ನ್ಯೂಸ್

ರಾಜಕಾರಣಕ್ಕಾಗಿ ಕೋಮುಗಲಭೆ ಪ್ರವೃತ್ತಿ ಬಿಟ್ಟು ಏಸು ಕ್ರಿಸ್ತನ ನೆಮ್ಮದಿಯ ದಾರಿಯಲ್ಲಿ ನಡೆಯಬೇಕು/ಕೆ.ಹೆಚ್ ಮುನಿಯಪ್ಪ,

ವಿಜಯವಾಣಿ ಸುದ್ದಿಜಾಲ ಕೋಲಾರ

ಕೇವಲ ರಾಜಕಾರಣಕ್ಕಾಗಿ ಧರ್ಮ ಧರ್ಮಗಳ ಮಧ್ಯೆ ಗಲಾಟೆಗಳನ್ನು ನೆಡೆಸಿ ತಮ್ಮ ಸ್ವಾರ್ಥಕ್ಕಾಗಿ ಕೋಮುಗಲಭೆ ಸೃಷ್ಟಿಸುವುದನ್ನು ಬಿಟ್ಟು ಜಾತ್ಯಾತೀತ ರಾಷ್ಟ್ರದಂತೆ ಏಸು ಕ್ರಿಸ್ತನ ಸಂದೇಶಗಳನ್ನು ಪಾಲಿಸುವ ಮೂಲಕ ನೆಮ್ಮದಿಯ ದಾರಿಯಲ್ಲಿ ನಡೆಯಬೇಕಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಕ್ರಿಸ್ಮಸ್ ಹಬ್ಬದ ಪ್ರಯುಕ್ತವಾಗಿ ಕಾಂಗ್ರೆಸ್ ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷ ಹಾಗೂ ಕ್ರೈಸ್ತ ಯುವ ಮುಖಂಡ ಟಿ.ಎಸ್ ಸುಧೀರ್ ಅವರ ನೇತೃತ್ವದಲ್ಲಿ ಬಡವರಿಗೆ ಬಟ್ಟೆ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರಾಜಕೀಯದ ಹೆಸರಲ್ಲಿ ಧರ್ಮಗಳನ್ನು ತರಬಾರದು ಎಲ್ಲರನ್ನೂ ಪ್ರೀತಿ, ವಿಶ್ವಾಸ, ಗೌರವ, ಹಾಗೂ ಸಹಬಾಳ್ವೆಯಲ್ಲಿ ಕರೆದುಕೊಂಡು ಹೋಗುವ ಗುಣ ಪ್ರತಿಯೊಬ್ಬರಲ್ಲೂ ಬರಬೇಕು. ಪಕ್ಕದಲ್ಲಿರುವ ಯಾವುದೇ ಧರ್ಮದ ಮನುಷ್ಯನಾದರೂ ಕೂಡ ಅವನು ನನ್ನ ಸಹೋದರರು ಎಂಬ ರೀತಿಯಲ್ಲಿ ಕಾಣಬೇಕು ಎಂದರು.

ಕ್ರಿಸ್ಮಸ್ ಮಾನವೀಯತೆಯ ಸಂದೇಶ ಸಾರುವ ಮತ್ತು ಏಕತೆ ಮತ್ತು ಸಮಾನತೆಯ ಹಬ್ಬ ಕ್ರಿಸ್ ಮಸ್ ಅಗಿದ್ದು ಆಚರಣೆ ಮಾನವ ಕುಲದ ಪ್ರೀತಿ ಮತ್ತು ಸೌಹರ್ದತೆಯ ಕೊಂಡಿಯಾಗಿದೆ. ಭಗವಂತನ ದಾರಿಯಲ್ಲೇ ಮಾನವರಂತೆ ಸಾಗೋಣ ಎಂದರು.

