ನ್ಯೂಸ್

ಮುಂಬರಲಿರುವ ಪಂಚಾಯತ್ ಚುನಾವಣೆಗೆ ಸಂಘಟಿತರಾಗಿ/ವೈಯುಕ್ತಿಕ ಪ್ರತಿಷ್ಟೆ ಬದಿಗೆ ಸರಿಸಿ/೨೦೨೫ಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು/ ಸಚಿವ ಕೆ.ಹೆಚ್. ಮುನಿಯಪ್ಪ

ವಿಜಯವಾಣಿ ಸುದ್ದಿಜಾಲ ಕೋಲಾರ

ಮುಂಬರಲಿರುವ ತಾಲ್ಲೂಕು, ಜಿಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಲ್ಲರೂ ಸಂಘಟಿತರಾಗಬೇಕಾಗಿದೆ. ವೈಯುಕ್ತಿಕ ಪ್ರತಿಷ್ಠೆಗಳನ್ನು ಬದಿಗೆ ಸರಿಸಿ ಮುಂದೆ ಪಕ್ಷವು ಅಧಿಕಾರದ ಚುಕ್ಕಾಣೆ ಹಿಡಿಯಲು ಗ್ರಾಮೀಣ ಪ್ರದೇಶದಿಂದ ಸಂಘಟಿತರಾಗಬೇಕೆAದು ರಾಜ್ಯ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ನಗರದ ಹಾರೋಹಳ್ಳಿ ತಮ್ಮ ಗೃಹದಲ್ಲಿ ಆಯೋಜಿಸಿದ್ದ ಗಣಪತಿ ಹೋಮ ಹಾಗೂ ದೇವತಾ ಪೂಜಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಿದ್ದಾಂತ ಕಾಂಗ್ರೆಸ್ ಪಕ್ಷದ್ದಾಗಿದೆ, ಜನತೆಯ ಸೇವೆಯೇ ಜನಾರ್ಧನ ಸೇವೆಯೆಂದು ಪರಿಗಣಿಸಿರುವ ಪಕ್ಷವು ಸಾರ್ವಜನಿಕರಿಗೆ ಚುನಾವಣೆ ಪೂರ್ವ ನೀಡಿದಂತೆ ಪಂಚ ಗ್ಯಾರಂಟಿಗಳನ್ನು ಜಾತ್ಯಾತೀತವಾಗಿ ಪಕ್ಷಾತೀತವಾಗಿ ನುಡಿದಂತೆ ಅನುಷ್ಟನಕ್ಕೆ ತರಲಾಗಿದೆ, ರಾಜ್ಯದ ೬.೫ ಕೋಟಿ ಜನತೆಯಲ್ಲಿ ೪.೫ ಕೋಟಿ ಜನತೆ ಗ್ಯಾರಂಟಿಗಳ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಇದೊಂದು ಐತಿಹಾಸಿಕ ದಾಖಲೆಯಾಗಿದೆ ಎಂದರು.

ಕಳೆದ ೨೦೧೩ರ ಕೇಂದ್ರದಲ್ಲಿನ ಮನಮೋಹನ್ ಸಿಂಗ್‌ರ ಆಡಳಿತದಲ್ಲಿ ಬಡ ಜನತೆ ಆಹಾರ ಇಲ್ಲದೆ ನರಳಬಾರದು ಎಂಬ ದೆಸೆಯಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತರಲಾಯಿತು, ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ ಪ್ರತಿಯೊರ್ವರಿಗೆ ಪ್ರತಿ ಮಾಹೆ ೫ ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರವು ಸಹ ಕೈಜೋಡಿಸಿದ್ದು ಪ್ರತಿಯೊಬ್ಬರಿಗು ೫ ಕೆ.ಜಿ ಅಕ್ಕಿ ಸೇರಿದಂತೆ ಒಟ್ಟು ೧೦ ಕೆ.ಜಿ. ಅಕ್ಕಿ ನೀಡುವಲ್ಲಿ ಯಶಸ್ವಿಯಾಗಿದೆ. ಹಸಿವು ಮುಕ್ತ ಭಾರತ ಮಾಡಲು ಮುಂಚೂಣಿಯಲ್ಲಿದೆ. ಮಹಾತ್ಮ ಗಾಂಧಿಜೀ ಕನಸು ನನಸು ಮಾಡಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದರು.

