ವಿಜಯವಾಣಿ ಸುದ್ದಿಜಾಲ ಕೋಲಾರ
ರಸ್ತೆ ಸುರಕ್ಷತಾ ಸಪ್ತಾಯ ಹಾಗು ಹೆಲ್ಮೆಟ್ ಕಡ್ಡಾಯ ಧರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ನರಸಾಪುರ ಕೈಗಾರಿಕಾ ಪ್ರದೇಶದ ಅಡ್ವಿಕ್ ಹೈ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ, ಬೈಕ್ ಜಾಥಾ ನಡೆಸಿ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಿದರು.
ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಬೈಕ್ ಜಾಗೃತಿ ಜಾಥಾಕ್ಕೆ ವೇಮಗಲ್ ಸರ್ಕಲ್ ಇನ್ಸ್ಪೆಕ್ಟರ್ ಬಿ.ಪಿ ಮಂಜುನಾಥ್ ಚಾಲನೆ ನೀಡಿ ಮಾತನಾಡಿ, ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವುದು ಸಪ್ತಾಹದ ಮುಖ್ಯ ಉದ್ದೇಶ. ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸುರಕ್ಷಿತ ಪ್ರಯಾಣದ ಕಡೆ ಗಮನ ಹರಿಸಬೇಕು ಈ ಕಂಪನಿಯ ಮಾದರಿಯಂತೆ ಎಲ್ಲಾ ಕಂಪನಿಗಳು ಈ ಸಪ್ತಾಹಕ್ಕೆ ಕೈ ಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.
ಕಂಪನಿಯ ಸಂಪನ್ಮೂಲ ಅಧಿಕಾರಿ ಮಾನಸ್ ಮಾತನಾಡಿ, ಕಂಪನಿಯ ಸಿ.ಎಸ್.ಆರ್ ಅನುದಾನದಲ್ಲಿ ಸುಮಾರು ೫೦ ಉಚಿತ ಹೆಲ್ಮೆಟ್ ಗಳನ್ನು ವಿತರಿಸಲಾಗಿದ್ದು ಪ್ರತಿ ವರ್ಷ ಕಂಪನಿಯ ಸಿಬ್ಬಂದಿಗೆ ಮಾತ್ರವೇ ನೀಡುತ್ತಿದ್ದು ಈ ವರ್ಷ ಹೊರಗಿನ ವಾಹನ ಸವಾರರಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು,
ಬಳಿಕ ನರಸಾಪುರ ಕೈಗಾರಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಸವಾರಿ ಮಾಡುತ್ತಿದ್ದ ಸವಾರರಿಗೆ ಮೊದಲು ಗುಲಾಬಿ ಹೂ ಕೊಟ್ಟು ಹೆಲ್ಮೆಟ್ ಜಾಗೃತಿ ತಿಳಿಸಿ, ಉಚಿತವಾಗಿ ಹೆಲ್ಮೆಟ್ ನೀಡಿದರು. ಹೆಲ್ಮೆಟ್ ವಿತರಣೆ ವೇಳೆ ಗಣಪತಿ ವೇಷಾಧಾರಿಯನ್ನು ಧರಸಿದ ವ್ಯಕ್ತಿಯಿಂದ ಹೆಲ್ಮೆಟ್ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು ಈ ಸಂದರ್ಭದಲ್ಲಿ ಕಂಪನಿಯ ನೌಕರರು, ಪೋಲಿಸ್ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರು ಇದ್ದರು.
ಚಿತ್ರ ೧೭ ಕೆ.ಎಲ್.ಆರ್. ೦೨ : ಬೆಂಗಳೂರು ಕೋಲಾರ ಹೆದ್ದಾರಿಯಲ್ಲಿ ಖಾಸಗಿ ಕಂಪನಿಯಿAದ ಉಚಿತವಾಗಿ ಹೆಲ್ಮೆಟ್ ವಿತರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಯ ಬೈಕ್ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.