ಬೆಂಗಳೂರು: ರಾಜ್ಯದಲ್ಲಿ ಭಾನುವಾರ 9,543 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 5.75 ಲಕ್ಷಕ್ಕೆ ಏರಿಕೆಯಾಗಿದೆ. 6,522 ಮಂದಿ ಸೋಂಕು ಮುಕ್ತರಾಗಿದ್ದು, ಗುಣಮುಖರ ಸಂಖ್ಯೆ 4.62 ಲಕ್ಷ ತಲುಪಿದೆ.
ನಾಲ್ಕೈದು ದಿನಗಳಿಂದ ಹೊಸ ಸೋಂಕಿತ ಪ್ರಕರಣಗಳು ಕಡಿಮೆ ವರದಿಯಾಗುತ್ತಿದ್ದು, ಭಾನುವಾರ ಮತ್ತೆ ಏರಿಕೆಯತ್ತ ಸಾಗಿದೆ. ಇದೇ ಮಾದರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದಲ್ಲಿ ಮುಂದಿನ 3 ದಿನಗಳಲ್ಲಿ ಒಟ್ಟು ಸಂಖ್ಯೆ 6 ಲಕ್ಷ ಗಡಿ ದಾಟುವ ಸಾಧ್ಯತೆಯಿದೆ. ಹೊಸದಾಗಿ 79 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 8,582ಕ್ಕೆ ತಲುಪಿದೆ. 1,04 ಲಕ್ಷ ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಈ ಪೈಕಿ 835 ಮಂದಿ ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲಾವಾರು ಹೊಸ ಪ್ರಕರಣಗಳು?
ಬೆಂಗಳೂರು ನಗರದಲ್ಲಿ 4,217 (15 ಸಾವು), ಮೈಸೂರು 952 (1), ದಕ್ಷಿಣ ಕನ್ನಡ 460 (6), ಹಾಸನ 408 (6), ಉಡುಪಿ 320 (1), ಬಳ್ಳಾರಿ 310 (9), ತುಮಕೂರು 282 (5), ಮಂಡ್ಯ 276 (1), ಬೆಂಗಳೂರು ಗ್ರಾಮಾಂತರ 213 (2), ಚಿಕ್ಕಮಗಳೂರು 206 (1), ಚಿತ್ರದುರ್ಗ 198 (2), ಚಿಕ್ಕಬಳ್ಳಾಪುರ 195 (0), ಬೆಳಗಾವಿ 184 (5), ಶಿವಮೊಗ್ಗ 164 (5), ಧಾರವಾಡ 139 (2), ಕೋಲಾರ 125 (3), ಹಾವೇರಿ 115 (2), ರಾಯಚೂರು 102 (1), ಉತ್ತರ ಕನ್ನಡ 100 (0), ಕೊಪ್ಪಳ 87 (0), ರಾಮನಗರ 79 (0), ದಾವಣಗೆರೆ 74 (0), ಗದಗ 61 (1), ಕೊಡಗು 53 (0), ಬೀದರ್ 50 (0), ಬಾಗಲಕೋಟೆ 46 (1), ಯಾದಗಿರಿ 44 (0), ಚಾಮರಾಜನಗರ 38 (0),ವಿಜಯಪುರ 35 (3), ಕಲಬರುಗಿ 10 (6) ಸೇರಿದಂತೆ ರಾಜ್ಯದಲ್ಲಿ 9,543 ಮಂದಿಗೆ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಲಿಸದೆ 79 ಮಂದಿ ಮೃತಪಟ್ಟಿದ್ದಾರೆ.
ನಿಗಾದಲ್ಲಿರುವವರು - 1,62,847
ಪರೀಕ್ಷಿಸಿದ ಮಾದರಿಗಳು - 45,86,780
ಒಟ್ಟು ಸೋಂಕಿತರು - 5,75,566
ಮೃತಪಟ್ಟವರು - 8,582
ಅನ್ಯಕಾರಣದಿಂದ ಸಾವು - 19
ಗುಣಮುಖರಾದವರು - 4,62,241
ಚಿಕಿತ್ಸೆ ಪಡೆಯುತ್ತಿರುವವರು -1,04,724