ವಿಜಯವಾಣಿ ಸುದ್ದಿಜಾಲ ಕೋಲಾರ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ೫ ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಹ ಆಗುವುದಿಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಕೋಲಾರ ಬಳಿಯ ಗಾಂದಿನಗರದಿAದ ಗದ್ದೆಕಣ್ಣೂರು ಗ್ರಾಮದ ಸುಮಾರು ೩ ಕೋಟಿ ರೂಪಾಯಿಗಳ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನವರು ೫ ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಸಿದ್ದು ಪರ ಬ್ಯಾಟ್ ಬಿಸಿದರು.
೨೦೨೮ ರಲ್ಲೂ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ, ಇದಕ್ಕೆ ಯಾರಿಂದಲೂ ಯಾವುದೇ ಅಭ್ಯಂತರವಿಲ್ಲ, ಸಿದ್ದರಾಮಯ್ಯ ರಾಜ್ಯದಲ್ಲಿ ತುಂಬಾ ಆಕ್ವೀವ್ ಆಗಿ ಕೆಲಸ ಮಾಡುತ್ತಿದ್ದಾರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಹ ಆಗಿವುದಿಲ್ಲ, ಇದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಹೇಳಲಾಗುತ್ತಿದೆ. ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ, ಒಬ್ಬರಿಗೆ ಒಂದೇ ಹುದ್ದೆಯೆಂಬ ಪ್ರಶ್ನೆಗೆ, ಪಕ್ಷ ಬೇರೆ, ಸರ್ಕಾರ ಬೇರೆ. ಮಲ್ಲಿಕಾರ್ಜುನ ಖರ್ಗೆಯವರರು ದೊಡ್ಡವರು ಏನು ಹೇಳುತ್ತಾರೋ ಅದೇ ಅಂತಿಮ ತೀರ್ಮಾನವಾಗಲಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಶ್ನಿಸಿದಾಗ ನನಗೆ ಗೊತ್ತಿಲ್ಲ, ನಾನು ಯಾರ ಮನೆ ಬಾಗಿಲಿಗೆ ಹೋಗುವುದಿಲ್ಲ, ಕೋಲಾರ ಜನತೆ ನನಗೆ ಕೆಲಸ ಮಾಡುವಂತೆ ಮತ ಹಾಕಿದ್ದಾರೆ.
ಕೆಲಸ ಮಾಡಕ್ಕೆ ಸಿದ್ದನಾಗಿದ್ದಾನೆ, ಮಂತ್ರಿಗಿರಿ ಇರಲಿ, ಬಿಡಲಿ, ಮಂತ್ರಿಗಿರಿಗೆ ಆಸೆ ಪಟ್ಟಿಲ್ಲ ಎಂದರು.
ಕೋಲಾರ ಕ್ಷೇತ್ರದಲ್ಲಿ ನಮ್ಮ ಜಾತಿ ಮತಗಳು ಕೇವಲ ಬೆರಳಿಕೆಯಷ್ಟೇ ಇರುವುದು, ಇವತ್ತು ಜನ ನಂಬಿ ನನಗೆ ಮತ ಹಾಕಿದ್ದಾರೆ, ಅವರ ಋಣ ತೀರಿಸುವೆ ಕೆಲಸ ಮಾಡುವೆ ಎಂದರು.
ಉದಯಗಿರಿ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಶಾಸಕರು, ನಾನು ನನ್ನ ವಿಧಾನಸಭಾ ಕ್ಷೇತ್ರದ ಕುರಿತು ಕೇಳಿದರೆ ಹೇಳುವೆ, ಪಕ್ಕದ ಜಿಲ್ಲೆಗಳ ಬಗ್ಗೆ ಮಾತನಾಡುವುದಿಲ್ಲವೆಂದು ನುಣಚಿಕೊಂಡರು. ಇನ್ನು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡಲಾಗುತ್ತಿದೆ. ಎಂದು ತಿಳಿಸಿದರು.
ಚಿತ್ರ ೧೬ ಕೆ.ಎಲ್.ಆರ್. ೦೧ ಕೊತ್ತೂರು ಮಂಜುನಾಥ್ ರವರ ಭಾವಚಿತ್ರ.