ನ್ಯೂಸ್

ಮುಂದಿನ ತಿಂಗಳು ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣ / ಸಂಪುಟ ವಿಸ್ತರಣೆ ವೇಳೆ ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ಸಿಗುವುದೇ / ೪ ಜನ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಮುಂದಿನ ತಿಂಗಳು ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳಲಿದೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಕೆಲವು ಬದಲಾವಣೆಗಳು ಆಗಲಿವೆ ಎಂಬ ಚರ್ಚೆಯಲ್ಲಿ ಇದ್ದು, ಕೋಲಾರ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಬದಲಾವಣೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೋಲಾರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ನೀಡಬೇಕೆಂಬ ಬಹುದಿನಗಳ ಬೇಡಿಕೆಯು ಆಗಿದೆ. ಜಿಲ್ಲೆಯಲ್ಲಿ ಕಾಂಗ್ರೇಸ್‌ನ ೪ ಶಾಸಕರು, ಇಬ್ಬರು ಎಂ.ಎಲ್.ಸಿ.ಗಳು ಇದ್ದಾರೆ. ಜಿಲ್ಲೆಯಿಂದ ಆಯ್ಕೆಯಾಗಿರುವ ೪ ಶಾಸಕರು ಹೊಸಬರೇನೂ ಅಲ್ಲ. ೩ ಮತ್ತು ೨ ಬಾರಿ ಶಾಸಕರಾಗಿ ಅನುಭವ ಹೊಂದಿರುವ ಶಾಸಕರು ಇದ್ದಾರೆ. ಸರ್ಕಾರ ರಚನೆಯಾದ ಸಂದರ್ಭದಲ್ಲಿ ೩ನೇ ಬಾರಿಗೆ ಆಯ್ಕೆ ಆಗಿರುವ ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ ಮಂತ್ರಿ ಸ್ಥಾನದ ಆಕಾಂಕ್ಷೆಯಾಗಿದ್ದರು.

ಕೆ.ಜಿ.ಎಫ್. ಕ್ಷೇತ್ರದಿಂದ ಆಯ್ಕೆಯಾಗಿರುವ ರೂಪಕಲಾ ಶಶಿಧರ್ ರವರು ಸಹ ೨ನೇ ಬಾರಿ ಆಯ್ಕೆ ಆಗಿದ್ದು, ಅವರು ಸಹ ಆಕಾಂಕ್ಷಿಯಾಗಿದ್ದರು. ತಂದೆಗೆ ಮಂತ್ರಿ ಸ್ಥಾನ ದೊರೆತ ಹಿನ್ನಲೆಯಲ್ಲಿ ಆಕಾಂಕ್ಷಿಯಿAದ ಹಿಂದೆ ಸರಿದಿದ್ದರು. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಇವರು ಸಹ ೨ನೇ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಕೋಚಿಮುಲ್ ಅಧ್ಯಕ್ಷರ ಸ್ಢಾನ ಇದ್ದ ಕಾರಣ ಅವರು ಸಚಿವ ಆಕಾಂಕ್ಷಿಗಾಗಿ ಲಾಭಿ ನಡೆಸಲಿಲ್ಲ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹೈಕಮ್ಯಾಂಡ್ ನೀಡಿದ್ದರೆ ಸಚಿವ ಸ್ಥಾನ ಪಡೆಯುತ್ತೇನೆ. ಇಲ್ಲವೇ ಶಾಸಕರಾಗಿ ಮುಂದುವರೆಯುತ್ತೇನೆ ಎಂಬ ಲೆಕ್ಕಾಚಾರದಲ್ಲಿ ಇದ್ದರು.

ಎಂ.ಎಲ್.ಸಿ. ನಸೀರ್ ಅಹ್ಮದ್ ಅವರು ಸಹ ಸಚಿವ ಆಕಾಂಕ್ಷಿಯಾಗಿ ಲಾಭಿ ನಡೆಸಿದರು. ಮುಖ್ಯಮಂತ್ರಿಗಳ ರಾಜಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡರು. ಎಂ.ಎಲ್.ಸಿ.ಅನಿಲ್‌ಕುಮಾರ್ ಪ್ರಥಮ ಬಾರಿ ಎಂ.ಎಲ್.ಸಿ.ಯಾದ ಕಾರಣ ತಟಸ್ಥವಾಗಿದ್ದರು.

