ವಿಜಯವಾಣಿ ಸುದ್ದಿಜಾಲ ಕೋಲಾರ
ಕೊಳವೆ ಬಾವಿ ಕೊರೆಸಲು ಬಂದ ಲಾರಿ ಮೆಣಸಿನಕಾಯಿ ಬೆಳೆ ಹಾಳು ಮಾಡಿದ ವಿಚಾರವಾಗಿ ದಾಯಾದಿಗಳ ಮಧ್ಯೆ ಗಲಾಟೆಯಾಗಿ ವ್ಯಕ್ತಿ ಕೊಲೆಯಾಗಿದ್ದಾನೆ.
ಕೊಲೆಯಾದ ವ್ಯಕ್ತಿ ಮುನಿರಾಜು (೩೫) ಮತ್ತೊಬ್ಬ ಈರಪ್ಪನಿಗೆ ಗಾಯಗಳಾಗಿ ಮಾಲೂರು ಆಸ್ಪತ್ರೆ ಸೇರಿದ್ದಾನೆ. ಬುಧವಾರ ರಾತ್ರಿ ೧೧ ಗಂಟೆಯಲ್ಲಿ ಗಲಾಟೆ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಪಡವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬುಧವಾರ ರಾತ್ರಿ ೧೦ ಗಂಟೆ ಸುಮಾರಿಗೆ ಅಣ್ಣಯ್ಯಪ್ಪ ಎಂಬುವವರ ಜಮೀನಿನಲ್ಲಿ ಬೋರ್ ವೆಲ್ ಕೊರೆಸಲು ಬಂದ ಲಾರಿ ಈರಪ್ಪ ಎಂಬುವವರ ಮೆಣಸಿನ ಗಿಡ ಹಾಳು ಮಾಡಿತ್ತು. ಇದನ್ನ ಪ್ರಶ್ನೆ ಮಾಡಿದ ಹಿನ್ನೆಲೆ ದಾಯಾದಿ ಮುನಿರಾಜುಗೆ ಹಿಂದೆಯಿAದ ತಲೆಗೆ ಅಣ್ಣಯ್ಯಪ್ಪ, ವೀರಸ್ವಾಮಿ, ಸೋಮಶೇಖರ್, ಕಾಂತರಾಜು, ಭರತ್, ವೆಂಕಟೇಶ್, ಭಾಗ್ಯಮ್ಮ ಅವರು ಹೊಡೆದಿದ್ದಾರೆ.
ಮುನಿರಾಜು ಸ್ಥಳದಲ್ಲೆ ಕಲ್ಲಿನ ಮೇಲೆ ಬಿದ್ದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮುನಿರಾಜು ಕೊನೆಯುಸಿರೆಳೆದಿದ್ದಾನೆ.
ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್ ಭೇಟಿ, ಪರಿಶೀಲನೆ ನಡೆಸಿದ್ದು, ಮಾಲೂರು ಪೊಲೀಸರು ಈಗಾಗಲೆ ೪ ಜನರನ್ನ ಬಂಧಿಸಿದ್ದಾರೆ, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.