ನ್ಯೂಸ್

ರಾಜ್ಯ ಸರ್ಕಾರದ ಸಾಲು ಸಾಲು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಸಜ್ಜು / ರವಿಕುಮಾರ್

ವಿಜಯವಾಣಿ ಸುದ್ದಿಜಾಲ ಕೋಲಾರ

ಬರಗಾಲ ಮತ್ತು ರೈತರಿಗೆ ಬಂದಿರುವ ಸಂಕಷ್ಟ ಹಾಗೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವ ವಿಷಯ ರೈತರನ್ನು ತೀವ್ರವಾದ ಸಂಕಷ್ಟಕ್ಕೀಡು ಮಾಡಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.

ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ರಾಜ್ಯ ಮುಖಂಡರ ದಂಡು ಭಾನುವಾರ ಕೋಲಾರ ಜಿಲ್ಲೆಯ ಕುರುಡುಮಲೆ ದೇವಸ್ಥಾನಕ್ಕೆ ಆಗಮಿಸಿ, ನಂತರ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯವರು ರೈತರ ಬೆಳೆಗಳನ್ನು ತೆರುವು ಮಾಡಿರುವುದನ್ನು ವೀಕ್ಷಿಸಲು ಬರುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಪೂರ್ವ ತಯಾರಿಯಾಗಿ ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಬಳಿ ಅರಣ್ಯ ಇಲಾಖೆಯವರು ರೈತರು ಬೆಳೆದ ತರಕಾರಿ ಬೆಳೆಗಳನ್ನು ತೆರುವು ಮಾಡಿರುವುದನ್ನು ವೀಕ್ಷಿಸಿ ಮಾತನಾಡಿ, ರಾಜ್ಯದಲ್ಲಿ ಬರಗಾಲ ಮತ್ತು ರೈತರಿಗೆ ಬಂದಿರುವ ಸಂಕಷ್ಟ ಮತ್ತು ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವ ವಿಷಯ ಕುರಿತು ಹಾಗೂ ವಿದ್ಯುತ್ ಸಮಸ್ಯೆ, ಬರಗಾಲ, ರಾಜ್ಯ ಸರ್ಕಾರದ ಸಾಲು ಸಾಲು ಸಮಸ್ಯೆ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಮತ್ತು ಪಾಳ್ಯ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ರೈತರು ನೂರಾರು ಎಕೆರೆಯಲ್ಲಿ ಬೆಳೆದಿರುವ ತರಕಾರಿ ಬೆಳೆಗಳು ಹಾಗೂ ಮಾವಿನ ಮರಗಳನ್ನು ಬುಡಸಮೇತವಾಗಿ ಅರಣ್ಯ ಇಲಾಖೆಯವರು ನಮಗೆ ಸೇರಿದ್ದು ಎಂದು ರಾತ್ರೋ ರಾತ್ರಿ ಕಳ್ಳರಂತೆ ಧ್ವಂಸ ಮಾಡಿ ನಾಶಪಡಿಸಿರುವುದರ ವಿರುದ್ಧ ಹೋರಾಟ ನಡೆಸಲು ಕುರುಡುಮಲೆ ದೇವಸ್ಥಾನದಿಂದ ಸನ್ನದ್ದರಾಗಿದ್ದಾವೆ. ಅದು ಶ್ರೀನಿವಾಸಪುರದಿಂದಲೇ ಪ್ರಾರಂಭವಾಗಲಿದೆ ಎಂದರು.

