ನ್ಯೂಸ್

ರಾಜ್ಯದ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ತನಕ ಬಿಜೆಪಿ ಹೋರಾಟ / ನರೇಗಾ ಯೋಜೆಯಲ್ಲಿ ಕೋಟಿ ಕೋಟಿ ರೂ.ಗಳ ದುರುಪಯೋಗ / ಡ್ರಗ್ಸ್ ಮಾಫಿಯಾದಲ್ಲಿ ಪ್ರಿಯಾಂಕಖರ್ಗೆ ಹೆಸರು ತುಳುಕು

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯದಲ್ಲಿ ಬಿಜೆಪಿ ಭ್ರಷ್ಟಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಡ್ರಗ್ಸ್ ಮಾಫಿಯಾ ಹೆಚ್ಚಾಗುತ್ತಿದೆ. ಸಚಿವರ ಆಪ್ತರೇ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಬಂಧನದಲ್ಲಿದ್ದಾರೆ. ಕಾಂಗ್ರೇಸ್ ಶಾಸಕರು ಇಲಾಖೆಗಳಲ್ಲಿ ಮಾಮಾಲಿ ವಸೂಲಿ ಮಾಡಲು ಮುಂದಾಗಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯುವ ತನಕ ಬಿಜೆಪಿ ಹೊರಾಟ ನಡೆಸುತ್ತದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದ ಬಿಜೆಪಿ ಕಛೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನಾನೇ ೫ ವರ್ಷ ಸಿ.ಎಂ. ಎನ್ನುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ತಮ್ಮ ವ್ಯಾಪ್ತಿಗೆ ಬರದ ವಿಷಯಗಳನ್ನು ಮಾತನಾಡುತ್ತಾ ಆರ್.ಎಸ್.ಎಸ್. ಮತ್ತು ಬಿಜೆಪಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಕಾಂಗ್ರೇಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರ್.ಎಸ್.ಎಸ್.ನ್ನು ಕಿತ್ತೊಗೆಯುತ್ತೇವೆ ಎಂದು ಹೇಳುತ್ತಾ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಯಾಗಿ ತೆರೆಮರೆಯಲ್ಲಿ ಸದ್ದು ಮಾಡುತ್ತಿದ್ದಾರೆ.

ಗ್ರಾಮಗಳನ್ನು ಉದ್ಧಾರ ಮಾಡಲಿ ಎಂದು ಗ್ರಾಮೀಣಾಭಿವೃದ್ಧಿ ಸ್ಥಾನವನ್ನು ನೀಡಿದ್ದಾರೆ. ಆದರೆ ಡ್ರಗ್ಸ್ ಮಾಫಿಯಾದಲ್ಲಿ ಅವರ ಮುಂದಾಳತ್ವರಾದ ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಡ್ರಗ್ಸ್ ಪ್ರಕರಣದಲ್ಲಿ ಮಹಾರಾಷ್ಟç ಸರ್ಕಾರ ಬಂಧನ ಮಾಡಿದೆ. ಈ ಪ್ರಕರಣದಲ್ಲಿ ಪ್ರಿಯಾಂಕ ಖರ್ಗೆ ಹೆಸರು ಮತ್ತು ಶಾಸಕ ಅಲ್ಲಮಪ್ರಭು ಹೆಸರು ತುಳುಕು ಹಾಕುತ್ತಿದೆ. ಇವರು ಖಳನಾಯಕರಾಗಿದ್ದಾರೆ. ಕೂಡಲೇ ಸಚಿವರು ಮತ್ತು ಶಾಸಕರು ರಾಜೀನಾಮೆ ನೀಡಬೇಕೆಂದು ಎಂದು ಒತ್ತಾಯಿಸಿದರು.

ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ, ಬೀಡ ಅಂಗಡಿಗಳಲ್ಲಿ, ಪಬ್‌ಗಳಲ್ಲಿ ರಾಜಾರೋಷವಾಗಿ ಸಿಗುವಂತೆ ಆಗಿದೆ. ಇದರ ಹಿಂದೆ ಪ್ರಿಯಾಂಕ ಖರ್ಗೆಯವರ ಕೈವಾಡ ಎದ್ದು ಕಾಣುತ್ತಿದೆ. ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಆಪ್ತರಾದ ಮಲ್ಲಿನಾಥ್ ಸೂಂತ್ ಮಗನು ಡ್ರಗ್ಸ್ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾನೆ. ಆದರೆ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನರೇಗಾ ಯೋಜನೆ ಕೇಂದ್ರ ಸರ್ಕಾರದ್ದು ಆಗಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ರಾಜ್ಯದಲ್ಲಿ ಒಂದು ಕಿ.ಮೀ ರಸ್ತೆಯೂ ಅಭಿವೃದ್ದಿ ಆಗಿಲ್ಲ. ಕೇಂದ್ರ ಸರ್ಕಾರದಿಂದ ಬರುವ ವಿವಿಧ ಯೋಜನೆಗಳ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ. ಪ್ರಿಯಾಂಕ ಖರ್ಗೆ ಉಸ್ತುವಾರಿಯ ಕುಡಚಿ ಮತಕ್ಷೇತ್ರದ ಗ್ರಾಮಪಂಚಾಯ್ತಿಯೊAದರಲ್ಲಿ ನರೇಗಾ ಯೋಜನೆಯಲ್ಲಿ ೧೪ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ರಾಜ್ಯದಲ್ಲಿ ೬ ಸಾವಿರ ಗ್ರಾಮ ಪಂಚಾಯ್ತಿಗಳಿದ್ದು, ಒಂದು ಗ್ರಾಮಪಂಚಾಯ್ತಿ ೧೪ ಕೋಟಿ ಅವ್ಯವಹಾರ ಎಂದರೆ ೬ ಸಾವಿರ ಗ್ರಾಮ ಪಂಚಾಯ್ತಿಗಳಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರಗಳನ್ನು ನಡೆಸಿದ್ದಾರೆ.

