ಮಂಗಳೂರು: ನಗರದ ಮೇರಿಹಿಲ್, ಪದವಿನಂಗಡಿ ಪರಿಸರದಲ್ಲಿ ಬುಧವಾರ ಬೆಳಗ್ಗೆ 10.15 ರ ವೇಳೆ ಭೂಮಿ ಕಂಪಿಸಿದ ಅನುಭವವಾಗಿದೆ.
ಇಲ್ಲಿನ ಶಾಲಾ ವಿದ್ಯಾರ್ಥಿಗಳು,ವಸತಿ ಸಮುಚ್ಛಯದ ನಿವಾಸಿಗಳು ಹೊರಗೆ ಓಡಿ ಬಂದಿದ್ದಾರೆ. ಸುಮಾರು ಒಂದು ತಾಸು ಕಾಲ ಹೊರಗೆ ನಿಂತಿದ್ದ ಅವರು ಮತ್ತೆ ಕಟ್ಟಡದೊಳಗೆ ತೆರಳಿದ್ದಾರೆ.
ಸುಳ್ಯ, ಮಡಿಕೇರಿ ಗಡಿ ಭಾಗದಲ್ಲಿ ಕಂಪಿಸುತ್ತಿದ್ದ ಭೂಮಿ ಇದೀಗ ಮಂಗಳೂರು ನಗರ ಪ್ರದೇಶದಲ್ಲೂ ಕಂಪಿಸಲಾರಂಭಿಸಿರುವುದು ಆತಂಕ ಉಂಟು ಮಾಡಿದೆ.