ಸರ್ಕಾರಿ ನಿವೃತ್ತ ನೌಕರರಾದ ಮಲ್ಲಾಡಿ, ಕೃಷ್ಣಯ್ಯ ಹಾಗೂ ಚಿಕ್ಕಯ್ಯ ಅವರನ್ನು ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೃಷ್ಣ, ಕೆ.ಸಿ.ವೀರಭದ್ರಯ್ಯ, ನಂದರಾಜು ಇತರರು ಇದ್ದರು. 
ನ್ಯೂಸ್

ಯುವಕರು ಕ್ರಿಯಾಶೀಲರಾಗಿ ಬದುಕು ರೂಪಿಸಿಕೊಳ್ಳಲಿ

ಕಟ್ಟೆಮಳಲವಾಡಿ: ಸಮಾಜದಲ್ಲಿ ಅಧಿಕಾರ, ಗೌರವ ಪಡೆಯಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಎಂದು ಶಿಕ್ಷಕ ಕೃಷ್ಣ ಅಭಿಪ್ರಾಯಪಟ್ಟರು.

ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಿವೃತ್ತ ಮೂವರು ಸರ್ಕಾರಿ ನೌಕರರಿಗೆ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು ಕ್ರಿಯಾಶೀಲರಾಗಿ ತಂದೆ ಮಾಡಿದ ಆಸ್ತಿಯನ್ನು ಅವಲಂಬಿಸದೆ ಶಿಕ್ಷಣ ಪಡೆದು ಖುಷಿಯಿಂದ ಜೀವನ ರೂಪಿಸಿಕೊಂಡು ಉನ್ನತ ಹುದ್ದೆಗಳನ್ನು ಏರುವ ಮೂಲಕ ಜೀವನ ಸಾರ್ಥಕಗೊಳಿಸಬೇಕು ಎಂದರು.

ನಿವೃತ್ತ ನೌಕರರಾದ ಸ್ವಾಮಿ ಮಲ್ಲಾಡಿ, ಕೃಷ್ಣಯ್ಯ, ಚಿಕ್ಕಯ್ಯ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸಿ.ವೀರಭದ್ರಯ್ಯ, ಸಂಘದ ಸದಸ್ಯರೂ ಆದ ಶಿಕ್ಷಕ ನಂದರಾಜು, ಉಪನ್ಯಾಸಕ ರುದ್ರ, ಸಂಪತ್‌ಕುಮಾರ್, ಕೃಷ್ಣ, ಪ್ರದೀಪ, ನಟರಾಜು, ವೆಂಕಟೇಶ, ಶ್ರೀನಿವಾಸಮೂರ್ತಿ ಇದ್ದರು.