ರಂಗಾಂತರಂಗ ಮೈಸೂರು ಮಕ್ಕಳ ರಂಗಭೂಮಿ ವತಿಯಿಂದ ಹಮ್ಮಿಕೊಂಡಿದ್ದ 1 ವರ್ಷದ ವಾರಾಂತ್ಯ ತರಬೇತಿಯಲ್ಲಿ ಪಾಲ್ಗೊಂಡ ಮಕ್ಕಳು ಅಭಿನಯಿಸುತ್ತಿರುವ ಪಿ.ಲಂಕೇಶ್ ಅವರ ಕಥೆಯಾಧಾರಿತ ಮುಟ್ಟಿಸಿಕೊಂಡವರು ನಾಟಕ ಪ್ರದರ್ಶನ ಅ.30ರ ಸಂಜೆ 6ಕ್ಕೆ ಕಲಾ ಮಂದಿರದ ಕಿರು ರಂಗಮಂದಿರದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಕೀರ್ತಿರಾಜ್ ತಿಳಿಸಿದರು.
ಆರ್.ರಘು ಕೌಟಿಲ್ಯ, ಡಾ.ಅಮರ್‌ಕುಮಾರ್, ಡಾ.ಟಿ.ಪದ್ಮಶ್ರೀ, ಎಂ. ಚಂದ್ರಶೇಖರ್, ವೆಂಕಟೇಶ್ ಈಡಿಗರ ಮುಖ್ಯ ಅತಿಥಿಗಳಾಗಿರುವರು. ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ನಾಟಕದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.