ಆತಿಥೇಯ ಮೈಸೂರು ವಿಶ್ವವಿದ್ಯಾಲಯ, ಕ್ಯಾಲಿಕಟ್, ಆಂಧ್ರ, ಕಣ್ಣೂರು, ಬೆಂಗಳೂರು ನಗರ, ಜೆಎನ್‌ಟಿಯು ಕಾಕಿನಾಡ, ಮಹಾತ್ಮ ಗಾಂಧಿ ಹಾಗೂ ಮದ್ರಾಸ್ ವಿಶ್ವವಿದ್ಯಾಲಯ ತಂಡಗಳು ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಜ.27ರಂದು ಮ.1 ಗಂಟೆಗೆ ಆತಿಥೇಯ ಮೈಸೂರು ವಿಶ್ವವಿದ್ಯಾಲಯ ತಂಡ, ಜೆಎನ್‌ಟಿಯು ಕಾಕಿನಾಡ ವಿಶ್ವವಿದ್ಯಾಲಯ ತಂಡವನ್ನು ಎದುರಿಸಲಿದೆ.
ಉಳಿದಂತೆ ಇದೇ ಮೈದಾನದಲ್ಲಿ ಬೆಳಗ್ಗೆ 8.30ಕ್ಕೆ ಕ್ಯಾಲಿಕಟ್ ವಿವಿ ಮತ್ತು ಆಂಧ್ರ ವಿವಿ ವಿರುದ್ಧ ಸೆಣಸಾಟ ನಡೆಯಲಿದೆ. ಎಸ್‌ಜೆಸಿಇ ಮೈದಾನದಲ್ಲಿ ಬೆಳಗ್ಗೆ 8.30ಕ್ಕೆ ಕಣ್ಣೂರು ವಿವಿ ಮತ್ತು ಬೆಂಗಳೂರು ನಗರ ವಿವಿ ನಡುವೆ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾತ್ಮ ಗಾಂಧಿ ವಿವಿ ಮತ್ತು ಮದ್ರಾಸ್ ವಿವಿ ನಡುವೆ ಕ್ವಾರ್ಟರ್ ಫೈನಲ್ ಕಾದಾಟ ನಡೆಯಲಿದೆ.