ನ್ಯೂಸ್

ರಂಗಸಮುದ್ರ ಪ್ಯಾಕ್ಸ್‌ಗೆ 12 ನಿರ್ದೇಶಕರ ಅವಿರೋಧ ಆಯ್ಕೆ

ತಿ.ನರಸೀಪುರ: ತಾಲೂಕಿನ ರಂಗಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2025-30 ರ ಅವಧಿಗೆ ನಡೆದ ಚುನಾವಣೆಯಲ್ಲಿ 12 ಜನ ನಿರ್ದೇಶಕರ ಸ್ಥಾನಕ್ಕೆ ಸಾಲಗಾರರ ಕ್ಷೇತ್ರದಿಂದ ಸಿ.ಬಸವೇಗೌಡ, ಟಿ.ವಾಸುದೇವ, ಆರ್.ಕಿರಣ್, ಎ.ಎಸ್. ಚಂದ್ರಶೇಖರ್, ಸಿದ್ದರಾಜು, ಮಂಜು, ಗೋಪಾಲ್, ರತ್ನಮ್ಮ, ರೇಖಾ, ಕಲ್ಯಾಣಮ್ಮ, ಜವರಯ್ಯ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ರೇವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಮಲ್ ಕುಮಾರ್ ತಿಳಿಸಿದರು.

ಸಂಘದ ನಿರ್ದೇಶಕ ಟಿ. ವಾಸುದೇವ ಮಾತನಾಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನುರಾಜ್ ನಿಧನದ ನಂತರ ಹೊಸ ಕಾರ್ಯ ನಿರ್ವಹಣಾಧಿಕಾರಿ ನೇಮಕ ಮಾಡಿಕೊಳ್ಳದೆ ಸಂಘದ ಅಭಿವೃದ್ಧಿಯಲ್ಲಿ ಕುಂಠಿತವಾಗಿದ್ದು, ಕೂಡಲೇ ಇಒ ನೇಮಕ ಮಾಡಿಕೊಂಡು ಸಂಘದ ಅಭಿವೃದ್ಧಿ ಮಾಡಲು ಪಕ್ಷಾತೀತವಾಗಿ ಎಲ್ಲ ಸದಸ್ಯರು ಸಹಕರಿಸಬೇಕು. ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಮತ್ತು ಕೀಟನಾಶಗಳನ್ನು ಸಹ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಅನಿಲ್ ಕುಮಾರ್, ಮುಖಂಡರಾದ ತುಂಬಲ ಪ್ರಶಾಂತ್ ಬಾಬು, ಆರ್.ಮಂಜುನಾಥ, ಚಿಕ್ಕರೇವಣ್ಣ, ಆರ್.ಎಸ್.ರವಿಕುಮಾರ್, ಶೇಖರ್, ಆರ್.ಮಹದೇವ, ಕೆ.ನಾರಾಯಣ, ಜಯರಾಮು, ಮಂಜುನಾಥ ಹೆಗ್ಗಡೆ, ಆರ್.ಸಿ.ರೇವಣ್ಣ, ಮರಿದೇವೇಗೌಡ, ಪ್ರಭುಸ್ವಾಮಿ, ಅನಿಲ್, ಎಚ್.ಎ. ಮಂಜು,ಪ್ರಸಾದ್, ಬಸವರಾಜು ಹಾಗೂ ಇತರರು ಇದ್ದರು.