ನ್ಯೂಸ್

ಮೂವರು ವಿದ್ಯಾರ್ಥಿಗಳಿಗೆ ಬಹುಮಾನ

ಚಿತ್ರದುರ್ಗ:ಬೆಂಗಳೂರು ದೀಕ್ಷಾ ವೇದಾಂತ ಅಕಾಡೆಮಿ, ಚಿತ್ರದುರ್ಗ ತಾಲೂಕು ಸಿದ್ದಾಪುರದ ನೂತನ್ ಪಿಯು ಕಾಲೇಜಿನಲ್ಲಿ ಭಾ ನುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಾಂಪಿಯನ್ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನೂತನ್ ಶಾಲೆಯ ವನಿತಾ(ಪ್ರ), ಬೊಮ್ಮೇನಹಳ್ಳಿ ಕಡ್ಲೇಗುದ್ದು ಇಂದಿರಾಗಾಂಧಿ ವಸತಿ ಶಾಲೆ ಅನ್ನಪೂರ್ಣಾ(ದ್ವಿ)ಹಾಗೂ ಚಿತ್ರದುರ್ಗದ ರಿಜನಲ್ ಶಾಲೆ ಸ್ವಾಲೇಬಿಯಾ ಫಾತೀಮಾ(ತೃ)ಸ್ಥಾನ ಪಡೆದಿದ್ದಾರೆ. ಜಿಲ್ಲೆಯ 587 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿಜೇತರಿಗೆ ಡಿಸೆಂಬರ್ 15ರಂದು ಬಹುಮಾನ ವಿತರಿಸಲಾಗುವುದು.