ನ್ಯೂಸ್

ಯೋಗದಿಂದ ಉತ್ತಮ ಆರೋಗ್ಯ

ಚಿತ್ರದುರ್ಗ: ಉತ್ತಮ ಆರೋಗ್ಯಕ್ಕಾಗಿ ನಿತ್ಯವೂ ಯೋಗಾಭ್ಯಾಸದ ಅಗತ್ಯವಿದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬ ಸವಕುಮಾರ ಸ್ವಾಮೀಜಿ ಹೇಳಿದರು.

ಚಿತ್ರದುರ್ಗದ ರಾಷ್ಟ್ರೀಯ ಯೋಗ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘ, ಮುರುಘಾ ಮಠ ದಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಯೋಗ, ಪ್ರಾಣಾಯಾಮ ನಿರಂತರ ಉಚಿತ ತರಬೇತಿ ಶಿಬಿರಕ್ಕೆ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಹಣ-ಅಂತಸ್ತು ಇದ್ದವರು ಶ್ರೀಮಂತರಲ್ಲ, ದೈಹಿಕ, ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು. ಆರೋಗ್ಯಕ್ಕಾಗಿ ಯೋಗಾಭ್ಯಾಸ, ಧ್ಯಾನ, ಪ್ರಾಣಾಯಾಮಕ್ಕೆ ನಿತ್ಯ ಒಂದು ಗಂಟೆ ಮುಡಿಪಾಗಿಡಬೇಕು ಎಂದರು.

ಆಯುಷ್ ವೈದ್ಯಾಧಿಕಾರಿ ಶಿವಕುಮಾರ್ ಮಾತನಾಡಿ, ಒತ್ತಡ ನಿವಾರಿಸಿ ಆರೋಗ್ಯಕರ ಜೀವನ ನಡೆಸಲು ಯೋಗ, ಪ್ರಾಣಾಯಾಮ ಸಹಾಯಕವಾಗಿವೆ. ಔಷಧಗಳಿಂದ ಗುಣಪಡಿಸಲಾಗದ ದೀರ್ಘಕಾಲದ ಕಾಯಿಲೆಗಳನ್ನು ಇವು ವಾಸಿಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.

ಯೋಗ ಗುರು ಚಿನ್ಮಯಾನಂದ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ಎದುರಾಗುವ ಅನೇಕ ರೋಗಗಳನ್ನು ತಡೆಗಟ್ಟಲು ನಿರಂತರ ಯೋಗಭ್ಯಾಸ ಅಗತ್ಯವಿದೆ ಎಂದರು.

ಶಿಕ್ಷಕ ಡಾ. ಮಹೇಶ್ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಬಸವರಾಜ್, ಉಪಾಧ್ಯಕ್ಷ ಮಂಜುನಾಥ್, ಯೋಗ ಗುರು ತಿಪ್ಪೇಸ್ವಾಮಿ ಇತರರು ಇದ್ದರು.

(ಸಿಟಿಡಿ 22 ಯೋಗ)

ಯೋಗ, ಧ್ಯಾನ ಮತ್ತು ಪ್ರಾಣಾಯಾಮ ನಿರಂತರ ಉಚಿತ ತರಬೇತಿ ಶಿಬಿರಕ್ಕೆ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಚಿತ್ರದುರ್ಗದಲ್ಲಿ ಗುರುವಾರ ಚಾಲನೆ ನೀಡಿದರು. ಚಿನ್ಮಯಾನಂದ, ಡಾ. ಶಿವಕುಮಾರ್, ಶಿಕ್ಷಕ ಡಾ. ಮಹೇಶ್, ಪ್ರಸನ್ನಕುಮಾರ್, ಬಸವರಾಜ್, ಮಂಜುನಾಥ್, ತಿಪ್ಪೇಸ್ವಾಮಿ ಇದ್ದರು.