ಯೂನಿಕ್ ಅಥ್ಲೆಟಿಕ್ ಕ್ಲಬ್ ವತಿಯಿಂದ ನಗರದ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ಆ.10ರಂದು ಬೆಳಗ್ಗೆ 8 ಗಂಟೆಗೆ ರನ್ ಫಾರ್ ಲೈಫ್ ಅಥ್ಲೆಟಿಕ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಸದಸ್ಯ ಬಿ.ಎನ್.ಮಹೇಶ್ ತಿಳಿಸಿದರು.
ಕ್ರೀಡಾಪಟು ಚಿರಂತ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. 4-6, 6-8, 8-10,10-12, 12-14, 14-16, 16-18 ವರ್ಷದವರೆಗಿನ ವಯೋಮಾನದವರಿಗೆ ಕ್ರಮವಾಗಿ 40 ಮೀಟರ್‌ರಿಂದ 300 ಮೀಟರ್ ರನ್ನಿಂಗ್, ಲಾಂಗ್ ಜಂಪ್ ಸ್ಪರ್ಧೆ ಇರಲಿದೆ. ಅಲ್ಲದೇ 4*100 ರಿಲೇ ಸ್ಪರ್ಧೆಯಲ್ಲಿ 12-14, 14-16,16-18 ವರ್ಷದೊಳಗಿನ ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಲಾವಣ್ಯ, ಹರ್ಷಿತ, ಹೇಮಾ ಶಾ ರಜಪೂತ್ ಇದ್ದರು.