ನ್ಯೂಸ್

ರಾಜಕೀಯ ಬಿಟ್ಟರೂ ಸಹಕಾರ ಕ್ಷೇತ್ರ ಬಿಡಲಾರೆ / ಸಹಕಾರ ಕ್ಷೇತ್ರ ರಾಜಕೀಯ ನಾಯಕರನ್ನು ಹುಟ್ಟು ಹಾಕುವ ಸಾಮರ್ಥ್ಯ ಇದೆ / ಮಾಜಿ ಸಚಿವ ಕೆ. ಶ್ರೀನಿವಾಸಗೌಡ

ವಿಜಯವಾಣಿ ಸುದ್ದಿಜಾಲ ಕೋಲಾರ
ಸಹಕಾರ ಕ್ಷೇತ್ರ ರಾಜಕೀಯ ನಾಯಕರನ್ನು ಹುಟ್ಟು ಹಾಕುವ ಸಾಮಾರ್ಥ್ಯವನ್ನು ಹೊಂದಿದೆ ಎಂಬುವುದಕ್ಕೆ ನಾನೇ ನಿದರ್ಶನವಾಗಿದ್ದೇನೆ. ರಾಜಕೀಯವನ್ನು ಬಿಟ್ಟರೂ ಸಹಕಾರ ಕ್ಷೇತ್ರವನ್ನು ಬಿಡಲಾರೆ. ಸಹಕಾರ ಕ್ಷೇತ್ರದಿಂದ ಆಯ್ಕೆಯಾಗಿ ರಾಷ್ಟಿçÃಯ ಮಟ್ಟದ ಇಫ್ಕೋ ಸಂಸ್ಥೆಯ ಅಧ್ಯಕ್ಷನಾಗಿ ರಾಜ್ಯ ಸರ್ಕಾರದಲ್ಲಿ ಮಂತ್ರಿಯೂ ಆದೆ ಎಂದು ಮಾಜಿ ಸಚಿವ ಹಾಗೂ ಇಫ್ಕೋ ಸಂಸ್ಥೆಯ ಅಧ್ಯಕ್ಷ ಕೆ.ಶ್ರೀನಿವಾಸಗೌಡ ತಿಳಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಸಹಕಾರ ಕ್ಷೇತ್ರವೆಂದರೆ ಸಾಮಾನ್ಯವಲ್ಲ. ರಾಷ್ಟç ಮಟ್ಟಕ್ಕೆ ನಾನು ಬೆಳೆಸಿದೆ ಎಂಬುವುದಕ್ಕೆ ನಾನೇ ಉದಾಹರಣೆಯಾಗಿದ್ದೇನೆ. ರಾಜಕೀಯ ಬೇಕಾದರೆ ಬಿಡುತ್ತೇನೆ ಅದರೆ ಸಹಕಾರ ಕ್ಷೇತ್ರವನ್ನು ನಾನು ಉಸಿರಿರುವವರೆಗೆ ಬಿಡಲಾರೆ ಎಂದು ಈ ಹಿಂದೆಯೇ ಹೇಳಿದ್ದೆ ಅದೇ ರೀತಿ ಇಂದು ಕೋಲಾರದ ಟಿ.ಎ.ಪಿ.ಸಿ.ಎಂ.ಸಿ ನಿರ್ದೇಶಕ ಸ್ಥಾನಕ್ಕೆ ಸ್ವರ್ಧಿಸಿದ್ದೇನೆ. ನಾನು ರಾಜ್ಯದ ಕೃಷಿ ಮಂತ್ರಿಯಾಗಿ, ವಿಶ್ವಮಟ್ಟದ ಇಪ್ಕೋ ವಿಮಾ ಸಂಸ್ಥೆಯ ಅಧ್ಯಕ್ಷನಾಗಿದ್ದು, ನನಗೆ ಟಿ.ಎ.ಪಿ.ಸಿ.ಎಂ.ಸಿ. ನಿರ್ದೇಶಕ ಸ್ಥಾನಕ್ಕೆ ಸ್ವರ್ಧಿಸಲು ಯಾವೂದೇ ಮುಜುಗರವಿಲ್ಲ ಎಂದು ಕೆ.ಶ್ರೀನಿವಾಸಗೌಡರು ತಿಳಿಸಿದರು.