ಕಳೆದ ಚುನಾವಣೆಯ ನಂತರ ಉಚಿತ ಬಸ್, ಉಚಿತ ವಿದ್ಯುತ್, ನಿರುದ್ಯೋಗಿ ವೇತನ ಹಾಗೂ ಕುಟುಂಬದ ಯಾಜಮಾನಿಗೆ ೨ ಸಾವಿರ ರೂ ಪ್ರತಿ ಮಾಹೆ ನೀಡುವ ಮೂಲಕ ಕುಟುಂಬ ನಿರ್ವಾಹಣೆಗೆ ಕಾಂಗ್ರೆಸ್ ಪಕ್ಷವು ಕೈಜೋಡಿಸಿರುವುದಕ್ಕೆ ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ, ಗ್ಯಾರಂಟಿ ಯೋಜನೆಗಳಿಗೆ ೫೬ ಸಾವಿರ ಕೋಟಿ ಮೀಸಲಿಟ್ಟಿದೆ, ಅಷ್ಟೇ ಅಲ್ಲದೆ ನರೇಗಾದ ಉದ್ಯೋಗ ಖಾತ್ರಿ ಯೋಜನೆಗೆ ಮಹಾತ್ಮಗಾಂಧಿಜೀ ಹೆಸರನ್ನೆ ಇಡಲಾಗಿದೆ, ರಾಜ್ಯವು ಸುಭಿಕ್ಷೆಯಾಗಿದೆ, ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ಗ್ಯಾರಂಟಿಯ ಜೂತೆಗೆ ಅಭಿವೃದ್ದಿ ಕಾರ್ಯಗಳು ಯಾವುದೇ ಆಡೆತಡೆ ಇಲ್ಲದೆ ಸಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸಮರ್ಪಕವಾದ ಅನುದಾನ ಹಂಚಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕೋಲಾರಕ್ಕೆ ೧೫ ದಿನಕ್ಕೂಮ್ಮೆಭೇಟಿ :

ಕೋಲಾರ ಲೋಕಸಭಾ ಕ್ಷೇತ್ರದ ಜನತೆಯು ೮ ಚುನಾವಣೆಗಳಲ್ಲಿ ನನಗೆ ಮತ ನೀಡಿ ಪೋಷಿಸಿದ್ದಾರೆ, ೭ ಬಾರಿ ಗೆಲುವು ಪಡೆದು ೮ನೇ ಭಾರಿಯ ಚುನಾವಣೆಯಲ್ಲಿ ಗೆಲ್ಲಲಾಗದಿದ್ದರೂ ಜನತೆಯ ಪ್ರೀತಿ ವಿಶ್ವಾಸಕ್ಕೆ ಎಂದೂ ಧಕ್ಕೆ ಬಂದಿಲ್ಲ. ಕಳೆದ ಚುನಾವಣೆಯ ನಂತರ ಈ ಕ್ಷೇತ್ರಕ್ಕೆ ಬರಲಾಗಲಿಲ್ಲ. ಇನ್ನು ಮಂದೆ ೧೫ ದಿನಕ್ಕೂಮ್ಮೆಯಾದರೂ ಬರಲು ನಿರ್ಧರಿಸಿದ್ದೇನೆ. ಲೋಕ ಕಲ್ಯಾಣಕ್ಕಾಗಿ ಇಂದು ಹೋವi ಪೂಜೆ ಏರ್ಪಡಿಸಿದ್ದ ಹಿನ್ನಲೆಯಲ್ಲಿ ಆಗಮಿಸಿದ್ದೇನೆ ಎಂದು ತಿಳಿಸಿದರು.

