ಹೊನ್ನೇತಾಳು ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದಿರುವುದು. 
ನ್ಯೂಸ್

ಮೇಲ್ಛಾವಣಿ ಕುಸಿದು ನಷ್ಟ

ತೀರ್ಥಹಳ್ಳಿ: ತಾಲೂಕಿನಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ಕೊಳಗಾರು ಸುಪ್ರೀತ್ ಭಟ್ ಎಂಬುವವರ ಭತ್ತದ ಸಂಗ್ರಹ ಕೊಠಡಿ ಮೇಲೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಮರ ಬಿದ್ದು ಮೇಲ್ಛಾವಣಿ ಕುಸಿದು ನಷ್ಟ ಸಂಭವಿಸಿದೆ.

ಪಟ್ಟಣ ಸಮೀಪದ ತುಡ್ಕಿ ಗ್ರಾಮದಲ್ಲಿ ಮುಕುಂದ ಎಂಬುವವರ ಮನೆ ಮೇಲೆ ಮರ ಬಿದ್ದು ಮನೆಯ ಮೇಲ್ಛಾವಣಿ ನೆಲಸಮವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲ: ಆಗುಂಬೆ ಹೋಬಳಿ ಭಾಗದಲ್ಲಿ ಕಳೆದ ಒಂದು ವಾರದಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಪೂರ್ಣ ಸ್ಥಗಿತಗೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಳೆದ ಸೋಮವಾರದಿಂದ ಯಾವುದೇ ಕರೆಗಳು ಹೋಗುತ್ತಿಲ್ಲ. ಅಪರೂಪಕ್ಕೆ ಸಿಗುವ ಕರೆಗಳು ಮಧ್ಯದಲ್ಲಿಯೇ ಕಟ್ ಆಗುತ್ತದೆ. ಹೊರಗಿನಿಂದ ಬರುವ ಕರೆಗಳು ಒನ್‌ವೇ ಆಗುತ್ತವೆ. ಹೀಗಾಗಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗೆ ಅವಲಂಬಿಸಿರುವ ಗ್ರಾಹಕರು ಪರದಾಡುವಂತಾಗಿದೆ.