ನಾನು ಪ್ರಥಮವಾಗಿ ಅಣ್ಣಿಹಳ್ಳಿ ಸಹಕಾರ ಕ್ಷೇತ್ರದ ಅಧ್ಯಕ್ಷನಾಗಿ, ತಾಲ್ಲೂಕು ಬೋರ್ಡ್ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯ, ಶಾಸಕನಾಗಿ, ಸಚಿವನಾಗಿ, ವಿಶ್ವ ಮಟ್ಟದ ಇಪ್ಕೋ ಕ್ರಿಪ್ಕೋ ವಿಮಾ ಸಂಸ್ಥೆಗೆ ಅಧ್ಯಕ್ಷನಾಗಿ ಸತತವಾಗಿ ೪೦ ವರ್ಷಗಳಿಗೂ ಹೆಚ್ಚು ಕಾಲದಿಂದ ಸಹಕಾರ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದೇನೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಮಾನವಿಯತೆ ಇದೆ. ಬಡವರ ಕಣ್ಣೀರು ಒರೆಸುವ ಹಾಗೂ ಸಂಕಷ್ಟಗಳಿಗೆ ಸ್ಪಂದಿಸುವAತ ಮನೋಭಾವನೆಯು ಮುಖ್ಯವಾಗಿದ್ದು, ಇದನ್ನು ಸಹಕಾರ ಕ್ಷೇತ್ರದಲ್ಲಿ ಕಾಣಲು ಸಾಧ್ಯ ಎಂಬುವುದಕ್ಕೆ ಕಳೆದ ೪೦ ವರ್ಷಗಳಿಂದ ಇಪ್ಕೋ ಸೇವಾ ಸಂಸ್ಥೆಯಿAದ ಬಡ ರೋಗಿಗಳಿಗೆ ಹಾಗೂ ಉನ್ನತ ಶಿಕ್ಷಣಕ್ಕೆ ನೊರಾರು ಕೋಟಿ ರೂಗಳ ಚೆಕ್‌ಗಳನ್ನು ಪ್ರತಿ ತಿಂಗಳು ವಿತರಿಸುತ್ತಾ ಮುಂದುವರೆಸಿದ್ದೇನೆ ಎಂದರು.

ಯಾವೂದೇ ಕ್ಷೇತ್ರದಲ್ಲಿ ಕಲಿಕೆ ಎಂಬುವುದು ನಿರಂತರ ನಾವು ಸಂಪೂರ್ಣ ಕಲಿತಿದ್ದೇವೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಸಹಕಾರ ಕ್ಷೇತ್ರದಿಂದ ನೂರಾರು ಮಂದಿ ರಾಜ್ಯ, ರಾಷ್ಟç ಮಟ್ಟದ ಆಡಳಿತ ಚುಕ್ಕಾಣಿ ಹಿಡಿದಿರುವುದು ನಮ್ಮ ಕಣ್ಣಿನ ಮುಂದೆ ನಿದರ್ಶನಗಳಿವೆ ಎಂದು ಹೇಳಿದರು.

ನಮ್ಮ ಜಿಲ್ಲೆಯಲ್ಲಿ ಉದಾಹರಿಸುವುದಾದರೆ ಪಿ.ವೆಂಕಟಗಿರಿಯಪ್ಪ, .ಸಿ. ಬೈರೇಗೌಡ, ಇವರೆಲ್ಲಾ ಸಹಕಾರ ಕ್ಷೇತ್ರದಿಂದಲೇ ನಾಯಕರಾಗಿ ಬೆಳೆದವರು. ಇವರ ಕೊಡುಗೆಗಳು ಜಿಲ್ಲೆಗೆ ಸಾಕಷ್ಠಿದೆ. ಇವರ ಮಾರ್ಗದರ್ಶನದಲ್ಲಿ ಸಹಕಾರ ಕ್ಷೇತ್ರದಿಂದ ಬೆಳೆದವರಲ್ಲಿ ನಾನು ಓರ್ವನಾಗಿದ್ದೇನೆ ಎಂದರು.

ಇAದು ಸಾಕಷ್ಟು ಸಹಕಾರ ಸಂಘಗಳು ಮುಳುಗುವ ಹಂತ ತಲುಪಿವೆ. ಅಂತಹ ಸಂಘಗಳು ಏಕೆ ಈ ಪರಿಸ್ಥಿತಿಗೆ ಬಂದಿದೆ ಎಂದು ಕಂಡು ಹಿಡಿಯುವುದು ಹಾಗೂ ಸಂಘಗಳಿಗೆ ಬೆಳೆಯಲು ಬೇಕಾದ ಪರಿಹಾರಗಳನ್ನು ಕಂಡು ಕೊಳ್ಳ ಬಹುದಾಗಿದೆ ಎಂಬುವುದಕ್ಕೆ ನಮ್ಮ ಕೋಲಾರದ ಡಿ.ಸಿ.ಸಿ. ಬ್ಯಾಂಕ್ ಉದಾಹರಣೆಯಾಗಿದೆ. ಬ್ಯಾಲಹಳ್ಳಿ ಗೋವಿಂದಗೌಡ ಮುಳುಗುವ ಹಂತದಲ್ಲಿದ್ದ ಡಿ.ಸಿ.ಸಿ. ಬ್ಯಾಂಕ್‌ನ್ನು ಯಾರೂ ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಬೆಳೆಸಿರುವುದು ನಮ್ಮ ಕಣ್ಣ ಮುಂದೆಯೇ ಉದಾಹರಣೆಯಾಗಿದೆ ಎಂದರು.