ಕೋಲಾರ ಜಿಲ್ಲಾ ಕಾಂಗ್ರೇಸ್‌ನಲ್ಲಿ ೨ ಗುಂಪುಗಳಾಗಿರುವ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಕೆ.ಹೆಚ್.ಮುನಿಯಪ್ಪನವರಿಗೆ ಸಚಿವ ಸ್ಥಾನ ನೀಡಿದರು. ಅವರಿಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನ ನೀಡಬೇಕೆಂದು ಒಂದು ಗುಂಪು ಪಟ್ಟು ಹಿಡಿದರು. ಮತ್ತೊಂದು ಗುಂಪು ಕೃಷ್ಣೇಬೈರೇಗೌಡರನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಸ್ಢಾನಕ್ಕೆ ನೇಮಕ ಮಾಡಬೇಕೆಂದು ಪಟ್ಟು ಹಿಡಿದರು. ೨ ಗುಂಪುಗಳನ್ನು ಸಮಾಧಾನಪಡಿಸುವ ಸಲುವಾಗಿ ಹೈಕಮ್ಯಾಂಡ್ ಬೈರತಿ ಸುರೇಶ್‌ರವರನ್ನು ಕೋಲಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಎರಡೂವರೆ ವರ್ಷ ಪೂರೈಸಿದ ನಂತರ ಕೋಲಾರಕ್ಕೆ ಸಚಿವ ಸ್ಥಾನ ನೀಡುವುದಾಗಿ ಹೈಕಮ್ಯಾಂಡ್ ಭರವಸೆ ನೀಡಿದರು.

ಬೈರತಿ ಸುರೇಶ್‌ರವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕೋಲಾರಕ್ಕೆ ರಾಷ್ಟಿçÃಯ ಹಬ್ಬಗಳ ದಿನಾಚರಣೆಗೆ ಹಾಗೂ ಕೆ.ಡಿ.ಪಿ.ಸಭೆಗಳನ್ನು ನಡೆಸಿ ಹೋಗುವುದಕ್ಕೆ ಮಾತ್ರ ಸೀಮಿತರಾಗಿದ್ದರು. ಜಿಲ್ಲೆಯ ಕಾಂಗ್ರೇಸ್‌ನಲ್ಲಿ ಉದ್ಭವಿಸಿರುವ ಎರಡು ಗುಂಪುಗಳನ್ನು ಒಂದು ಮಾಡುವ ಹಾಗೂ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಕೋಲಾರ ಜಿಲ್ಲಾ ಕಾಂಗ್ರೇಸ್‌ನ ಸಹವಾಸವೇ ಬೇಡ ಎನ್ನುವ ರೀತಿಯಲ್ಲಿ ಮೌನಕ್ಕೆ ಶರಣಾಗಿಬಿಟ್ಟರು.

ಕಾಂಗ್ರೇಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ನಂತರ ಕೆಲವು ಹಿರಿಯ ಸಚಿವರನ್ನು ಕೈಬಿಡಲಿದ್ದಾರೆ ಎಂಬ ಮಾತುಗಳು ಚರ್ಚೆಯಾಗುತ್ತಿರುವ ಹಿನ್ನಲೆಯಲ್ಲಿ ಕೆ.ಹೆಚ್.ಮುನಿಯಪ್ಪನವರನ್ನು ಸಹ ಕೈಬಿಡಲಿದ್ದಾರೆ. ಹಾಗೂ ಈ ಹಿಂದೆ ಅವರೇ ಹೇಳಿಕೆ ನೀಡಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಹೇಳಿಕೆ ಆಧರಿಸಿ ಕೆ.ಹೆಚ್.ಮುನಿಯಪ್ಪನವರು ಸಚಿವ ಸ್ಥಾನದಿಂದ ಹಿಂದೆ ಸರಿದರೆ ಮಹಿಳಾ ಕೋಟದ ಅಡಿಯಲ್ಲಿ ಮಗಳಾದ ರೂಪಕಲಾ ಶಶಿಧರ್ ರವರು ಸಚಿವ ಸ್ಥಾನ ಸಿಗಲಿದೆ.

೩ ಬಾರಿ ಶಾಸಕರಾಗಿರುವ ಎಸ್.ಎನ್.ನಾರಾಯಣಸ್ವಾಮಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಮುಂದಿನ ಬಾರಿ ನೋಡೋಣ ಎಂದು ಹೈಕಮ್ಯಾಂಡ್ ಭರವಸೆ ನೀಡಿರುವುದು ಹಾಗೂ ರಾಷ್ಟಿçÃಯ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆಯವರ ಬಳಿ ಸಚಿವ ಸ್ಥಾನಕ್ಕಾಗಿ ಒತ್ತಾಯಪಡಿಸಿರುವುದರಿಂದ ಸಚಿವ ಸಂಪುಟ ವಿಸ್ತರಣೆಯಾದರೆ ನನಗೂ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