ಕೋಲಾರಕ್ಕೆ ರೀ ಎಂಟ್ರಿ :

ರಾಜಕೀಯವಾಗಿ ಭದ್ರತೆ ನೀಡಿದ ಕೋಲಾರ ಕ್ಷೇತ್ರದ ಜನತೆ ನಿರಂತವಾಗಿ ನನಗೆ ಮತ ನೀಡಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಸತತವಾಗಿ ೭ ಬಾರಿ ಆಯ್ಕೆ ಮಾಡಿ ಸಂಸತ್ ಕಳುಹಿಸಿರುವ ಕ್ಷೇತ್ರವು ಅಪರೂಪವಾಗಿದೆ. ಅವರ ಕಷ್ಟ ಸುಖಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿಯು ನನ್ನ ಮೇಲಿದೆ. ಮತದಾರರ ಋಣ ನನ್ನ ಮೇಲಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಕನಿಷ್ಠ ೧೫ ದಿನಕ್ಕಾದರೂ ಕೋಲಾರ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಕುಂದು ಕೊರತೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಶೀಘ್ರದಲ್ಲಿ ಮುಖ್ಯ ಮಂತ್ರಿಗಳನ್ನು ಆಹ್ವಾನಿಸಿ ಸರ್ಕಾರದ ಸೌಲಭ್ಯಗಳನ್ನು ಸಾಮೂಹಿಕವಾಗಿ ವಿತರಿಸಲು ೧ ಲಕ್ಷ ಮಂದಿ ವಿವಿಧ ಫಲಾನುಭವಿಗಳನ್ನು ಗುರುತಿಸಲಾಗುವುದು ಎಂದು ಹೇಳಿದರು.

೧೫೦ ಕೋಟಿ ರೂ ವೆಚ್ಚದಲ್ಲಿ ಶಾದಿ ಮಹಲ್, ಕಲ್ಯಾಣ ಮಂಟಪಗಳು, ಮಹಿಳೆಯರ ಸ್ವಾವಲಂಭಿ ಬದುಕಿಗೆ ಹೊಲಿಗೆ ಯಂತ್ರಗಳು, ವಿಕಲಚತನರಿಗೆ ತ್ರಿಚಕ್ರವಾಹನ, ವಿದ್ಯಾರ್ಥಿ ವೇತನ, ರೈತರಿಗೆ ಕೃಷಿ ಪರಿಕರಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಗುವುದು ೧೦೧ ಗ್ರಾಪಂ ಮಟ್ಟದಲ್ಲಿ ಗುಣಮಟ್ಟ ಶಿಕ್ಷಣಕ್ಕೆ ಕಾರ್ಯಕ್ರಮ ರೂಪಿಸಲಾಗುವುದು ಸಿ.ಎಸ್.ಆರ್ ಅನುದಾನದಲ್ಲಿ ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.

ಪಕ್ಷವನ್ನು ಬಲಪಡಿಸಬೇಕು :

ರಾಜಕೀಯವಾಗಿ ಪಕ್ಷವನ್ನು ಬಲಪಡಿಸಲು ಸಂಘಟಿಸಲು ಕೆಲವೊಮ್ಮೆ ಸ್ಥಾನಮಾನಗಳನ್ನು ತ್ಯಾಗ ಮಾಡುವುದು ಹೊಸದ್ದೇನಲ್ಲ. ಬೇರೆಯವರಿಗೆ ನೀಡಿರುವ ಅವಕಾಶವನ್ನು ಸದ್ಬಳಿಸಿಕೊಳ್ಳಲಿ, ಮುಂದಿನ ೨೦೨೮ಕ್ಕೆ ಪುನಹ ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲು ಸಂಘಟನೆಗೆ ಒತ್ತು ನೀಡುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾನು ಕೆಲವೊಂದು ಸಲಹೆಗಳನ್ನು ನೀಡಿದ್ದು ನಿಜ. ಅದನ್ನು ಸ್ವೀಕರಿಸುವುದು ಬಿಡುವುದು ಪಕ್ಷದ ಹೈಕಮಾಂಡ್‌ಗೆ ಸೇರಿದೆ, ರಾಜ್ಯದಲ್ಲಿ ಪ್ರಸ್ತುತ ಮುಖ್ಯಮಂತ್ರಿಗಳ, ಉಪಮುಖ್ಯ ಮಂತ್ರಿಗಳ, ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾವನೆ ಹೈಕಮಾಂಡ್ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಉಗ್ರರ ಮೇಲೆ ಯುದ್ದ. ಪಾಕಿಸ್ತಾನದ ನಾಗರಿಕರ ಮೇಲೆ ಅಲ್ಲ.

