ನ್ಯೂಸ್

ಮೂರು ತಿಂಗಳೊಳಗೆ ಜಿಲ್ಲೆಯಲ್ಲಿ ೧೦೦ ಹೊಸ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾರಂಭ/ಎಲ್ಲಾ ಸಂಘಗಳಲ್ಲಿ ಸಾಫ್ಟ್ ವೇರ್ ಅಳವಡಿಕೆ/ ಕೆ.ವೈ.ನಂಜೇಗೌಡ

ವಿಜಯವಾಣಿ ಸುದ್ದಿಜಾಲ ಕೋಲಾರ

ಮುಂದಿನ ೩ ತಿಂಗಳೊಳಗೆ ಜಿಲ್ಲೆಯಲ್ಲಿ ೧೦೦ ಹೊಸ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು ಎಲ್ಲಾ ಸಂಘಗಳಲ್ಲಿ ಸಾಮಾನ್ಯ ಸಾಫ್ಟ್ ವೇರ್ ಅಳವಡಿಸಬೇಕು ಮತ್ತು ಶೇ. ೧೦೦ ರಷ್ಟು ಎಲ್ಲಾ ರೈತರಿಗೆ ಮತ್ತು ಹಸುಗಳಿಗೆ ವಿಮೆ ಮಾಡಿಸಬೇಕು ಎಂದು ಕೋಮುಲ್ ಅಧ್ಯಕ್ಷ ಹಾಗು ಶಾಸಕ ಕೆ.ವೈ.ನಂಜೇಗೌಡ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಒಕ್ಕೂಟದ ಅಧಿಕಾರಿಗಳ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ಒಂದು ವರ್ಷದೊಳಗೆ ಹಾಲು ಸಂಗ್ರಹಣೆ ಪ್ರಮಾಣವನ್ನು ೧೦ ಲಕ್ಷ ಲೀಟರಿಗೆ ಹೆಚ್ಚಿಸಲೇಬೇಕು. ಅದಕ್ಕಾಗಿ ಮೊದಲ ತ್ರೈಮಾಸಿಕ ಕ್ರಿಯಾ ಯೋಜನೆ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.

ಎಲ್ಲಾ ತಾಲ್ಲೂಕುಗಳಲ್ಲಿ ನಿರ್ದೇಶಕರಿಗೆ ಕಚೇರಿ ಪ್ರಾರಂಭಿಸಿ ಅವರವರ ಕ್ಷೇತ್ರಗಳಲ್ಲಿ ಒಕ್ಕೂಟದ ಕಾರ್ಯನಿರ್ವಹಣೆಯ ಉಸ್ತುವಾರಿ ವಹಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸುಚಿಸಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ನಂಜೇಗೌಡ ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಇದೀಗ ೪ ರೂ. ಪ್ರೋತ್ಸಾಹಧನ ನೀಡುತ್ತಿದ್ದು ಹೆಚ್ಚುವರಿಯಾಗಿ ಇನ್ನೂ ೨ ರೂ. ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದರು.

ಜೆಲ್ಲೆಯಲ್ಲಿ ಎಲ್ಲೆಲ್ಲಿ ಹಾಲು ಶೇಖರಣೆ ಆಗುತ್ತಿಲ್ಲ, ಅಲ್ಲಿ ಹೊಸ ಹಾಲು ಶೇಖರಣಾ ಕೇಂದ್ರವನ್ನು ಪ್ರಾರಂಭಿಸಲಾಗುವುದು. ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಒಕ್ಕೂಟದ ಲಾಭಾಂಷದಲ್ಲಿ ಯಾವ ರೀತಿ ನೀಡಬೆಕೆಂದು ಚಿಂತಿಸಲಾಗುತ್ತಿದೆ ಎಂದು ಹೇಳಿದರು.