ಪ್ರಾರಂಭದಲ್ಲಿ ಗೋವಿಂದಗೌಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿದಾಗ ವಿರೋಧಿಸಿದರೂ ಸಹ ನಂತರದಲ್ಲಿ ಅವರಿಗೆ ಸಾಕಷ್ಟು ಸಹಕಾರ ನೀಡಿದೆ. ಇತರರು ಸಹ ಸಹಕಾರ ನೀಡಿದ ಹಿನ್ನಲೆಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಸುಸ್ಥಿತಿಗೆ ಬರಲು ಸಾದ್ಯವಾಯಿತು. ಇದಕ್ಕೆ ಸಹಕಾರ ಸಂಘದ ಅಧಿಕಾರಿಗಳು ನಿರ್ದೇಶಕರುಗಳುಸಹಕಾರದಿಂದ ಸಾಧನೆ ಮಾಡಬಹುದಾಗಿದೆ ಎಂಬುದಕ್ಕೆ ನಂಬರ್ ಓನ್ ಸ್ಥಾನಕ್ಕೆ ಬೆಳೆಯುವಂತಾಯಿತು ಎಂದು ತಿಳಿಸಿದರು.

ಗ್ರಾಮೀಣ ಜನರ ಅರ್ಥಿಕ ಸುಭದ್ರತೆಗಾಗಿ ಕೆಲಸ ಮಾಡುತ್ತಿರುವ ಬಹು ಮಹತ್ವರದ ಕ್ಷೇತ್ರವೆಂದರೆ ಸಹಕಾರ ಕ್ಷೇತ್ರವಾಗಿದೆ. ಗ್ರಾಮಿ ಬದುಕನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಬಡವರ ಸ್ವಾವಲಂಭಿ ಬದುಕಿಗೆ ಸಹಕಾರ ಸಂಸ್ಥೆಗಳು ಪೂರಕವಾಗಿದೆ. ನಮ್ಮ ರಾಜ್ಯದಲ್ಲಿ ೪೬ ಸಾವಿರ ಸಹಕಾರ ಸಂಘಗಳಿದೆ. ೨.೭೫ ಕೋಟಿ ಸದಸ್ಯರು ಇದ್ದಾರೆ. ೧,೪೨ ಲಕ್ಷ ಸಾವಿರ ಕೋಟಿ ರೂಗಳ ವಹಿವಾಟು ನಡೆಯುತ್ತಿದೆ ಎಂದು ಶ್ರೀನಿವಾಸಗೌಡರು ವಿವರಿಸಿದರು.

ಬಾಕ್ಸ್
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಕೋಲಾರಕ್ಕೆ ಭೇಟಿದ ಸಂದರ್ಭದಲ್ಲಿ ನಮ್ಮ ಮನೆಗೆ ಭೇಟಿ ನೀಡಿದ್ದರು. ಇದರಲ್ಲಿ ವಿಶೇಷವೇನು ಇಲ್ಲ. ಅವರು ಕಳೆದ ವಿಧಾನ ಸಭೆಯ ಚುನಾವಣೆ ಸಂದರ್ಭಧಲ್ಲಿ ಕೋಲಾರದಿಂದ ಸ್ವರ್ದಿಸಲು ಕೋರಲಾಗಿತ್ತು. ಕೋಲಾರದಿಂದ ಸ್ಪರ್ಧಿಸಿದ್ದರೆ, ಕೋಲಾರದಿಂದ ೨ನೇ ಮುಖ್ಯಮಂತ್ರಿ ಮಾಡುವ ಕನಸು ನನ್ನದ್ದಾಗಿತ್ತು. ಆದರೆ ಅದು ಹುಸಿಯಾಯಿತು. ಆ ಹಿನ್ನಲೆಯಲ್ಲಿ ಕೋಲಾರಕ್ಕೆ ಬಂದಲ್ಲಿ ನನ್ನ ಅಭಿಮಾನದಿಂದ ನಮ್ಮ ಮನೆಗೆ ಭೇಟಿ ನೀಡಿದ್ದರು. ರಾಜ್ಯದಲ್ಲಿ ನನಗೆ ಯಾವೂದಾದರೂ ಸ್ಥಾನ ಮಾನ ನೀಡುವುದಾಗಿ ಹಿಂದೆ ತಿಳಿಸಿದ್ದರು ನಿಜ. ಅದರೆ ಅವರು ನೀಡಲಿ ಬಿಡಲಿ ನಾನು ರಾಜಕೀಯ ಬೇಕಾದರೆ ಬಿಡುತ್ತೇನೆ ಅದರೆ ಸಹಕಾರ ಕ್ಷೇತ್ರವನ್ನು ಬಿಡಲಾರೆ ಎಂದರು

ಚಿತ್ರ ೦೬ ಕೆ.ಎಲ್.ಆರ್. ೦೧ : ಮಾಜಿ ಸಚಿವ ಕೆ.ಶ್ರೀನಿವಾಸಗೌಡ ರವರ ಭಾವಚಿತ್ರ