ನ್ಯೂಸ್

ಮೇಕಪ್ ಆರ್ಡರ್ ನೀಡುವುದಾಗಿ ವಂಚನೆ

ಬೆಂಗಳೂರು: ಕಲಾವಿದರಿಗೆ ನಿಮ್ಮ ಕಡೆಯಿಂದ ಮೇಕಪ್ ಆರ್ಡರ್ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ 27 ಸಾವಿರ ರೂ.ನ್ನು ಖಾತೆಗೆ ಹಾಕಿಕೊಂಡು ವಂಚಿಸಿದ್ದಾರೆ.

ಕಲಾವಿದರಿಗೆ ಮೇಕಪ್ ಮಾಡುತ್ತಿದ್ದ ಬನಶಂಕರಿಯ ಸುರಕ್ಷಾ ಅವರಿಗೆ ಅ.3ರಂದು ಅಪರಿಚಿತರು ಕರೆ ಮಾಡಿದ್ದರು. ನಾವು ಸ್ಪೀಡ್ ರೆಕಾರ್ಡರ್ ಪಂಜಾಬ್‌ನಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ನಮ್ಮ ಕಲಾವಿದರಿಗೆ ನಿಮ್ಮ ಕಡೆಯಿಂದ ಮೇಕಪ್ ಆರ್ಡರ್ ಕೊಡಿಸುತ್ತೇವೆ. ನೀವು ಪಂಜಾಬ್‌ಗೆ ಬರಲು ವಿಮಾನದ ಟಿಕೆಟ್‌ಗಳನ್ನು ನಮ್ಮ ಮೂಲಕ ಬುಕ್ ಮಾಡಿಸಿಕೊಳ್ಳಬೇಕು. ಇದಾದ ಬಳಿಕ ನಾವು ನಿಮಗೆ ಮುಂಗಡ ಹಣ ನೀಡುತ್ತೇವೆ ಎಂದು ತಿಳಿಸಿದ್ದರು. ಅಪರಿಚಿತರ ಮಾತನ್ನು ನಂಬಿದ ಸುರಕ್ಷಾ 27 ಸಾವಿರ ರೂ.ನ್ನು ಅವರು ಸೂಚಿಸಿದ ಖಾತೆಗೆ ಜಮೆ ಮಾಡಿದ್ದರು. ನಂತರ ಅಪರಿಚಿತರು ೆನ್ ಸಂಪರ್ಕಕ್ಕೆ ಸಿಗದೇಯಿದ್ದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.