ರಾತ್ರೋ ರಾತ್ರಿ ನೂರಾರು ಜೆಸಿಬಿಗಳನ್ನು ಕರೆಸಿ ರೈತರ ಬೆಳಗಳನ್ನು ನಾಶ ಪಡಿಸಿರುವುದು ಸಿದ್ದರಾಮಯ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ಇದು ಮನುಷ್ಯರ ಸರ್ಕಾರ ಅಲ್ಲ, ರೈತರನ್ನು ದರೋಡೆಕಾರರಂತೆ ನೋಡುತ್ತಿದ್ದಾರೆ. ಇಂತಹದ್ದನ್ನು ನೋಡಲು ಬರದ ಸರ್ಕಾರದ ಮಂತ್ರಿಗಳು ನೂರು ದಿನಗಳ ಸಂಭ್ರಮವನ್ನು ಆಚರಣೆ ಮಾಡುತ್ತಿರುವ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ರೈತರಿಗೆ ಕಂದಾಯ ಇಲಾಖೆಯಲ್ಲಿ ನೀಡಿರುವ ದಾಖಲೆಗಳಿವೆ, ಕೋರ್ಟ್ ತಡೆಯಾಜ್ಞೆಯೂ ಇದ್ದರೂ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರು ನಾಶ ಮಾಡಿದ್ದರು, ಸರ್ಕಾರ ಸುಮ್ಮನೆ ಕುಳಿತುಕೊಂಡಿದೆ. ರಾಜ್ಯ ನಾಯಕರು ಕುರುಡುಮಲೆಗೆ ಬರಲಿದ್ದಾರೆ. ಅವರಿಂದ ರೈತರ ಜಮೀನುಗಳನ್ನು ವೀಕ್ಷಣೆ ಮಾಡಿಸುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ಪರಿಹಾರ ಕೊಡುವ ಕೆಲಸ ಹಾಗೂ ತೆರವು ನಿಲ್ಲಿಸುವಂತೆ ಒತ್ತಡ ತರಲಾಗುವುದು, ಹಾಗೂ ರೈತರ ಜಮೀನನ್ನು ಬಿಟ್ಟುಕೊಡಬೇಕು. ನಮ್ಮ ಸರ್ಕಾರ ರೈತರ ಪರವಾಗಿರುತ್ತದೆ ಎಂದರು.

ಸಂಸದ ಮುನಿಸ್ವಾಮಿ ಮಾತನಾಡಿ, ಪಾಳ್ಯದಲ್ಲಿ ಅರಣ್ಯ ಇಲಾಖೆಯವರು ಒತ್ತುವರಿ ತೆರವು ಮಾಡುವ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಯಾರೂ ಇರಲಿಲ್ಲ, ಆದರೂ ನನ್ನ ಮೇಲೆ ಮತ್ತು ನಮ್ಮ ಮುಖಂಡರ ಹಾಗೂ ರೈತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ರೈತರು ೩೦ ೩೦ ಕುಂಟೆ ಒತ್ತುವರಿ ಮಾಡಿಕೊಂಡು ಸಾಗುವಳಿ ಚೀಟಿಗಳನ್ನು ಪಡೆದು ೩೦ ೪೦ ವರ್ಷಗಳಿಂದ ಸ್ವಾಧೀನದಲ್ಲಿದ್ದಾರೆ. ಅಂತವರನ್ನು ಒಕ್ಕಲೆಬ್ಬಿಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ಅದಕ್ಕೆ ಸರ್ಕಾರ ಬೆಂಬಲ ನೀಡುತ್ತಿದೆ. ಇದು ಬಹಳ ದಿನಗಳ ಕಾಲ ನಡೆಯುವುದಿಲ್ಲ. ರೈತರ ತಂಟೆಗೆ ಬಂದರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.

ಎಂ.ಎಲ್.ಸಿ. ಕೆ.ಶಿವಪ್ರಸಾದ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಅಪ್ಪಿ, ರೋಣೂರು ಚಂದ್ರಶೇಖರ್ ಸೇರಿದಂತೆ ಬಿಜೆಪಿ ಮುಖಂಡರು, ರೈತರು ಉಪಸ್ಥಿತರಿದ್ದು.

ಚಿತ್ರ ೧೬ ಕೆ.ಎಲ್.ಆರ್. ೦೩ : ಕೇತಗಾನಹಳ್ಳಿ ಅರಣ್ಯ ಇಲಾಖೆಯವರು ಒತ್ತುವರಿ ನೆಪದಲ್ಲಿ ರೈತರ ಜಮೀನುಗಳನ್ನು ನಾಶ ಪಡಿಸಿರುವುದನ್ನು ವೀಕ್ಷಿಸಿದ ಸಂಸದ ಮುನಿಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಎಂ.ಎಲ್.ಸಿ. ಕೇಶವಪ್ರಸಾದ್

ಚಿತ್ರ ೧೬ ಕೆ.ಎಲ್.ಆರ್. ೦೩ಎ : ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಸಂಸದ ಮುನಿಸ್ವಾಮಿ, ಎಂ.ಎಲ್.ಸಿ.ಗಳಾದ ರವಿಕುಮಾರ್, ಕೇಶವಪ್ರಸಾದ್