ನ್ಯೂಸ್

ಮೋದಿ ಜನ್ಮದಿನ ಹಿನ್ನೆಲೆ ವಿವಿಧ ಸೇವಾ ಕಾರ್ಯ

ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ತಿ.ನರಸೀಪುರ ತಾಲೂಕಿನಲ್ಲಿ ಶನಿವಾರ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದರು.


ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕಾಂಪೋಸ್ಟ್ ನಿಗಮದ ಅಧ್ಯಕ್ಷ ಮಹದೇವಯ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದರು. ಪುರಸಭಾ ಸದಸ್ಯ ಎಸ್.ಕೆ.ಕಿರಣ್ ಸೇರಿದಂತೆ ಹಲವು ಕಾರ್ಯಕರ್ತರು ಪೊರಕೆ ಹಿಡಿದು ದೇವಸ್ಥಾನ ಸುತ್ತ ಶ್ರಮದಾನ ನಡೆಸಿದರು.


ಮಹದೇವಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಮೋದಿಯವರು ವಿಶ್ವವೇ ಮೆಚ್ಚುವಂತಹ ಹೆಮ್ಮೆಯ ನಾಯಕರಾಗಿದ್ದು, ಅವರು ಪ್ರಧಾನಿಯಾದ ಮೇಲೆ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದು ಮೆಚ್ಚುಗೆ ನುಡಿಗಳನ್ನಾಡಿದರು.


ಟೌನ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಸ್.ಕೆ.ಕಿರಣ್, ಪಿಎಸಿಸಿ ಉಪಾಧ್ಯಕ್ಷ ನಂಜುಂಡಸ್ವಾಮಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಶಿವಕುಮಾರ್, ತಾ.ಪಂ. ಮಾಜಿ ಸದಸ್ಯೆ ಶಿವಮ್ಮ, ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಅನಿಲ್ ಕುಮಾರ್, ಹಿಂದುಳಿದ ವರ್ಗಗಳ ಅಧ್ಯಕ್ಷ ಗೂಳಿ ಮಹೇಶ್, ನಂದಕುಮಾರ್, ಚೌಹಳ್ಳಿ ಸಿದ್ದರಾಜು, ಎನ್.ಲೋಕೇಶ್ ಇದ್ದರು.


ವರುಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕಲ್ಮಳ್ಳಿ ವಿಜಯಕುಮಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ಕಾರ್ಯಕರ್ತರು ಹೊರರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಿದರು.


ಕಲ್ಮಳ್ಳಿ ವಿಜಯ ಕುಮಾರ್ ಮಾತನಾಡಿ, ಮೋದಿ ಪ್ರಧಾನಿಯಾದ ಬಳಿಕ ಭಾರತ ವಿಶ್ವ ಗುರುವಾಗಿದೆ ಎಂದರು. ಗ್ರಾಪಂ ಸದಸ್ಯ ಮಹಾದೇವಸ್ವಾಮಿ, ಪುರಸಭಾ ಸದಸ್ಯರಾದ ಕೆ.ಗಣೇಶ್, ರೂಪಾ ಪರಮೇಶ್ ಚಿಕ್ಕ ಮಹಾದೇವ, ಸರ್ವಮಂಗಳಾ ಸೋಮಶೇಖರ್, ಮುಖಂಡರಾದ ಸಿ.ಎಂ.ಮಹಾದೇವಯ್ಯ, ಎಂ.ಮಿಥುನ್, ಬೈರಾಪುರ ಬಾಲು, ಎ.ಎನ್.ರಂಗೂನಾಯಕ್, ಕರುಹಟ್ಟಿ ಮಹದೇವಯ್ಯ, ಕೆ.ಎಸ್. ಬಸವರಾಜು, ವೆಂಕಟರಮಣ ಶೆಟ್ಟಿ, ಹೆಳವರ ಹುಂಡಿ ನಟರಾಜು, ತೋಟದಪ್ಪ ಬಸವರಾಜು, ವಿಜಯಕುಮಾರ್ ಹಾಜರಿದ್ದರು.