ನ್ಯೂಸ್

ಮೈಸೂರು ಸಂಗೀತ ಸುಗಂಧ -2025 ಸಂಗೀತೋತ್ಸವ

ಭಾರತ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯಗಳ ಸಂಯುಕ್ತಾಶ್ರಯದಲ್ಲಿ ಮೈಸೂರು ಸಂಗೀತ ಸುಗಂಧ 2025 ಸಂಗೀತೋತ್ಸವವನ್ನು ಅಕ್ಟೋಬರ್ 11 ಮತ್ತು 12 ರಂದು ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

 ಈ ಉತ್ಸವವು Celebrating the Richness of Dasara Music traditionsಎಂಬ ವಿಷಯದಡಿ ಕರ್ನಾಟಕದ ದಾಸ ಪದ ಸಂಗೀತ ಪರಂಪರೆಯ ಸಾಂಸ್ಕೃತಿಕ ಸಂಭ್ರಮಾಚರಣೆಯಾಗಿದ್ದು, ಕಲಾವಿದರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ ಸುದರ್ಶನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.