ನ್ಯೂಸ್

ಮುಕ್ತಿ ಸಿಗದ ಮುದುವಾಡಿ ಕೆರೆ ಕೋಡಿ ರಸ್ತೆ / ಗುಂಡಿಗಳದ್ದೇ ಕಾರುಬಾರು / ಶಾಸಕರ ಮಾತಿಗೂ ಕಿಮ್ಮತ್ತು ನೀಡದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಶ್ರೀನಿವಾಸಪುರ ರಸ್ತೆಯ ಮುದುವಾಡಿ ಕೆರೆಕೋಡಿಯ ರಸ್ತೆ ದುರಸ್ಥಿಯಾಗದೆ ಕೋಡಿ ರಸ್ತೆ ಮೇಲೆ ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಅಂಗೈಲಿ ಪ್ರಾಣ ಹಿಡಿದು ಪ್ರತಿದಿನ ಸಂಚರಿಸುವAತಾಗಿದೆ.

ಕಳೆದ ೨ ವಾರಗಳಿಂದ ರಸ್ತೆಯ ಮೇಲೆ ಕೋಡಿ ಹರಿಯುತ್ತಿದ್ದು, ಅದೇ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿವೆ. ಮೊದಲೇ ಕೋಡಿ ರಸ್ತೆ ಗುಂಡಿಗಳು ಬಿದ್ದಿದ್ದು, ರಸ್ತೆಯ ಗುಂಡಿಗಳನ್ನು ಮುಚ್ಚುವಂತೆ ಸ್ಥಳೀಯ ಶಾಸಕ ವೆಂಕಟಶಿವಾರೆಡ್ಡಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.

ಕೋಡಿ ಬಳುವ ಒಂದು ದಿನ ಮುಂಚಿತವಾಗಿ ತೇಪೆ ಕಾರ್ಯ ಮಾಡಿದರು. ಕೋಡಿ ಬಿದ್ದ ನಂತರ ನೀರಿನ ಹರಿವಿನ ಪ್ರಮಾಣ ಹೆಚ್ಚಾದ ಕಾರಣ ತೇಪೆ ಕಾರ್ಯ ನೀರಿನಲ್ಲಿ ಕೊಚ್ಚಿ ಹೋಯಿತು. ಮತ್ತಷ್ಟು ಹಳ್ಳಗಳು ಬಿದ್ದಿದ್ದು, ಈಗ ಕೋಡಿ ಮೇಲಿನ ರಸ್ತೆ ಮನುಷ್ಯು ಅಸ್ಥಿರಪಂಜರದAತೆ ಕಾಣುತ್ತಿದೆ.

ಕೋಡಿ ಹರಿಯುವ ಸಂದರ್ಭದಲ್ಲಿ ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಸವಾರರು ಅಂಗೈಲಿ ಜೀವ ಹಿಡಿದು ವಾಹನಗಳನ್ನು ಚಾಲನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ನಾಲ್ಕೆöÊದು ದಿನಗಳಿಂದ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಇಲಾಖೆಯವರು ಮುಂದಾಗುತ್ತಿಲ್ಲ. ಮತ್ತೆ ಮಳೆ ಬರುವ ಸೂಚನೆ ಇದ್ದು, ಮತ್ತೆ ಕೋಡಿ ಬಿದ್ದರೆ ರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸ್ಥಳೀಯರು ಶಾಸಕ ವೆಂಕಟಶಿವಾರೆಡ್ಡಿಯವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಅಸಾಯಕತೆಯನ್ನು ವ್ಯಕ್ತಪಡಿಸಿರುವ ಶಾಸಕರು ಇನ್ನು ಯಾವ ಭಾಷೆಯಲ್ಲಿ ಹೇಳಬೇಕೋ ಗೊತ್ತಿಲ್ಲ. ಅಧಿಕಾರಿಗಳು ಸ್ಪಂಧನೆ ಮಾಡುತ್ತಿಲ್ಲ. ಕೋಲಾರದಲ್ಲಿ ಲೋಕೋಪಯೋಗಿ ಇದೆಯೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕನಿಷ್ಟ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರೂ ಸಾಕಾಗುತ್ತಿತ್ತು. ಹೀಗೆ ಮುಂದುವರೆದರೆ ಹಬ್ಬ ಮುಗಿದ ನಂತರ ಮೇಲಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಚಿತ್ರ ೨೧ ಕೆ.ಎಲ್.ಆರ್. ೦೭ : ಮುದುವಾಡಿ ಕೆರೆಕೋಡಿ ರಸ್ತೆಯ ಮೇಲೆ ಗುಂಡಿಗಳು ಬಿದ್ದಿರುವುದು.