ಗಂಡಸರೇ ಹೆಣ್ಣುಮಕ್ಕಳ ಉಡುಪು ಧರಿಸಿ ಒಂದು ಕಾಮಗಾರಿಗೆ ತೆಗೆಸಿದ ಫೋಟೋವನ್ನು ೧೦ ಕಾಮಗಾರಿಗಳಿಗೆ ಬಳಸಿ ಹೆಸರುಗಳನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿ ಹಣ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ಯಾವ ಮಟ್ಟದಲ್ಲಿ ಇದೆ ಎಂದರೆ ರಾಯಭಾಗ ತಾಲ್ಲೂಕಿನ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಗ್ಗೆ ಅವರ ಸಹೋದರ ಬಾಬಾ ಸಾಬ್ ಗದ್ದು ಅವರೇ ನರೇಗಾ ಕಾಮಗಾರಿಯಲ್ಲಿ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಹಗರಣ ನಡೆಸುತ್ತಿದ್ದಾರೆ ಎಂದರೆ ಇದಕ್ಕೆ ಪ್ರಿಯಾಂಕ ಖರ್ಗೆಯವರ ಕುಮ್ಮಕ್ಕು ಇದೆ ಎಂಬುದು ಸಾಬೀತಾದಂತೆ ಆಗುತ್ತಿದೆ ಎಂದರು.

ವಿಜಯಪುರ ನರೇಗಾ ಕಾಮಾಗಾರಿಯಲ್ಲಿ ಶಾಲಾ ಮಕ್ಕಳನ್ನು ನಿಲ್ಲಿಸಿ ಪೋಟೋ ತೆಗೆಸಿ ಬಿಲ್ ಮಾಡಿಕೊಂಡಿರುವ ಉದಾಹರಣೆ ಇದೆ. ಇದು ನರೇಗಾ ಯೋಜನೆಯಲ್ಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮೀಣ ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶೇ.೯೦ ರಷ್ಟು ಹಣ ಬಿಡುಗಡೆಯಾಗುತ್ತಿದೆ. ರಾಜ್ಯ ಸರ್ಕಾರ ಒಂದು ಪೈಸೆ ಹಣವೂ ಇದುವರೆವಿಗೂ ಅಭಿವೃದ್ಧಿಗೆ ಬಿಡುಗಡೆ ಮಾಡಿಲ್ಲ. ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಕೆ.ಎಸ್.ಆರ್.ಟಿ.ಸಿಗೆ ಡಕೋಟ ಬಸ್ಸುಗಳನ್ನು ನೀಡಿ ಅವು ಎಲ್ಲೆಂದರಲ್ಲಿ ನಿಲ್ಲುವಂತಾಗಿದೆ. ಇತ್ತೀಚೆಗೆ ರೈಲ್ವೇ ಹಳಿಯ ಮೇಲೆ ಬಸ್ಸು ಕೆಟ್ಟು ನಿಂತು ಸಾರ್ವಜನಿಕರು ತಳ್ಳುವಂತೆ ಆಯಿತು.

ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿAದ ನುಸುಳಿಕೋರರನ್ನು ಕರೆಸಿ ಅವರಿಗೆ ಆಧಾರ್ ಕಾರ್ಡ್ ತಯಾರಿಸಿ ಓಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಅಂತಹ ನುಸುಳಿಕೋರರು ಮಲೆನಾಡು ಕಾಫಿ ಎಸ್ಟೇಟ್‌ಗಳಲ್ಲಿ ದಂಧೆಗಳಲ್ಲಿ ಭಾಗಿಯಾಗಿದ್ದಾರೆ. ನಮ್ಮ ದೇಶದ ಯುವಕರನ್ನು ಕಾಂಗ್ರೇಸ್ ಸರ್ಕಾರ ಹಾಳು ಮಾಡಲು ಹೊರಟಿದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಿರಾಜು, ಉಪಾಧ್ಯಕ್ಷ ಕೃಷ್ಣಮೂರ್ತಿ, ಮಾಧ್ಯಮ ಸಲಹೆಗಾರ ಪ್ರವೀಣ್‌ಗೌಡ, ಕೆಂಬೋಡಿ ನಾರಾಯಣಸ್ವಾಮಿ, ಮಹಿಳಾ ಅಧ್ಯಕ್ಷೆ ಅಮೃತ ಮುಂತಾದವರು ಇದ್ದರು.

ಚಿತ್ರ ೧೬ ಕೆ.ಎಲ್.ಆರ್. ೦೧ : ಬಿಜೆಪಿ ಕಛೇರಿಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವುದು. ಮಾಜಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಿರಾಜು, ಪ್ರವೀಣ್‌ಗೌಡ ಮುಂತಾದವರು ಇದ್ದರು.