ಹಸುಗಳಿಗೆ ವಿಮೆ ಮಾಡುತ್ತಿದ್ದರೂ ಕೇವಲ ಶೇ. ೬೦ ರಷ್ಟು ಮಾತ್ರ ವಿಮೆ ಕ್ಲೆöÊಮ್ ಆಗುತ್ತಿದ್ದು ಇದನ್ನು ಶೇ. ೧೦೦ ರಷ್ಟು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

-------------------

ಎಸ್‌ಎನ್ ಗೆ ಖಡಕ್ ಟಾಂಗ್:

ತಮ್ಮ ವಿರುದ್ಧ ಪದೇ ಪದೇ ಆರೋಪ ಮಾಡುತ್ತಿರುವ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಗೆ ಖಡಕ್ ಟಾಂಗ್ ನೀಡಿದ ನಂಜೇಗೌಡ ಇವತ್ತೇ ಕೊನೆ ಇನ್ಮುಂದೆ ಯಾವತ್ತಿಗೂ ನಾರಾಯಣಸ್ವಾಮಿ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಶಪಥ ಮಾಡಿದರು.

ಮಾತೆತ್ತಿದರೆ ನಾನು ದಲಿತ, ದಲಿತ ದಲಿತ ಎನ್ನುವ ನಾರಾಯಣಸ್ವಾಮಿ ಮೂರು ಬಾರಿ ಶಾಸಕರಾಗಲು ಎಲ್ಲಾ ಜಾತಿಯವರು ಮತ ಹಾಕಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.

ಒಕ್ಕಲಿಗರು ನನ್ನ ದೇವರು ಎನ್ನುತ್ತಾರೆ, ಆದರೆ ಅವರು ಒಕ್ಕಲಿಗ ಎಂಬ ಕಾರಣಕ್ಕೆ ನನಗೆ ಕೊಡ್ತಾ ಇರುವ ಕೆಲಸ ನೋಡಿದರೆ ದೇವರೇ ಕಾಪಾಡಬೇಕು.

ಮುಖ್ಯಮಂತ್ರಿ ಮುಂದೆ ಮಾತಾಡುವಾಗ ಒಕ್ಕಲಿಗರಿಗೆ ಸಪೋರ್ಟ್ ಮಾಡುತ್ತಿರುವ ಜಿಲ್ಲಾ ಮಂತ್ರಿ ಸರಿಯಿಲ್ಲ ಎಂದು ಆರೋಪಿಸಿದ್ದಾರೆ ಎಂದು ನಂಜೇಗೌಡ ನುಡಿದರು.

ನಾರಾಯಣಸ್ವಾಮಿ ಎಸ್ಸಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆತ ಬಿಪಿಎಲ್ ಅಲ್ಲ, ಎಪಿಎಲ್ ಎಂದು ವ್ಯಂಗ್ಯ ಮಾಡಿದ ನಂಜೇಗೌಡ ಮಾತೆತ್ತಿದರೆ ಹಾಲು ಒಕ್ಕೂಟದಲ್ಲಿ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನುತ್ತಾರೆ. ಇಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಮೊತ್ತವೇ ೩೫೦ ಕೋಟಿ. ಇನ್ನು ನೂರಾರು ಕೋಟಿರೂ. ಹಗರಣ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕೋಟ್ಯಾಂತರ ರೂ ಹಣ ನುಂಗಿ ಹಾಕಲು ಹಾಲು ಒಕ್ಕೂಟವೇನು ರಿಯಲ್ ಎಸ್ಟೇಟ್ ಬಿಸಿನೆಸ್ಸಾ? ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಹಣ ಮಾಡಿಕೊಳ್ಳುವ ರಿಯಲ್ ಎಸ್ಟೇಟ್ ವ್ಯವಹಾರವೇ ಎಂದು ನಂಜೇಗೌಡ ಪರೋಕ್ಷವಾಗಿ ಚುಚ್ಚಿದರು.

ಚಿತ್ರ ೦೯ ಕೆ.ಎಲ್.ಆರ್. ೦೨ ಅಧಿಕಾರ ವಹಿಸಿಕೊಂಡ ನಂತರ ಒಕ್ಕೂಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಕೆ.ವೈ.ನಂಜೇಗೌಡ