ಎಸ್.ಎನ್.ನಾರಾಯಣಸ್ವಾಮಿ ಮತ್ತು ರೂಪಕಲಾ ಇಬ್ಬರೂ ಸಚಿವ ಸಂಪುಟ ದರ್ಜೆಯ ನಿಗಮ ಸ್ಥಾನಗಳಲ್ಲಿ ಈಗಾಗಲೇ ಇದ್ದಾರೆ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಯಾವುದೇ ನಿಗಮ ಸ್ಥಾನವನ್ನು ಪಡೆದಿಲ್ಲ. ಬುಡಗ ಜಂಗಮ ಜಾತಿಯಲ್ಲಿ ಏಕೈಕ ಶಾಸಕ ಆಗಿರುವುದರಿಂದ ಮಂತ್ರಿ ಸ್ಥಾನ ನೀಡುವುದಾದರೆ ನನಗೂ ನೀಡಲಿ ಎಂದು ಒತ್ತಾಯಪಡಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಕೋಟದಲ್ಲಿ ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ನಸೀರ್ ಅಹ್ಮದ್ ಸಹ ಒತ್ತಾಯಪಡಿಸುತ್ತಿದ್ದಾರೆ.

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಎ.ಎಂ.ಎಫ್. ಅಧ್ಯಕ್ಷರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿನ್ನಲೆಯಲ್ಲಿ ನಂತ್ರಿ ಸ್ಥಾನ ಕೊಡಲಿ ಅಥವಾ ಕೆ.ಎಂ.ಎಫ್. ಅಧ್ಯಕ್ಷರ ಸ್ಥಾನ ನೀಡಲಿ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

ಮುಂದಿನ ತಿಂಗಳಲ್ಲಿ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುವ ಹಿನ್ನಲೆಯಲ್ಲಿ ಕೋಲಾರಕ್ಕೆ ಬಹುದಿನಗಳ ಕನಸಾಗಿರುವ ಸಚಿವ ಸ್ಥಾನ ಮತ್ತು ಜಿಲ್ಲಾ ಉಸ್ತುವಾರಿ ಸಿಗಲಿದೆಯೇ ಎಂಬುದು ಜಿಲ್ಲೆಯ ಜನತೆಯ ಆಶಯವಾಗಿದೆ. ಹಾಗೂ ಜಿಲ್ಲೆಯಲ್ಲಿ ಸಾಕಷ್ಟು ಜಲವಂತ ಸಮಸ್ಯೆಗಳು ಕಾಡುತ್ತಿದ್ದು ಶಾಸ್ವತ ನೀರಾವರಿ ಯೋಜನೆಗಳಾದ ಎತ್ತಿನಹೊಳೆ ನೀರು ಕೋಲಾರಕ್ಕೆ ತರುವುದು ಮತ್ತು ಕೆ.ಸಿ.ವ್ಯಾಲಿ ನೀರು ಎಲ್ಲಾ ಕೆರೆಗಳಿಗೂ ಹರಿಸಿ ೩ನೇ ಹಂತದ ಶುದ್ಧೀಕರಣ, ಕೋಲಾರದ ಎಪಿಎಂಸಿ ಮಾರುಕಟ್ಟೆ ವಿಸ್ತರಣೆ, ವರ್ತುಲ ರಸ್ತೆ ಸೇರಿದಂತೆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂಧಿಸುವAತಹ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು ಎಂಬುದು ಜಿಲ್ಲೆಯ ಜನತೆಯ ಒತ್ತಾಯವಾಗಿದೆ.

ಚಿತ್ರ ೦೬ ಕೆ.ಎಲ್.ಆರ್. ೦೨ : ಎಸ್.ಎನ್.ನಾರಾಯಣಸ್ವಾಮಿ ರವರ ಭಾವಚಿತ್ರ

ಚಿತ್ರ ೦೬ ಕೆ.ಎಲ್.ಆರ್. ೦೨ಎ : ರೂಪಕಲಾ ಶಶಿಧರ್‌ರವರ ಭಾವಚಿತ್ರ ರವರ ಭಾವಚಿತ್ರ

ಚಿತ್ರ ೦೬ ಕೆ.ಎಲ್.ಆರ್. ೦೨ಬಿ : ಕೊತ್ತೂರು ಜಿ.ಮಂಜುನಾಥ್ ರವರ ಭಾವಚಿತ್ರ ರವರ ಭಾವಚಿತ್ರ

ಚಿತ್ರ ೦೬ ಕೆ.ಎಲ್.ಆರ್. ೦೨ಸಿ : ನಜೀರ್ ಅಹ್ಮದ್ ರವರ ಭಾವಚಿತ್ರ ರವರ ಭಾವಚಿತ್ರ