ಬೈಲಹೊಂಗಲ: ಪಟ್ಟಣದ ಹರಳಯ್ಯ ಕಾಲನಿ ನಿವಾಸಿಗಳು ಎಸಿ ಕಚೇರಿ ಎದುರು ಬುಧವಾರದಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ, ಕೊಳೆಗೇರಿ ಅಭಿವೃದ್ಧಿ ನಿಗಮದ ಸಹಾಯಕ ಇಂಜಿನಿಯರ್ ಫನಿರಾಜ್ ಎಂ.ಜಿ. ಅವರು ಎರಡು ತಿಂಗಳಲ್ಲಿ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಶುಕ್ರವಾರ ಅಂತ್ಯಗೊಂಡಿದೆ.
ಮನೆ ಉತಾರಗಳಲ್ಲಿ ಪುರಸಭೆ ಮಾಲೀಕತ್ವ ಕಡಿಮೆ ಮಾಡಿ ಅನುಭೋಗದಾರರಾದ ನಿವಾಸಿಗಳ ಹೆಸರು ದಾಖಲಿಸಬೇಕು. ಹಕ್ಕುಪತ್ರ ವಿತರಿಸುವಂತೆ ಸತ್ಯಾಗ್ರಹ ಪ್ರಾರಂಭಿಸಿಲಾಗಿತ್ತು.
ಕರ್ನಾಟಕ ಅಂಬೇಡ್ಕರ್ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಪರಶುರಾಮ ರಾಯಬಾಗ, ವಿಭಾಗೀಯ ಅಧ್ಯಕ್ಷ ಮಾರುತಿ ಕೊಂಡೂರ ಮಾತನಾಡಿ, ಮಾತು ಕೊಟ್ಟಂತೆ ನ್ಯಾಯ ದೊರಕಿಸಬೇಕು. ತಪ್ಪಿದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಪುರಸಭೆಯಿಂದ ಸ್ಲಮ್ ನಿಗಮಕ್ಕೆ ಠರಾವು ಮಾಡಿ ಕಳಿಸಲಾಗಿದೆ. ಇಲಾಖೆಯಿಂದ ಕ್ರಮ ಕೈಗೊಂಡು ಅವರ ಬೇಡಿಕೆ ಈಡೇರಿಸಿ, ಇಲ್ಲದಿದ್ದರೆ ಅವರ ಜತೆಗೂಡಿ ಹೋರಾಟಕ್ಕೆ ಇಳಿಯಲಾಗುವುದು ಎಂದರು.
ಎಸಿ ಪ್ರಭಾವತಿ ಫಕೀರಪೂರ ಮಾತನಾಡಿ, ಕಾಲನಿಯ ಒಳಚರಂಡಿ, ಕುಡಿಯುವ ನೀರಿನ ನಳ, ಹರಳಯ್ಯ ಗಾರ್ಡನ್ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಸುನೀಲ ಹಲಗಿ, ಲಕ್ಷ್ಮೀ ರಾಯಬಾಗ, ಆಯಿಶಾ ಅನ್ಸಾರಿ, ಪುಂಡಲೀಕ ರಾಯಬಾಗ, ರಾಮು ಕಳಮಕರ, ಶಿವಾನಂದ ದಳವಾಯಿ, ವಿನೋದ ಸವದತ್ತಿ, ಭರಮಪ್ಪ ತೋರಗಲ್ಲ, ಉಮೇಶ ದೊಡಮನಿ, ರಿಯಾಜ್ ಅನ್ಸಾರಿ, ಖುರ್ಷಿದಾಬಾನು ಸಯ್ಯದ್, ಯಲ್ಲವ್ವ ಭಜಂತ್ರಿ, ಪಾರ್ವತಿ ಮಹಿಮನಾರ, ಕರುಣಾ ಅಗಾಸಿ, ಮೆಹಬೂಬಿ ಸಯ್ಯದ್, ಮಮ್ತಾಜ್ ಫನಿಬಂದ, ಈರಮ್ಮ ದಳವಾಯಿ, ತುಳಸಾಬಾಯಿ ರಾಯಬಾಗ, ಮಕ್ತುಮಬಿ ಮುಜಾವರ ಇದ್ದರು.