ಮುಖ್ಯಮAತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಮಾತನಾಡಿ ಸುಮಾರು ೨೦೦೦ ವರ್ಷಗಳ ಹಿಂದೆಯೇ ಏಸು ಕ್ರಿಸ್ತ ಹೇಳಿದ ಸಂದೇಶಗಳು ಇವತ್ತಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಆನೇಕ ಜಾತಿ ಧರ್ಮಗಳು ಇದ್ದರೂ ನಾವು ಎಲ್ಲರೂ ಮನುಷ್ಯರಾಗಿದ್ದೇವೆ. ಪ್ರತಿಯೊಬ್ಬರೂ ಆಕಸ್ಮಿಕವಾಗಿ ಒಂದೂAದು ಜಾತಿ ಧರ್ಮದಲ್ಲಿ ಹುಟ್ಟಿರಬಹುದು ಆದರೆ ಕೊನೆಗೆ ನಾವು ಮನುಷ್ಯ ಎಂಬುದನ್ನು ಮರೆಯಬಾರದು ಎಂದರು.

ಕೆಪಿಸಿಸಿ ಪದವೀಧರ ಘಟಕದ ರಾಜ್ಯ ಅಧ್ಯಕ್ಷ ನಟರಾಜಗೌಡ ಮಾತನಾಡಿ ಕ್ರಿಸ್ಮಸ್ ಹಬ್ಬಕ್ಕೆ ಪರಂಪರೆ ಇದೆ. ಹಬ್ಬದ ಸಂಭ್ರಮಕ್ಕೆ ಸೀಮಿತವಾಗದೇ ಸೇವಾ ಮನೋಭಾವವನ್ನು ಕಾಣಬೇಕಾಗಿದೆ. ಸ್ನೇಹ, ವಿಶ್ವಾಸ, ಬರವಸೆ, ನಂಬಿಕೆ ಏಸು ಕ್ರಿಸ್ತನ ಮೂಲ ಉದ್ದೇಶವಾಗಿದೆ. ಒಂದಾಗಿ ಹೋಗುವ ಪ್ರವೃತ್ತಿ ಈ ಹಬ್ಬದಿಂದ ನಾವು ಕಲೆಯಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮ ಗುರುಗಳಿಂದ ಸೌಹಾರ್ದ ಸಂದೇಶಗಳನ್ನು ನೀಡಿದರು,

ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಹಿರಿಯ ಪತ್ರಕರ್ತ ಕೆ.ಎಸ್ ಗಣೇಶ್, ಕಾಂಗ್ರೆಸ್ ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷ ಹಾಗೂ ಕ್ರೈಸ್ತ ಯುವ ಮುಖಂಡ ಟಿ.ಎಸ್ ಸುಧೀರ್, ನಗರಸಭೆ ಸದಸ್ಯ ಮುರಳಿಗೌಡ, ಮಾಜಿ ಸದಸ್ಯರಾದ ಸೋಮಶೇಖರ್, ಸಲ್ಲಾವುದ್ದೀನ್ ಬಾಬು ಮುಖಂಡರಾದ ದಲಿತ ನಾರಾಯಣಸ್ವಾಮಿ, ರತ್ನಮ್ಮ, ಕಿಟ್ಟಣ್ಣ, ಕುರುಬಪೇಟೆ ವೆಂಕಟೇಶ್, ಚೇತನ್ ಬಾಬು, ಮನ್ಸೂರ್, ನವೀನ್ ಗೌಡ ಮುಂತಾದವರು ಇದ್ದರು.

ಚಿತ್ರ ೨೩ ಕೆ.ಎಲ್.ಆರ್. ೦೪ ನಗರದ ಕನ್ನಡ ಭವನದಲ್ಲಿ ಭಾನುವಾರ ಕ್ರಿಸ್ಮಸ್ ಹಬ್ಬದ ಪ್ರಯುಕ್ತವಾಗಿ ಬಡವರಿಗೆ ಸಚಿವ ಮುನಿಯಪ್ಪ ಬಟ್ಟೆ ವಿತರಣೆ ಮಾಡಿದರು. ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ಮುಂತಾದವರಿದ್ದರು.