ವಿಜಯವಾಣಿ ಸುದ್ದಿಜಾಲ ಕೋಲಾರ
ನೀರು ಮನುಷ್ಯ, ಪ್ರಾಣಿ, ಗಿಡಮರಗಳ ಜೀವ ರಕ್ಷಣೆಗೆ ಅಮೂಲ್ಯವಾಗಿದ್ದು, ಅದರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ನೀರು ಮತ್ತು ನೀರಿನ ಮೂಲಗಳನ್ನು ರಕ್ಷಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ತಿಳಿಸಿದರು.
ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಕೋಲಾರದ ರವಿ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ರವಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ `ಹಿಮಪಾತ ರಕ್ಷಣೆ' ಘೋಷವಾಕ್ಯದೊಂದಿಗೆ ವಿಶ್ವಜಲ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷ ನೈರ್ಮಲ್ಯ ಮತ್ತು ಶುದ್ದ ಕುನೀರಿನ ಕೊರತೆಯಿಂದ ಬರುವ ಕಾಯಿಲೆಗಳಿಂದಾಗಿ ೧೬ ಲಕ್ಷ ಜನ ಸಾಯುತ್ತಾರೆ. ವಿಶ್ವದ ಶೇ.೨೫ ರಷ್ಟು ಮಂದಿಗೆ ಶುದ್ದ ಕುಡಿಯುವ ನೀರು ಲಭ್ಯವಿಲ್ಲ. ಆದ್ದರಿಂದ ನೀರಿನ ಮಹತ್ವ ಅರಿತು ಬಳಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಕೆರೆಗಳಿಗೆ ಸಾರ್ವಜನಿಕರು ತ್ಯಾಜ್ಯ ವಸ್ತುಗಳು, ಕಸ ಹಾಕಿ ಕೆರೆಗಳನ್ನು ನಾಶಪಡಿಸುತ್ತಿದ್ದಾರೆ. ಆದ್ದರಿಂದ ಕೆರೆಗಳನ್ನು ನಾಶ ಪಡಿಸದೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಕೋಲಾರದಲ್ಲಿ ನೀರಿಲ್ಲದೆ ಬರ ಪರಿಸ್ಥಿತಿ ಇದೇ ಇದನ್ನು ಹೊಗಲಾಡಿಸಲು ಜಲ ಸಂರಕ್ಷಣೆ ಆಗಬೇಕು. ಕೆರೆಗಳ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಮುಂದಿನ ಪೀಳಿಗೆಯವರಿಗೆ ಕೆರೆಗಳನ್ನು ಉಳಿಸಬೇಕು. ಅಂತರ್ಜಲ ಮಟ್ಟವು ಹೆಚ್ಚಾಗಳು ಕೆರೆಗಳು ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರವಿ ವಿದ್ಯಾಸಂಸ್ಥೆ ನಿರ್ದೇಶಕ ನರೇಶಬಾಬು ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ನೀರಿಗೆ ತುಂಬಾ ತೊಂದರೆ ಇದೆ. ಕೆರೆಗಳನ್ನು ಉಳಿಸುವುದು ಎಲ್ಲರ ಜವಾಬ್ದಾರಿ, ನೀರನ್ನು ಅವಶ್ಯಕತೆ ಇದ್ದಷ್ಟು ಬಳಸಿ ನೀರನ್ನು ವ್ಯರ್ಥಮಾಡಬೇಡಿ. ಪ್ರಪಂಚದಲ್ಲಿ ಅತ್ಯಮೂಲ್ಯ ವಸ್ತು ನೀರು ಅದನ್ನು ಉಳಿಸಬೇಕು ಎಂದು ತಿಳಿಸಿದರು.
ಬಿಎಡ್ ಕಾಲೇಜು ಪ್ರಾಂಶುಪಾಲ ಮಂಜುನಾಥರೆಡ್ಡಿ, ಪ್ರೊ.ಚಿನ್ನಪ್ಪ, ಶಿಕ್ಷಕ ಚೌಡಪ್ಪ, ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಹೂವಳ್ಳಿ ನಾಗರಾಜ್, ಅರೆಕಾಲಿಕ ಕಾನೂನು ಸೇವಕರಾದ ಶ್ಯಾಮಲಾ ಮತ್ತಿತರರು ಭಾಗವಹಿಸಿದ್ದರು.
ಚಿತ್ರ ೨೫ ಕೆ.ಎಲ್.ಆರ್. ೦೫ : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಕೋಲಾರದ ರವಿ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ರವಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ `ಹಿಮಪಾತ ರಕ್ಷಣೆ' ಘೋಷವಾಕ್ಯದೊಂದಿಗೆ ವಿಶ್ವಜಲ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ನ್ಯಾಯಾಧೀಶ ಸುನೀಲ್ ಎಸ್. ಹೊಸಮನಿ, ರವಿ ವಿದ್ಯಾ ಸಂಸ್ಥೆ ನಿರ್ದೇಶಕ ನರೇಶ್ ಬಾಬು, ಪ್ರಾಂಶುಪಾಲ ಮಂಜುನಾಥ ರೆಡ್ಡಿ ಮುಂತಾದವರು ಇದ್ದರು.