ಕುಮಟಾ: ಮಂಗಳವಾರ ಪ್ರಕಟವಾದ ಯುಪಿಎಸ್‌ಸಿ ಫಲಿತಾಂಶದಲ್ಲಿ ಕುಮಟಾ ಮೂಲದ ನಿಧಿ ಪೈ 110 ನೇ ರ‍್ಯಾಂಕ್ ಪಡೆದಿದ್ದಾರೆ.
ಹೈದ್ರಾಬಾದ್‌ನಲ್ಲಿ ನೆಲೆಸಿ ಅಲ್ಲಿಯೇ ಓದಿರುವ ನಿಧಿ ಕುಮಟಾ ಹೆಗಡೆ ಗ್ರಾಮದ ಪಟೇಲರ ಕುಟುಂಬದ ನಾರಾಯಣ ವಾಸುದೇವ ಪೈ ಅವರ ಮಗಳು.
ಮಾನವ ಶಾಸ್ತ್ರ(ಅಂತ್ರಪಾಲಜಿ) ವಿಷಯವನ್ನು ಮುಖ್ಯವಾಗಿ ಪಡೆದು ಪರೀಕ್ಷೆ ಬರೆದ ನಿಧಿ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಅವರ ತಂದೆ ನಾರಾಯಣ ಪೈ ಹೈದ್ರಾಬಾದ್‌ನ ರೆಸ್ಟೋರೆಂಟ್ ಒಂದರಲ್ಲಿ ಮ್ಯಾನೇಜರ್ ಆಗಿದ್ದರು. ತಾಯಿ ಶ್ರದ್ಧಾ ಶಿರಾಲಿಯವರಾಗಿದ್ದು, ಗೃಹಿಣಿಯಾಗಿದ್ದಾರೆ.
ನಿಧಿ ಅವರು ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಹೈದ್ರಾಬಾದ್‌ನಲ್ಲೇ ಮುಗಿಸಿ, ಬಿಕಾಂ ಪದವಿಯನ್ನೂ 2020 ರಲ್ಲಿ ಅಲ್ಲಿಯೇ ಪಡೆದಿದ್ದರು. ನಂತರ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು.
ಇದನ್ನೂ ಓದಿ:ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ
`ನೂರರಷ್ಟು ಏಕಾಗ್ರತೆ ಓದಬೇಕು, ಹಲವು ವಿಷಯಗಳ ಬಗ್ಗೆ ಗಮನ ಕೊಟ್ಟು ಗೊಂದಲ ಮಾಡಿಕೊಳ್ಳದೇ ಪಡೆದ ಮುಖ್ಯ ವಿಷಯದ ಮೇಲೆ ಹೆಚ್ಚು ಗಮನ ಇಟ್ಟು ಓದಿ, ಹಳೆಯ ವರ್ಷದ ಪ್ರಶ್ನೆ ಪತ್ರಿಗಳನ್ನು ಓದಿ, ಪ್ರತಿ ದಿನ ನಿರಂತರ ಅಭ್ಯಾಸ ಮಾಡಿದರೆ ಖಂಡಿತ ಯಶಸ್ಸು ಸಾಽಸಲು ಸಾಧ್ಯ ಎಂಬುದು ನಿಧಿ ಅವರ ಅಭಿಪ್ರಾಯ.
…..