ಕೋಲಾರ: ಜಾತ್ಯತೀತ ಜನತಾದಳಕ್ಕೆ ಜಿಲ್ಲೆಯಲ್ಲಿ ಗಟ್ಟಿ ನೆಲೆಯಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಚುನಾವಣೆ ಎದುರಿಸಲು ಪಕ್ಷ ಸಿದ್ಧ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ನಗರದ ಡೂಂಲೈಟ್ ವತ್ತದಲ್ಲಿ ಭಾನುವಾರ ಪಕ್ಷದ ತಾಲೂಕು ಕಚೇರಿ ಉದ್ಘಾಟಿಸಿ ವಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಮೊದಲಿನಿಂದಲೂ ಜನತಾ ಪರಿವಾರಕ್ಕೆ ಒಲಿದ ಜಿಲ್ಲೆಗಳಾಗಿದ್ದವು. ಇಲ್ಲಿ ಎಂದೂ ನೆಲೆ ಕಳೆದುಕೊಂಡಿಲ್ಲ. ತಳಮಟ್ಟದ ಕಾರ್ಯಕರ್ತರು ಆಸರೆಯಾಗಿ ನಿಂತಿದ್ದಾರೆ. ಎಲ್ಲ ಮುಖಂಡರು ಒಗ್ಗಾಟ್ಟಾಗಿ ಸಂಟನೆಗೆ ಒತ್ತು ನೀಡುತ್ತಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಶೇ.90ರಷ್ಟು ಅಭ್ಯರ್ಥಿಗಳ ೋಷಣೆಯಾಗಿದ್ದು, ಉಳಿದ ಕ್ಷೇತ್ರಗಳಿಗೂ ಶ್ರೀ ೋಷಣೆ ವಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ವಾತನಾಡಿ, ನೂತನ ಕಚೇರಿ ಪ್ರಾರಂಭೋತ್ಸವವು ಸಂಟನೆಗೆ ದಿಕ್ಸೂಚಿಯಾಗಿದೆ. ಸ್ವಂತ ಕಟ್ಟಡ ನಿರ್ವಾಣಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿದಲ್ಲಿ ಕೇವಲ 6 ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ. ಜಿಪಂ, ತಾಪಂ ಚುನಾವಣೆ ಶ್ರೀ ನಡೆಯಲಿದ್ದು, ಸಿದ್ಧತೆ ವಾಡಿಕೊಳ್ಳುತ್ತಿದ್ದೇವೆ ಎಂದರು.
ಚಿಂತಾಮಣಿ ಶಾಸಕ ಕಷ್ಣಾರೆಡ್ಡಿ ವಾತನಾಡಿ, ಪಕ್ಷದ ಹಿರಿಯ ಮುಖಂಡರು ಮಿಷನ್ 123 ಗುರಿ ಹೊಂದಿದ್ದು, ಕೋಲಾರ- ಚಿಕ್ಕಬಳ್ಳಾಪುರ ಭಾಗದಲ್ಲಿ ಕನಿಷ್ಠ 8 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಕಚೇರಿ ಆರಂಭಿಸುವ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದೇವೆ ಎಂದರು.
ಮುಳಬಾಗಿಲು ಅಭ್ಯರ್ಥಿ ಸಮದ್ಧಿ ಮಂಜುನಾಥ್ ವಾತನಾಡಿ, ರಾಜಕಾರಣದಲ್ಲಿ ಬದಲಾವಣೆ ಸಾವಾನ್ಯ. ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಇಬ್ಬರು ಮೂವರು ಆಕಾಂಕ್ಷಿಗಳಿದ್ದಾರೆ. ಆದರೆ ಕಾಂಗ್ರೆಸ್ ಪರಿಸ್ಥಿತಿ ದಿಕ್ಕಾಪಾಲಾಗಿದೆ. ಅದನ್ನು ಕೇಳುವವರು ಯಾರೂ ಇಲ್ಲ. ಪಂಚರಾಜ್ಯ ಚುನಾವಣೆ ಸೇರಿ ಮುಂದಿನ ದಿನಗಳಲ್ಲಿ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳಿಗೆ ವಾನ್ಯತೆ ಕೊಡುವ ಕಾಲ ದೂರವಿಲ್ಲ ಎಂದರು.
