ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿ ಹಾಗೂ ಬಿಡಾಡಿ ದನ/ಕರುಗಳನ್ನು ಸಾಕುತ್ತಿರುವ ಸಾಕಾಣಿದಾರರಿಗೆ ಈ ಮೂಲಕ ಎಚ್ಚರಿಕೆ ನೀಡವುದೇನೆಂದರೆ, ಮೈಸೂರು ನಗರದ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಹಂದಿ ಹಾಗೂ ಬಿಡಾಡಿ ದನ/ಕರುಗಳನ್ನು ಬಿಡುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂಬಾ ಅಡಚಣೆ ಆಗುತ್ತಿದ್ದು, ಹಲವು ಬಾರಿ ವಾಹನ ಸವಾರರು ಮಾರಣಾಂತಿಕ ಅಪಘಾತಕ್ಕೆ ಈಡಾಗಿವುರುದು ಕಂಡು ಬಂದಿರುತ್ತದೆ.
ಬಿಡಾಡಿ ಹಂದಿ ಹಾಗೂ ಬಿಡಾಡಿ ದನ-ಕರುಗಳು ಕಸದ ತೊಟ್ಟಿಗಳಲ್ಲಿ ಆಹಾರ ಸೇವಿಸುವುದಕ್ಕಾಗಿ ತೊಟ್ಟಿಯಲ್ಲಿರುವ ಕಸವನ್ನೆಲ್ಲ ಚೆಲ್ಲಾಡುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಈ ವಿಷಯಕ್ಕೆ ಸಂಬoಧಿಸಿದoತೆ ತಮಗೆ ಈಗಾಗಲೇ ಮೌಖಿಕವಾಗಿ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಹಂದಿ ಹಾಗೂ ಬಿಡಾಡಿ ದನ-ಕರು ಬಿಡುತ್ತಿರುವುದು ಕಂಡು ಬಂದಿರುತ್ತದೆ.
ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿದ್ದು, ನಗರದ ಜನತೆಯ ಆರೋಗ್ಯತೆ ಹಿತದೃಷ್ಟಿಯಿಂದ ಹಾಗೂ ಸ್ವಚ್ಛತೆ ನಿರ್ವಹಣೆಗಾಗಿ ಇನ್ನು ಮುಂದೆ ಬಿಡಾಡಿ ಹಂದಿ ಮತ್ತು ಬಿಡಾಡಿ ದನ-ಕರು ಸಾಕಾಣಿಕೆದಾರರು ಮೈಸೂರು ನಗರದ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಹಂದಿ ಹಾಗೂ ಬಿಡಾಡಿ ದನ-ಕರು ಬಿಡಬಾರದೆಂದು ಈ ಮೂಲಕ ಎಚ್ಚರಿಸಲಾಗಿದ್ದು, ಅದರಂತೆ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಹಂದಿ ಹಾಗೂ ಬಿಡಾಡಿ ದನ-ಕರು ಅಡ್ಡಾಡುವುದು ಕಂಡುಬAದಲ್ಲಿ ಯಾವುದೇ ಸೂಚನೆ ನೀಡದೆ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.