದಲ್ಲಿ ಒಂದು ದಿನದ ಶಾಸಕನಾಗಿ ಮುಂದುವರೆಯುವುದಿಲ್ಲ. ಯಾರು ಏನೇ ಅಂದುಕೊಳ್ಳಲಿ ನಾನು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸರ್ಕಾರದಲ್ಲಿ ಕೋಟ್ಯಂತರ ರೂ.ಗಳ ಅನುದಾನವನ್ನು ತಂದಿದ್ದೇನೆ.
ಪಿ.ಆರ್.ಐ.ಡಿ.ಗೆ ೭೫ ಕೋಟಿ. ಲೋಕೋಪಯೋಗಿ ಇಲಾಖೆಗೆ ೫೦ ಕೋಟಿ. ರೂ.ಗಳ ಅನುದಾನವನ್ನು ಅಭಿವೃದ್ಧಿಗಾಗಿ ತಂದಿದ್ದೇನೆ. ಎಲ್ಲಾ ಕಾಮಗಾರಿಗಳು ಟೆಂಡರ್ ಹಂತದಲ್ಲಿ ಇವೆ. ಇನ್ನು ೨೫ ಕೋಟಿ ರೂ.ಗಳಿಗೆ ಕ್ರಿಯಾ ಯೋಜನೆ ಆಗಬೇಕಾಗಿದೆ. ಜಿಲ್ಲಾ ಪಂಚಾಯಿತಿ ಬಂದಿರುವ ಅನುದಾನಕ್ಕೆ ಕ್ರಿಯಾ ಯೋಜನೆ ಮಾಡಲಾಗುತ್ತಿದೆ. ಟೆಂಡರ್ ಆಗಿರುವ ಕಾಮಗಾರಿಗಳನ್ನು ದೀಪಾವಳಿ ಹಬ್ಬದ ನಂತರ ಪ್ರಾರಂಭಿಸುವುದಾಗಿ ಗುತ್ತಿಗೆ ದಾರರು ತಿಳಿಸಿದ್ದಾರೆ. ಕೋಲಾರ ನಗರದಲ್ಲಿ ಹಂತ ಹಂತವಾಗಿ ಎಲ್ಲಾ ರಸ್ತೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಅಂತರಗAಗೆ ಬೆಟ್ಟದ ರೂಪ್‌ವೇಗೆ ೨ ಕೋಟಿ :
ಅಂತರಗAತೆ ಬೆಟ್ಟಕ್ಕೆ ಪ್ರವಾಸಿಗಳು ಹೋಗಲು ೨ ಕೋಟಿ ರೂ.ಗಳ ವೆಚ್ಚದಲ್ಲಿ ರೂಪ್‌ವೇ ಮಾಡಿಸಲಾಗುವುದು. ಅರಣ್ಯ ಇಲಾಖೆಗೆ ಅನುದಾನ ಬಂದಿದೆ. ಅರಣ್ಯ ಇಲಾಖೆಯವರು ಒತ್ತುವರಿ ತೆರವು ಕಾರ್ಯಾಚರಣೆಗಳಲ್ಲಿ ಮುಂದಾಗಿದ್ದಾರೆ. ಸದ್ಯದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಚಿತ್ರ ೨೨ ಕೆ.ಎಲ್.ಆರ್. ೦೧ : ಶಾಸಕ ಕೊತ್ತೂರು ಮಂಜುನಾಥ್ ರವರ ಭಾವಚಿತ್ರ