ಕೋಲಾರ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ವಾತನಾಡಿ, ನಿರಂತರ ಕಾರ್ಯಕ್ರಮ ನಡೆಸಿ ಚುನಾವಣೆ ಎದುರಿಸುತ್ತೇವೆ ಎಂದರು.
ಪಕ್ಷದ ಮುಖಂಡರಾದ ವಕ್ಕಲೇರಿ ರಾಮು, ಸಿಎಂಆರ್ ಶ್ರೀನಾಥ್, ಜಿ.ಇ.ರಾಮೇಗೌಡ, ಮಲ್ಲೇಶ್‌ಬಾಬು, ಹರೀಶ್‌ಗೌಡ, ನಗರಸಭೆ ಉಪಾಧ್ಯಕ್ಷ ಪ್ರವೀಣ್ಗೌಡ, ಸದಸ್ಯ ವಡಗೂರು ರಾಕೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಇದ್ದರು.
ಇಬ್ರಾಹಿಂ ಬಂದರೆ ಪಕ್ಷಕ್ಕೆ ಲಾಭ: ಜೆಡಿಎಸ್‌ನ ಬಹುತೇಕ ಜಿಲ್ಲಾ ಮುಖಂಡರು ಸಿ.ಎಂ.ಇಬ್ರಾಹಿಂ ಪಕ್ಷಕ್ಕೆ ಬಂದರೆ ಲಾಭವೇ ಹೊರತು ನಷ್ಟವಿಲ್ಲ ಎಂದು ಅಭಿಪ್ರಾಯಪಟ್ಟರು. ಕುವಾರಸ್ವಾಮಿ ಸಂಪರ್ಕದಲ್ಲಿದ್ದು, ಅವರು ಬಂದರೆ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆಯೇ ಹೊರತು ಪ್ಲಸ್, ಮೈನಸ್ ಎನ್ನುವುದು ಇಲ್ಲ. ಅವರನ್ನು ಮುಖ್ಯಮಂತ್ರಿಯಾಗಿಸುವ ವಿಚಾರ ಹಿರಿಯರಿಗೆ ಬಿಟ್ಟಿದ್ದು, ಸದ್ಯಕ್ಕೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ವಿಶೇಷ ಸ್ಥಾನ ವಾನ ನೀಡಲಾಗುವುದು ಎಂದು ಶಾಸಕ ಕೃಷ್ಣಾರೆಡ್ಡಿ ಹೇಳಿದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ ಕೇಂದ್ರ ಮಂತ್ರಿಯಾಗಿ ಸಿ.ಎಂ.ಇಬ್ರಾಹಿಂ ಕೆಲಸ ವಾಡಿದ್ದಾರೆ. ಅವರು ಎಲ್ಲ ಜಾತಿ, ಸಮುದಾಯದವರನ್ನು ಸವಾನವಾಗಿ ಕಾಣುತ್ತಾರೆ. ಕಾರಣಾಂತರಗಳಿಂದ ಕಾಂಗ್ರೆಸ್ ತೊರೆದು ಮೂಲ ಪಕ್ಷ ಜೆಡಿಎಸ್‌ಗೆ ಬರುತ್ತಿದ್ದಾರೆ. ಅದರಿಂದ ಪಕ್ಷಕ್ಕೆ ಹಾಗೂ ಅವರಿಗೂ ಒಳ್ಳೆಯದಾಗಲಿದೆ. ಗೋವಿಂದರಾಜು, ಎಂಎಲ್ಸಿ