ನ್ಯೂಸ್

ರಾಜ್ಯದ ಕರಾವಳಿ ಹಾಗು ಮಲೆನಾಡು ಭಾಗದಲ್ಲಿ ಮತ್ತೆ ರಿಂಗಣಿಸಿದ ಸ್ಯಾಟಲೈಟ್ ಫೋನ್

ಮಂಗಳೂರು:ರಾಜ್ಯದ ಕರಾವಳಿ ಹಾಗು ಮಲೆನಾಡು ಭಾಗದಲ್ಲಿ ಸ್ಯಾಟಲೈಟ್ ಫೋನ್ ಮತ್ತೆ ರಿಂಗಣಿಸಿದೆ.
ಕೇಂದ್ರ ಗುಪ್ತಚರ ಏಜೆನ್ಸಿಗಳು ರಾಜ್ಯದ ಕರಾವಳಿಯಲ್ಲಿ ಹೈ ಅಲರ್ಟ್ ಸೂಚನೆ ನೀಡಿವೆ. ಆಕ್ಟಿವ್ ಆದ ಸ್ಯಾಟಲೈಟ್ ಫೋನ್
ರಾಜ್ಯ ಕರಾವಳಿ ಹಾಗು ಮಲೆನಾಡು ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದಿರುವ ಬಗ್ಗೆ ಬೇಹುಗಾರಿಕೆ ಸಂಸ್ಥೆಗಳು ಮಾಹಿತಿ ಕಲೆ ಹಾಕಿವೆ.
ದಕ್ಷಿಣ ಕನ್ನಡ ಜಿಲ್ಲೆಯ 2 ಕಡೆ, ಚಿಕ್ಕಮಗಳೂರು ಜಿಲ್ಲೆಯ 2 ಕಡೆ ಹಾಗು ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶ ದಲ್ಲಿ ಸ್ಯಾಟಲೈಟ್ ಫೋನ್ ಆಕ್ಟಿವ್ ಆಗಿದೆ.
ರಾಜ್ಯದಲ್ಲಿ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್ ಗಳು ಮತ್ತೇ ಆಕ್ಟಿವ್ ಆಗಿರುವ ಬಗ್ಗೆ ತನಿಖೆ ಚುರುಕು ಗೊಂಡಿವೆ.
ರಾಜ್ಯದ 5 ಕಡೆ ಸ್ಯಾಟಲೈಟ್ ಫೋನ್ ಇಂಟರ್ ಸೆಪ್ಟ್ ಮಾಡಿದ್ದ ಬೇಹುಗಾರಿಕಾ ಅಧಿಕಾರಿಗಳು ಸ್ಯಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸುತ್ತಿರುವ ನಿಗೂಢ ವ್ಯಕ್ತಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.