ನ್ಯೂಸ್

ಮೈಸೂರು ದಸರಾ ಮಹೋತ್ಸವ ಪ್ರಯುಕ್ತ: ಶಾಲಾ ಕಾಲೇಜು ಮಕ್ಕಳಿಗೆ ಚಿತ್ರ ಬಿಡಿಸುವ ಮತ್ತು ಜೇಡಿ ಮಣ್ಣಿನ ಶಿಲ್ಪ ರಚಿಸುವ ಸ್ಪರ್ಧೆ

 ನಾಡಹಬ್ಬ ಮೈಸೂರು ದಸರಾ 2025 ರ ಲಲಿತಕಲೆ ಮತ್ತು ಕರಕುಶಲಕಲೆ ಉಪಸಮಿತಿಯ ವತಿಯಿಂದ ದಸರಾ 2025ರ ಅಂಗವಾಗಿ ಸೆಪ್ಟೆಂಬರ್ 26 ರಂದು ಮಧ್ಯಾಹ್ನ 3.00 ಗಂಟೆಗೆ ಶಾಲಾ ಕಾಲೇಜು ಮಕ್ಕಳಿಗೆ ಸ್ಥಳದಲ್ಲೇ ಚಿತ್ರಬಿಡಿಸುವ ಮತ್ತು ಜೇಡಿ ಮಣ್ಣಿನ ಶಿಲ್ಪ ರಚನೆ ಸ್ಪರ್ಧೆಯನ್ನು ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು, ಸಿದ್ದಾರ್ಥನಗರ, ಮೈಸೂರು ಸಂಸ್ಥೆಯ ಆವರಣದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತ ಮಕ್ಕಳಿಗೆ ಸೆಪ್ಟೆಂಬರ್ 28 ರಂದು ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 ಚಿತ್ರ ಬಿಡಿಸುವ ಸ್ಪರ್ಧೆಯನ್ನು 1 ರಿಂದ 4 ನೇತರಗತಿ, 5 ರಿಂದ 7 ನೇ ತರಗತಿ, 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತದೆ. ಜೇಡಿ ಮಣ್ಣಿನ ಕಲಾಕೃತಿ ರಚನಾ ಸ್ಪರ್ಧೆಯನ್ನು 5 ರಿಂದ 7 ನೇ ತರಗತಿ 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತದೆ.

 ಚಿತ್ರಕಲೆ ಹಾಗೂ ಜೇಡಿಮಣ್ಣಿನ ಕಲಾ ಕೃತಿ ರಚನಾ ಸ್ಪರ್ಧೆಯ ನೋಂದಣಿಯನ್ನು ಸ್ಥಳದಲ್ಲೇ ಮಧ್ಯಾಹ್ನ 2.00 ಗಂಟೆಗೆ ಮಾಡಲಾಗುತ್ತದೆ. ಪ್ರತಿ ವಿಭಾಗದಲ್ಲಿ 03 ಸಮಾನಾಂತರ ಬಹುಮಾನ ಇದ್ದು, ವಿದ್ಯಾರ್ಥಿಯು ಯಾವುದಾದರೂ ಒಂದು ವಿಭಾಗದಲ್ಲಿ ಮಾತ್ರ ಭಾಗವಹಿಸಬಹುದಾಗಿದೆ.

 ಚಿತ್ರಕಲೆ ಮತ್ತು ಜೇಡಿ ಮಣ್ಣಿನ ಕಲಾಕೃತಿ ರಚನೆಯಲ್ಲಿ ಆಸಕ್ತಿಯುಳ್ಳ ಮೈಸೂರು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಚಿತ್ರ ರಚನಾ ಸ್ಪರ್ಧೆಗೆ ಡ್ರಾಯಿಂಗ್ ಶೀಟ್ ನೀಡಲಾಗುವುದು, ಚಿತ್ರ ರಚನೆಗೆ ಅಗತ್ಯ ಸಾಮಗ್ರಿಗಳನ್ನು ಸ್ಪರ್ಧಿಗಳು ತರಬೇಕು. ಜೇಡಿ ಮಣ್ಣಿನ ಕಲಾಕೃತಿ ರಚನೆಗೆ ಜೇಡಿಮಣ್ಣನ್ನು ನೀಡಲಾಗುವುದು, ಉಳಿದ ಎಲ್ಲಾ ಸಾಮಗ್ರಿಗಳನ್ನು ಸ್ಪರ್ಧಿಗಳು ತರಬೇಕು. ಒಬ್ಬ ವಿದ್ಯಾರ್ಥಿಯು ಒಂದು ವಿಭಾಗದ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಗುರುತಿನ ಚೀಟಿಯನ್ನು ಕಡ್ಡಾಯವಾಗಿತರಬೇಕು.

 ಹೆಚ್ಚಿನ ಮಾಹಿತಿಗಾಗಿ ಬಿಂದುರಾಯ .ಆರ್ ಬಿರಾದರ್ –9481067185, ಡಾ. ಚ