ಬೈಕಿನಲ್ಲಿ ಬಂದ ಖದೀಮರು, ಯುವಕನ ಮೊಬೈಲ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ದಟ್ಟಗಳ್ಳಿ ನಿವಾಸಿ ಪ್ರಶಾಂತ್ ಮೊಬೈಲ್ ಕಳೆದುಕೊಂಡವರು.
ಪ್ರಶಾಂತ್ ಏ.6ರ ಸಂಜೆ 5 ಗಂಟೆ ವೇಳೆಯಲ್ಲಿ ತಮ್ಮ ಮನೆಯ ಮುಂಭಾಗ ಮೊಬೈಲ್‌ನಲ್ಲಿ ಮಾತನಾಡಿಕೊಂಡು ತಮ್ಮ ಸಾಕು ನಾಯಿಯೊಂದಿಗೆ ವಾಯುವಿಹಾರ ನಡೆಸುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದವರು ಮೊಬೈಲ್ ಕಿತ್ತು ಕೊಂಡು ಪರಾರಿಯಾಗಿದ್ದಾರೆ.
ಯುವಕನ ನೀಡಿದ ದೂರಿನ ಮೇರೆಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.