ನ್ಯೂಸ್

ರನ್ಯಾ ಬಂಧನದ ವಿಡಿಯೋ ತುಣುಕು ಸಂಗ್ರಹಕ್ಕೆ ಮನವಿ : ಕೇಂದ್ರ ಹಾಗೂ ಡಿಆರ್‌ಐಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಆರೋಪದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಡಿಆರ್‌ಐ ಅಧಿಕಾರಿಗಳು ತಮ್ಮನ್ನು ವಶಕ್ಕೆ ಪಡೆದಿರುವ ಮಾ.3ರಿಂದ ಮಾ.4ರ ಬೆಳಗಿನ ಜಾವದಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಬೇಕು ಎಂದು ರನ್ಯಾ ರಾವ್ ಸಲ್ಲಿಸಿರುವ ಅರ್ಜಿಯ ಸಂಬಂಧ ಕೇಂದ್ರ ಸರ್ಕಾರ ಹಾಗೂ ಡಿಆರ್‌ಐಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ರನ್ಯಾ ಪ್ರತಿನಿಧಿಸಿದ್ದ ಪರ ವಕೀಲ ಕಿರಣ್ ಜವಳಿ ವಾದ ಮಂಡಿಸಿ ಅರ್ಜಿದಾರರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ದಿನದ ಸಿಸಿಟಿವಿ ತುಣುಕನ್ನು ಸಂಗ್ರಹಿಸಿಡಲು ಸಂಬಂಧಿಸಿದವರಿಗೆ ನಿರ್ದೇಶಿಸಬೇಕು. 30 ಕಳೆದ ತಕ್ಷಣ ಸ್ವಯಂಚಾಲಿತವಾಗಿ ವಿಮಾನ ನಿಲ್ದಾಣದ ದತ್ತಾಂಶ ಡಿಲೀಟ್ ಆಗುತ್ತದೆ. ರನ್ಯಾ ಬಂಧನವಾಗಿ ನಾಳೆಗೆ 30 ದಿನಗಳಾಗಲಿದ್ದು, ಅದಕ್ಕೂ ಮುನ್ನ ಸಿಸಿಟಿವಿ ದತ್ತಾಂಶ ಸಂಗ್ರಹಿಸಲು ಆದೇಶಿಸಬೇಕು ಎಂದು ಮನವು ಮಾಡಿದರು

ಇದನ್ನು ಆಲಿಸಿದ ಪೀಠವು ಪ್ರತಿವಾದಿಗಳಾದ ಕೆಐಎಎಲ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕಸ್ಟಮ್ಸ್ ಇಲಾಖೆಯ ಪರವಾಗಿ ಸಹಾಯಕ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್, ಡಿಆರ್‌ಐಗೆ ನೋಟಿಸ್ ಜಾರಿಗೊಳಿಸಿ ಬುಧವಾರಕ್ಕೆ (ಏ.2)ವಿಚಾರಣೆ ಮುಂದೂಡಿದೆ.