ನ್ಯೂಸ್

ಮೆದುಳುಜ್ವರ ನಿಯಂತ್ರಣ ಕುರಿತು ಗ್ರಾ.ಪಂ ಪಿಡಿಒಗಳಿಗೆ ಕಾರ್ಯಾಗಾರ / ಹಂದಿಗಳನ್ನು ಜನವಸತಿಯಿಂದ ದೂರವಿಡಲು ಕ್ರಮವಹಿಸಿ/ಸತ್ಯನಾರಾಯಣಗೌಡ

ವಿಜಯವಾಣಿ ಸುದ್ದಿಜಾಲ ಕೋಲಾರ

ಮೆದುಳುಜ್ವರ ನಿರೋಧಕ ಲಸಿಕೆಯನ್ನು ಮಕ್ಕಳಿಗೆ ೯ನೇ ಮತ್ತು ೧೮ನೇ ತಿಂಗಳಲ್ಲಿ ಕಡ್ಡಾಯವಾಗಿ ಹಾಕಿಸಬೇಕು ಮತ್ತು ಹಂದಿಗಳನ್ನು ಜನವಸತಿಗಳಿಂದ ದೂರವಿಟ್ಟು ರೋಗ ಹರಡದಂತೆ ಎಚ್ಚರವಹಿಸಿ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್.ಸತ್ಯನಾರಾಯಣಗೌಡ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟಿçÃಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ಮೆದುಳುಜ್ವರ ನಿಯಂತ್ರಣ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.

ಕೋಲಾರ ಜಿಲ್ಲೆಯಲ್ಲಿ ಕಳೆದ ೨೦ ವರ್ಷಗಳ ಹಿಂದೆ ಮೆದುಳುಜ್ವರ ಕಾಣಿಸಿಕೊಂಡಿತ್ತು. ಆಗ ಜಿಲ್ಲೆಯನ್ನು ಮೆದುಳುಜ್ವರ ಪೀಡಿತ ಎಂದು ಘೋಷಿಸಲಾಗಿತ್ತು ಎಂದರು. ೨೦೦೬ ರಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ೧ ರಿಂದ ೧೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಜೆಇ ಲಸಿಕೆಯನ್ನು ಸಾಮೂಹಿಕವಾಗಿ ನೀಡಲಾಯಿತು ಎಂದರು.

ಮೆದುಳು ಜ್ವರು ವೈರಾಣುಗಳಿಂದ ಹರಡುವ ಕಾಯಿಲೆಯಾಗಿದ್ದು, ಅತಿ ಹೆಚ್ಚಾಗಿ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. ಕೆಲವರಿಗೆ ನರದೌರ್ಬಲ್ಯ ಹಾಗೂ ಬುದ್ದಿಮಾಂದ್ಯತೆ ಬರುವ ಸಾಧ್ಯತೆಯೂ ಇರುತ್ತದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಮೆದುಳುಜ್ವರ ವೈರಾಣುಗಳನ್ನು ಹೊಂದಿದೆ. ಹಂದಿ, ಬೆಳ್ಳಕ್ಕಿಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ನಂತರ ಮನುಷ್ಯನಿಗೆ ಕಚ್ಚುವುದರಿಂದ ಈ ರೋಗ ಹರಡುವುದರಿಂದ ಹಂದಿಗಳನ್ನು ಜನವಸತಿಯಿಂದ ದೂರ ಸಾಕಾಣಿಕೆ ಮಾಡಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒಗಳು ಅಗತ್ಯ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಸಾಮಾನ್ಯವಾಗಿ ಮೆದುಳು ಜ್ವರ ಸೆಪ್ಟಂಬರ್‌ನಿAದ ಡಿಸೆಂಬರ್ ಮಾಹೆಯವರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರಾರಂಭದಲ್ಲಿ ವಿಪರೀತ ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈನಡುಕ, ಎಚ್ಚರ ತಪ್ಪುವುದು ಈ ಲಕ್ಷಣಗಳು ಕಾಣಿಸುತ್ತದೆ ತಕ್ಷಣ ಅಂತಹ ರೋಗಿಯನ್ನು ಆಸ್ಪತ್ರೆಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಲು ಸೂಚಿಸಿದರು.

ಮೆದುಳು ಜ್ವರ ತಡೆಯಲು ಮಕ್ಕಳಿಗೆ ೯ನೇ ಹಾಗೂ ೧೮ನೇ ತಿಂಗಳಲ್ಲಿ ಎರಡು ಬಾರಿ ತಪ್ಪದೇ ಲಸಿಕೆ ಹಾಕಿಸಬೇಕು. ಈ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಕಲಾಗುತ್ತದೆ. ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿ ಹೊರಾಂಗಣ ಕೀಟನಾಶಕ ಧೂಮೀಕರಣ ಮಾಡಬೇಕು. ಹಂದಿ ಗೂಡುಗಳಿಗೆ ಕೀಟನಾಶಕ ಸಿಂಪಡಿಸಿ, ಮನೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಸೊಳ್ಳೆಪರದೆ ಬಳಸಲು ಸಲಹೆ ನೀಡಿದರು.

ರೋಗದ ಲಕ್ಷಣಗಳು ಅಥವಾ ಶಂಕಿತ ಪ್ರಕರಣಗಳು ಕಂಡು ಬಂದರೆ ರಕ್ತ ಸಂಗ್ರಹಿಸಿ ಅಂತಿಮವಾಗಿ ದೃಢಪಡಿಸಿಕೊಳ್ಳಲು ಬೆಂಗಳೂರಿನ ರಾಷ್ಟಿçÃಯ ವೈರೋಲಾಜಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸ್ವಚ್ಚತೆ, ಕುಡಿಯುವ ನೀರು ಸರಬರಾಜು ಮತ್ತಿತರ ಹೊಣೆ ಹೊತ್ತಿರುವ ಗ್ರಾಮ ಪಂಚಾಯಿತಿ ಪಿಡಿಒಗಳು ರೋಗ ತಡೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ನಿಮ್ಮ ವ್ಯಾಪ್ತಿಯಲ್ಲಿ ಹಂದಿಗಳನ್ನು ವಸತಿ ಪ್ರದೇಶದಿಂದ ದೂರ ಸಾಗಿಸಲು ಕ್ರಮವಹಿಸಬೇಕು ಹಾಗೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಪಂ ಸಂಯೋಜಕ ಮಂಜುನಾಥ ಪ್ರಸಾದ್, ಆರೋಗ್ಯ ನಿರೀಕ್ಷಣಾಧಿಕಾರಿ ಜೆ.ರಜನಿ, ಸ್ಟೀಫನ್ ಮತ್ತಿತರರಿದ್ದರು.

ಚಿತ್ರ ೨೦ ಕೆ.ಎಲ್.ಆರ್. ೦೨ : ರಾಷ್ಟಿçÃಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ನಗರದ ತಾಪಂ ಸಭಾಂಗಣದಲ್ಲಿ ಮೆದುಳುಜ್ವರ ನಿಯಂತ್ರಣ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್.ಸತ್ಯನಾರಾಯಣಗೌಡ ಮಾತನಾಡಿದರು.