ನ್ಯೂಸ್

ಮೃತ ವೃದ್ಧೆ ವಾರಸುದಾರ ಪತ್ತೆಗೆ ಮನವಿ

ಮಹದೇಶ್ವರ ಬೆಟ್ಟ: ಕುಟುಂಬ ಕಲಹ, ದಿಕ್ಕಿಲ್ಲದವರು ಬಂದು ಮಾದಪ್ಪನ ಸೇವೆ ಮಾಡುತ್ತಾ ಕಾಲ ಕಳೆಯುವಂತೆ ದೇವಸ್ಥಾನದ ಬಳಿ ಬದುಕು ನಡೆಸುತ್ತಿದ್ದ ವೃದ್ಧೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.

ಸಾಲೂರು‌ ಮಠದ ಸಮೀಪದ ಇರುತ್ತಿದ್ದ ಸುಮಾರು 80 ವರ್ಷದ ಗೌರಮ್ಮ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಆಕೆಯನ್ನು‌ 15 ದಿನಗಳ ಹಿಂದೆ ಕೊಳ್ಳೇಗಾಲ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮಲೆ‌ ಮಹದೇಶ್ವರ ಬೆಟ್ಟ ಠಾಣೆ ಪೊಲೀಸರು ಅಸ್ವಾಭಾವಿಕ ಸಾವು ಎಂದು‌ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ. ಕೋಲು ಮುಖ, ಗೋಧಿ ಬಣ್ಣ,‌ಸಾಧಾರಣ ಮೈಕಟ್ಟು, ತುಟಿಯ ಎಡಭಾಗ ಕಪ್ಪು ಮಚ್ಚೆ ಇರುವ ಮೃತ ವೃದ್ಧೆ ಗೌರಮ್ಮ ಗುರುತು ಸಿಕ್ಕವರು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಎಎಸ್ ಐ ವೀರಣ್ಣ ಆರಾಧ್ಯ (ಮೊ:9449980519) ಕೋರಿದ್ದಾರೆ.