ಬೋನಿಗೆ ಬಿದ್ದಿರುವ ಚಿರತೆ (ಸಂಗ್ರಹ ಚಿತ್ರ) folder
ನ್ಯೂಸ್

‘ಮೀಸಲು ವನ್ಯಜೀವಿ ಕೇಡರ್’ ಸ್ಥಾಪನೆ

ಅರಣ್ಯಕ್ಕೆ ಅನುಕೂಲವಾಗುವಂತೆ ವಿಶೇಷ ಪಶುವೈದ್ಯರ ಪಡೆ ಸಿದ್ಧಪಡಿಸಲು ಪಶು ವೈದ್ಯಕೀಯ ಕಾಲೇಜುಗಳೊಂದಿಗೆ ಪಾಲುದಾರಿಕೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಬೆಂಗಳೂರು: ಅರಣ್ಯಕ್ಕೆ ಅನುಕೂಲವಾಗುವಂತೆ ವಿಶೇಷ ಪಶುವೈದ್ಯರ ಪಡೆ ಸಿದ್ಧಪಡಿಸಲು ಪಶು ವೈದ್ಯಕೀಯ ಕಾಲೇಜುಗಳೊಂದಿಗೆ ಪಾಲುದಾರಿಕೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಅರಣ್ಯ ಇಲಾಖೆಯಲ್ಲಿ ವನ್ಯಜೀವಿಗಳಿಗಾಗಿಯೇ ಮೀಸಲಾದ ಪಶುವೈದ್ಯರ ಕೊರತೆಯಿದ್ದು, ಈ ಪಾಲುದಾರಿಕೆ ಮಾಡಿಕೊಂಡರೆ ಅರಣ್ಯ ಇಲಾಖೆಯಿಂದ ರಾಜ್ಯದಲ್ಲಿ ‘ಮೀಸಲು ವನ್ಯಜೀವಿ ಕೇಡರ್’ ಸ್ಥಾಪನೆ ಮಾಡಲು ಸಹಕಾರಿಯಾಗಲಿದೆ. ಈ ಉದ್ದೇಶದಿಂದಲೇ ವೈದ್ಯರ ಪಡೆ ರಚಿಸುವ ನಿಟ್ಟಿನಲ್ಲಿ ಇಲಾಖೆ ಪ್ರಕ್ರಿಯೆ ಶುರು ಮಾಡಿದೆ.

ಅರಣ್ಯದಂಚಿನ ಪ್ರದೇಶಗಳಲ್ಲಿ ದನಕರು ಮತ್ತು ಸಾಕು ಪ್ರಾಣಿಗಳ ಮೇಲಿನ ದಾಳಿಯ ಮೌಲ್ಯಮಾಪನ, ವನ್ಯ ಜೀವಿಗಳ ಸಾವಿನ ಪ್ರಕರಣಗಳಲ್ಲಿ ಸಹಾಯ ಮಾಡಲು ವೈದ್ಯರ ತಂಡಗಳ ಅಗತ್ಯವಿದೆ. ಆದ್ದರಿಂದ ತರಬೇತಿ ಪಡೆದ ಪಶುವೈದ್ಯರು ಲಭ್ಯವಿದ್ದರೆ ಸಕಾಲದಲ್ಲಿ ಕಾರ್ಯ ನಿರ್ವಹಿಸಬಹುದು. ರೋಗಗಳ ಹರಡುವಿಕೆ ಸಂದರ್ಭದಲ್ಲಿ ವಿಶ್ಲೇಷಣೆಗಾಗಿ ಪ್ರಾಣಿಗಳ ರಕ್ತ ಸೇರಿ ವಿವಿಧ ಮಾದರಿಗಳನ್ನು ಸಂಗ್ರಹಿಸುವುದು, ಪ್ರಾಣಿಗಳ ರಕ್ಷಿಸಿ ಸ್ಥಳಾಂತರಿಸುವಾಗ ಅರಣ್ಯ ಅಧಿಕಾರಿ, ಸಿಬ್ಬಂದಿ ಜತೆ ಪಶುವೈದ್ಯರು ಸಮನ್ವಯತೆಯಿಂದ ನಿರ್ವಹಿಸಬೇಕಾದ ಜವಾಬ್ದಾರಿ ಕುರಿತು ವೈದ್ಯರ ಪಡೆ ವಿಶೇಷ ತರಬೇತಿ ನೀಡಲಿದೆ.