ರಾಷ್ಟçದಲ್ಲಿ ಗಾಂಧಿಜೀ ಶಾಂತಿ ಪಾಠವನ್ನು ಪಾಲಿಸಲಾಗುತ್ತಿದೆ. ೨೦೦ ವರ್ಷಗಳ ಬ್ರಿಟೀಷರು ಭಾರತವನ್ನು ಆಡಳಿತ ನಡೆಸಿದಾಗ ಗಾಂಧಿಜೀಯವರ ಶಾಂತಿ ಸೂತ್ರದಿಂದಲೇ ನಾವು ಗೆಲುವು ಸಾಧಿಸಿದ್ದೇವು ಎಂಬುವುದನ್ನು ಮರೆಯಬಾರದು ನಾವು ಪಾಕಿಸ್ತಾನದ ಮೇಲೆ ಯುದ್ದ ಮಾಡುತ್ತಿಲ್ಲ. ಉಗ್ರರ ಮೇಲೆ ನಾವು ಯುದ್ದ ಮಾಡುತ್ತಿದ್ದೇವೆ. ಪಾಕಿಸ್ತಾನದಲ್ಲಿ ಅಡಗಿರುವ ನೆಲೆಗಳ ಮೇಲೆ ಹಾಗೂ ಅವರ ಬೆಂಬಲಿತರ ಮೇಲೆ ನಮ್ಮ ಯುದ್ದವಾಗಿದೆ. ನಮ್ಮ ಗುರಿ ಉಗ್ರರು, ಭಯೋತ್ಪಾದಕರ ಮೇಲೆ ಅಷ್ಟೇ. ವಿನಾಕಾರಣ ನಮ್ಮ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರಿಂದ ನಾವು ದಾಳಿ ಮಾಡುತ್ತಿದ್ದೆವೆ. ಯುಧ್ದದ ಕಲಹಗಳಿಂದ ಯಾರಿಗೂ ಯಾವುದೇ ಲಾಭವಿಲ್ಲ. ನಾವೆಲ್ಲಾ ಮಾನವರು. ಮಾನವರು ಮಾನವರಾಗಿ ಬಾಳ್ವೆ ನಡೆಸೋಣ, ಮಾನವೀಯತೆಯ ಸಿದ್ದಾಂತಗಳನ್ನು ಪಾಲಿಸೋಣ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಿö್ಮÃ ನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್.ಸಿ. ಘಟಕದ ಅಧ್ಯಕ್ಷ ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಉದಯ್ ಶಂಕರ್, ಮಾಜಿ ಜಿ.ಪಂ.ಸದಸ್ಯ ರಾಮಲಿಂಗಾರೆಡ್ಡಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಯಕ್ಬಾಲ್ ಅಹ್ಮದ್, ಮುಖಂಡರಾದ ಸವಿತಾ ಮಂಜುನಾಥ್ ಇದ್ದರು.

ಚಿತ್ರ ೧೨ ಕೆ.ಎಲ್.ಆರ್. ೦೧ : ಕೋಲಾರದ ಹಾರೋಹಳ್ಳಿ ತಮ್ಮ ನಿವಾಸದಲ್ಲಿ ರಾಜ್ಯ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವುದು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಿö್ಮÃ ನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮುಂತಾದವರಿದ್ದರು.