ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ ಯುವಕರು. 
ನ್ಯೂಸ್

ರಕ್ತದಾನದಲ್ಲಿ ದಾಖಲೆ

ಗುಂಡ್ಲುಪೇಟೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ಕಾರ್ಯಾಕರ್ತರು ಶನಿವಾರ ರಕ್ತದಾನ ಮಾಡಿ ದಾಖಲೆ ಬರೆದರು.

ಇದುವರೆಗೆ ನಡೆಸಿದ ಶಿಬಿರಗಳಲ್ಲಿ ಗರಿಷ್ಠ 30 ರಿಂದ 35 ಜನರು ರಕ್ತದಾನ ಮಾಡುತ್ತಿದ್ದರು. ಆದರೆ, ಶನಿವಾರ 76 ಜನರು ದಾನ ಮಾಡಿ ದಾಖಲೆ ನಿರ್ಮಿಸಿದ್ದಾರೆ ಎಂದು ರಕ್ತನಿಧಿ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋದಿ ಜನ್ಮದಿನದ ಪ್ರಯುಕ್ತ ಬಿಜೆಪಿ ಆಯೋಜಿಸಿದ್ದ ಸೇವಾ ಪಾಕ್ಷಿಕದ ಅಂಗವಾಗಿ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್, ಯುವ ಮೊರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ತಾಲೂಕು ಮೋರ್ಚಾ ಸುನಿಲ್ ಮೂಡ್ಲು, ಮಂಡಲ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಮಹದೇವಸ್ವಾಮಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಪುರಸಭೆ ಸದಸ್ಯ ಶಶಿಧರ್ ಸೇರಿದಂತೆ 76 ಕಾರ್ಯಕರ್ತರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಬಗರ್ ಹುಕುಂ ಸಮಿತಿಯ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಪುರಸಭಾಧ್ಯಕ್ಷ ಪಿ.ಗಿರೀಶ್, ಸದಸ್ಯದಾರ ಕಿರಣ್‌ಗೌಡ, ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಎನ್.ಮಲ್ಲೇಶ್, ಎಪಿಎಂಸಿ ಮಾಜಿ ಸದಸ್ಯ ಸುಜೀಂದ್ರ, ಮುಖಂಡರಾದ ಸಿ.ಮಹದೇವಪ್ರಸಾದ್, ಎಸ್.ಸಿ.ಮಂಜುನಾಥ್, ಮಾಡ್ರಹಳ್ಳಿ ನಾಗೇಂದ್ರ, ಚನ್ನಮಲ್ಲೀಪುರ ಬಸವಣ್ಣ, ಶಿವಪುರ ಮಂಜು, ಮಹೇಂದ್ರ ಮತ್ತಿತರರಿದ್ದರು.