ನ್ಯೂಸ್

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪತನ

ಎಚ್.ಡಿ.ಕೋಟೆ ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ನಡಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಸರಗೂರು ಪಟ್ಟಣದ ಕಡೆ ಪ್ರಯಾಣ ಬೆಳೆಸಿತು.

ಎಚ್.ಡಿ.ಕೋಟೆ: ಸುಳ್ಳು ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಪತನ ಆಗಲಿದೆ ಎಂದು ರಾಜ್ಯ ಬೀಜ ನಿಗಮದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಂತರಸಂತೆ ಡಿ.ಸುಂದರ್‌ದಾಸ್ ಭವಿಷ್ಯ ನುಡಿದರು.


ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಚುನಾವಣೆ ಸಂದರ್ಭದಲ್ಲಿ ದೇಶದ ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ಕೊಡುವ ಭರವಸೆಯನ್ನು ಬಿಜೆಪಿ ನೀಡಿತ್ತು. ಆದರೆ, ಹೆಚ್ಚು ಜನರು ಉದ್ಯೋಗ ಪಡೆಯುವ ಬದಲು ಇರುವ ಉದ್ಯೋಗವನ್ನು ಕಳೆದುಕೊಂಡರು. ಸ್ವಿಸ್ ಬ್ಯಾಂಕ್‌ನಲ್ಲಿ ಇರುವ ಕಪ್ಪು ಹಣವನ್ನು ವಾಪಸ್ ತಂದು ದೇಶದ ಪ್ರತಿಯೊಬ್ಬ ನಾಗರಿಕನ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿ ವಂಚಿಸಿದರು. ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗಿದೆ. ಕೂಲಿ ಕಾರ್ಮಿಕರು ಇದರಿಂದ ತತ್ತರಿಸಿ ಹೋಗುವಂತೆ ಮಾಡಿರುವುದೇ ಇವರ ಸಾಧನೆ ಎಂದು ವ್ಯಂಗ್ಯವಾಡಿದರು.


ಕಾರ್ಯಕ್ರಮದ ನಂತರ ಅಂಬೇಡ್ಕರ್ ಭವನದಿಂದ ಬೇಗೂರು ರಸ್ತೆ ಮೂಲಕ ಹ್ಯಾಂಡ್‌ಪೋಸ್ಟ್, ಜಕ್ಕಹಳ್ಳಿ, ದೇವಲಪುರ, ತುಂಬಸೋಗೆ ಮಾರ್ಗವಾಗಿ ಶಾಸಕರಾದ ಅನಿಲ್ ಚಿಕ್ಕಮಾದು, ಯತೀಂದ್ರ ಸಿದ್ದರಾಮಯ್ಯ ಹಾಗೂ ಮುಖಂಡರು ಕಾಲ್ನಡಿಗೆಯಲ್ಲಿ ಸರಗೂರು ಪಟ್ಟಣಕ್ಕೆ ತೆರಳಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಜಿ.ವಿ.ಶೀತರಾಮ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ನಂದಿನಿ ಚಂದ್ರಶೇಖರ್, ಎಚ್.ಸಿ.ಮಂಜುನಾಥ್, ಚಿಕ್ಕವೀರನಾಯಕ, ನರಸೀಪುರ ರವಿ, ಭಾಗ್ಯಲಕ್ಷ್ಮೀ, ಬಿ.ವಿ.ಬಸವರಾಜು, ಕಾಂಗ್ರೆಸ್ ಉಸ್ತುವಾರಿ ಕಾವೇರಪ್ಪ, ಮುಖಂಡರಾದ ತಮ್ಮಣ್ಣೇಗೌಡ, ಶಂಭುಲಿಂಗನಾಯಕ, ಈರೇಗೌಡ, ಶಿವಪ್ಪ ಕೋಟೆ, ಮೊಳೆಯೂರು ಆನಂದ್, ಪುರಸಭಾ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ರಾಜು ವಿಶ್ವಕರ್ಮ, ಮಧು ಕುಮಾರ್, ಪ್ರೇಮ್ಸಾಗರ್, ಸೋಮಶೇಖರ್, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಹೋಂಡಾ ನಯಾಜ್, ಕಂದೇಗಾಲ ಶಿವರಾಜು, ಸರಗೂರು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ಜ್ಯೋತಿ ಯೋಗೇಶ್, ಮರಿದೇವಯ್ಯ, ಕಾವೇರ, ಬಾಲಯ್ಯ, ಜಿನ್ನಹಳ್ಳಿ ರಾಜನಾಯಕ, ಅಂಕ ನಾಯಕ, ಕೊಮಾರೇಗೌಡ, ಹೈರಿಗೆ ಮಂಜು, ಜಕ್ಕಹಳ್ಳಿ ಮಲ್ಲೇಶ್ ಇದ್ದರು.