ನ್ಯೂಸ್

ಯುವಕರು ಒಳ್ಳೆಯ ಕನಸುಗಳನ್ನು ಕಂಡು ಶ್ರಮವಹಿಸಿ ಯಶಸ್ಸು ಕಾಣಬೇಕು / ಅಪರ ಜಿಲ್ಲಾಧಿಕಾರಿ ಎಸ್.ಎಂ.ಮAಗಳ

ವಿಜಯವಾಣಿ ಸುದ್ದಿಜಾಲ ಕೋಲಾರ

ಯುವಕರು ಒಳ್ಳೆಯ ಕನಸುಗಳನ್ನು ಕಂಡು ಶ್ರಮವಹಿಸಿ ಯಶಸ್ಸು ಕಾಣಬೇಕು. ಆ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸುವ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಸ್.ಎಂ.ಮAಗಳ ತಿಳಿಸಿದರು.

ಸಮೀಪದ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಕ್ರಿಸ್ತು ಜಯಂತಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಒಳ್ಳೆಯ ಅಧಿಕಾರಿಗಳಾಗಲು ಸೇವಾ ಮನೋಭಾವನೆ ಇರಬೇಕು. ಸಹಾಯ ಮಾಡುವ ಹಾಗೂ ಜನಸಾಮಾನ್ಯರಿಗೆ ಸ್ಪಂದಿಸುವ ಮನಸ್ಸಿರಬೇಕು. ಕೋಲಾರ ಜಿಲ್ಲೆ ಬರಪೀಡಿತ ಹಾಗು ಸತತ ಪ್ರಕೃತಿ ವಿಕೋಪಕ್ಕೆ ಒಳಗಾಗುವ ಜಿಲ್ಲೆಯಾಗಿದೆ. ಆದರೆ ಇಲ್ಲಿನ ಜನರು ಸಮಸ್ಯೆಗಳನ್ನು ಎದುರಿಸುವಂತಹ ಹಾಗೂ ಶ್ರಮದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ. ಹಾಗಾಗಿ ಏನೇ ಕಷ್ಟ ಬಂದರೂ ಅದನ್ನು ನಿಭಾಯಿಸುವ ಶಕ್ತಿ ಉಳ್ಳವರಾಗಿದ್ದಾರೆ. ಯುವಕರು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದರೆ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಾನು ಪದವಿ ನಂತರ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಇಚ್ಚೆಯಿಂದ ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆ.ಎ.ಎಸ್ ಅಧಿಕಾರಿಯಾದೆ. ಆ ನಂತರ ಸಿಕ್ಕ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಮುಖಾಂತರ ಜಿಲ್ಲೆಯ ಪ್ರತಿಷ್ಟಿತ ಕುಡಿಯುವ ನೀರಿನ ಯೋಜನೆಯಾದ ಯರಗೋಳ್ ಯೋಜನೆಗೆ ಪೂರಕವಾದ ಕೆಲಸ ಮಾಡಿದ್ದು, ವೇಮಗಲ್ ಕೈಗಾರಿಕಾ ಪ್ರದೇಶಕ್ಕೆ ಭೂಮಿ ಗುರುತಿಸಿಕೊಟ್ಟಿದ್ದು, ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ಆಸಕ್ತಿ ತೋರಿಸಿದ್ದು, ನನಗೆ ಆತ್ಮತೃಪ್ತಿ ನೀಡಿರುತ್ತೆ ಎಂದರು.

ಆದಿಮ ಸಂಸ್ಥೆಯ ಹ.ಮಾ.ರಾಮಚಂದ್ರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಅಂಕುಡೊAಕುಗಳನ್ನು ಸರಿಮಾಡುವುದು ನಮ್ಮ ಕರ್ತವ್ಯ. ಆದಿಮ ನಿಸರ್ಗ ಸಹಜವಾಗಿ ಬದಕುವುದನ್ನು ಕಲಿಸುತ್ತದೆ. ಇಂದಿನ ವ್ಯಾಟ್ಸಾಫ್ ಯೂನಿವರ್ಸಿಟಿಯ ಅಬ್ಬರದ ನಡುವೆಯೂ ನಿಸರ್ಗ ಸಹಜವಾದ ಬದಕು ರೂಪಿಸುವ ಜೀವಪರ ಜನೋಪಯೋಗಿ ಕಲಿಕೆಯತ್ತ ಸಾಗಲು ನಾವು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಪತ್ರಕರ್ತರಾದ ಸಿ.ವಿ.ನಾಗರಾಜ್, ಉರಿಗಿಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿರಾಜು, ಹಿರಿಯ ಮುಖಂಡ ಉರಿಗಿಲಿ ವೆಂಕಟಸ್ವಾಮಿ, ಕಲ್ಲೂರು ಚಲಪತಿ, ಕ್ರಿಸ್ತು ಜಯಂತಿ ಕಾಲೇಜು ಉಪನ್ಯಾಸಕ ಕುಪ್ಪನಹಳ್ಳಿ ಡಾ. ಬೈರಪ್ಪ, ಡಾ.ಅರುಣ್‌ಕುಮಾರ್, ಶಶಿಕುಮಾರ್, ಬೆಳಗಾನಹಳ್ಳಿ ಮುನಿವೆಂಕಟಪ್ಪ ಮುಂತಾದವರು ಇದ್ದರು.

ಚಿತ್ರ ೧೨ ಕೆ.ಎಲ್.ಆರ್. ೦೫ : ತೇರಹಳ್ಳಿ ಬೆಟ್ಟದ ಆದಿಮ ಕೇಂದ್ರದಲ್ಲಿ ಕ್ರಿಸ್ತು ಜಯಂತಿ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ಕ್ರಿಸ್ತು ಜಯಂತಿ ಕಾಲೇಜಿನ ಉಪನ್ಯಾಸಕ ಕುಪ್ಪನಹಳ್ಳಿ ಡಾ.ಬೈರಪ್ಪ, ಉರಿಗಿಲಿ ಗ್ರಾಮಪಂಚಾಯ್ತಿ ಅಧ್ಯಕ್ಷ ಮುನಿರಾಜು ಮುಂತಾದವರಿದ್ದರು.