ನ್ಯೂಸ್

ರಂಗಕರ್ಮಿ ಧನಂಜಯಗೆ ರಂಗ ರತ್ನ ಪ್ರಶಸ್ತಿ

ಹಿರಿಯ ರಂಗಕರ್ಮಿ ನ.ರತ್ನ ಅವರ ಸ್ಮರಣಾರ್ಥ ಅವರ ಒಡನಾಡಿಗಳು ಆಯೋಜಿಸಿದ್ದ ‘ರತ್ನ ಎಂದೆಂದಿಗೂ ರತ್ನ’ ಎಂಬ ಕಾರ್ಯಕ್ರಮದಲ್ಲಿ ರಂಗಕರ್ಮಿ ಎನ್.ಧನಂಜಯಗೆ ‘ರಂಗ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ.ರತ್ನ ಅವರು ರಚಿಸಿರುವ ಕೈಯಲ್ಲಿ ಕೈಲಾಸಂ ಪುಸ್ತಕವನ್ನು ಗೀತಾ ಬುಕ್ ಹೌಸ್‌ನ ಎಂ.ಸತ್ಯನಾರಾಯಣರಾವ್ ಬಿಡುಗಡೆಗೊಳಿಸಿದರು.

ನಂತರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ.ರತ್ನ ಅವರು ರಚಿಸಿದ್ದ ಅಂಾನ್ ಶಾಂತಿ ಕುಟೀರ ನಾಟಕವನ್ನು ತೆಲುಗು ಭಾಷೆಗೆ ಅನುವಾದಿಸಿರುವ ಮಲ್ಲಿಕಾರ್ಜುನ ಕೊಂಡೂರಿ ಅವರ ಅಯಾನ್ ಶಾಂತಿ ಕುಟೀರಂ ಪುಸ್ತಕವನ್ನು ಪ್ರೇಮಲತಾ ರತ್ನ ಬಿಡುಗಡೆಗೊಳಿಸಿದರು.

ಕೈಯಲ್ಲಿ ಕೈಲಾಸಂ ಪುಸ್ತಕ ಕುರಿತು ಸಾಹಿತಿ ಶಶಿಧರ್ ಡೋಂಗ್ರೆ ಮಾತನಾಡಿದರು. ಅಯಾನ್ ಶಾಂತಿ ಕುಟೀರಂ ಪುಸ್ತಕದ ಬಗ್ಗೆ ಅನುವಾದಕ ಮಲ್ಲಿಕಾರ್ಜುನ ಕೊಂಡೂರಿ ಮಾತನಾಡಿದರು.